ವಿಜಯಪುರ : ‘ಪುಸ್ತಕಗಳಿಂದ ಮನೆ ಶೃಂಗಾರಗೊಂಡರೆ ಮಕ್ಕಳ ಮನಸ್ಸು ಜ್ಞಾನದಿಂದ ಶೃಂಗಾರವಾಗುತ್ತದೆ’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸದಸ್ಯ ಕುಶಾಲ ಬರಗೂರ ಹೇಳಿದರು.

ನಗರದ ಸ್ವಾತಂತ್ರ್ಯಯೋಧರ ಕಾಲೊನಿಯ ಸಾಹಿತಿ ಸಂಗಮೇಶ ಬದಾಮಿ ಅವರ ನಿವಾಸದಲ್ಲಿ ಶುಕ್ರವಾರ ಹಮ್ಮಿಕೊಂಡ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ದೇವರ ಮನೆಯಲ್ಲಿ ದೇವರು ಕಾಣುವ ಹಾಗೆ ಮನೆ ಪ್ರವೇಶಿಸಿದೊಡನೆ ಗ್ರಂಥಗಳು ಕಾಣಬೇಕು. ಅಂದಾಗ ಓದುವ ಸಂಸ್ಕೃತಿ ಬೆಳೆಯುತ್ತದೆ. ಮೊಬೈಲ್ ಗೀಳು ಕಡಿಮೆಯಾಗಿ ಓದುವ ಆಸಕ್ತಿ ಹೆಚ್ಚುತ್ತದೆ’ ಎಂದರು.

ಶಂಕರ ಬೈಚಬಾಳ ಮಾತನಾಡಿ, ‘ಹನ್ನೆರಡನೇ ಶತಮಾನದಲ್ಲಿ ವಚನಕ್ರಾಂತಿಗೆ ನಾಂದಿ ಹಾಡಿದ ಬಾಗೇವಾಡಿಯ ಬಸವಣ್ಣನವರ ವಚನಗಳು ನಮಗೆ ದಾರಿದೀಪ. ಅಂಥ ವಚನ ಗ್ರಂಥಗಳನ್ನು ಓದಿದರೆ ವ್ಯಕ್ತಿತ್ವ ವಿಕಸನವಾಗುತ್ತದೆ’ ಎಂದು ಹೇಳಿದರು.

ಸಾಹಿತಿ ಸಂಗಮೇಶ ಬದಾಮಿ ಮಾತನಾಡಿ, ‘ಮನೆಯಲ್ಲಿ ಪುಸ್ತಕಗಳಿದ್ದರೆ ಸಾಲದು. ಇಷ್ಟಪಟ್ಟು ಓದಬೇಕು. ಆಗ ಪುಸ್ತಕ ಸಂಸ್ಕೃತಿ ಉಳಿಯುತ್ತದೆ. ಅಂತರ್ಜಾಲದ ಹಾವಳಿಯಲ್ಲಿ ಓದನ್ನು ನಿರ್ಲಕ್ಷಿಸದೆ ಓದು ನಮ್ಮ ಗುರಿಯಾಗಬೇಕು’ ಎಂದರು.

ಮಲ್ಲಿಕಾರ್ಜುನ ಅಮರಣ್ಣವರ, ಬಸವರಾಜ ಸಾಲವಾಡಗಿ, ಪ್ರಾಧಿಕಾರದ ಸದಸ್ಯ ಮುರುಗೇಶ ಸಂಗಮ, ಎಸ್.ಡಿ.ಜೋಶಿ, ಸಿದ್ದು ಯರನಾಳ ಸಾಕ್ಷಿ ಚವ್ಹಾಣ ಬಸವರಾಜ ಒಂಟಗೋಡಿ ಹರ್ಷ ಮಲಘಾಣ, ಅಂಬಾದಾಸ ಚವ್ಹಾಣ, ವಿದ್ಯಾಲಕ್ಷ್ಮಿ ಬದಾಮಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-26-285154722

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.