ವಿಜಯಪುರ: ವಿಜಯಪುರದಲ್ಲಿ ಇದೇ ತಿಂಗಳು 10 ರಿಂದ 14ರವರೆಗೆ ‘ಬುದ್ಧ, ಬಸವ, ಅಂಬೇಡ್ಕರ್ ಪುಸ್ತಕ ಮೇಳ’ ನಡೆಯಲಿದೆ. ಮೇ ಸಾಹಿತ್ಯ ಮೇಳ, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ನಡೆಯುವ ಈ ಮೇಳದಲ್ಲಿ ರಾಜ್ಯದ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಾಶಕರು, ಓದುಗರು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುವರು.

ಪ್ರತಿಷ್ಠಿತ ಪುಸ್ತಕ ಪ್ರಕಾಶನ ಸಂಸ್ಥೆ, ವಿವಿಧ ವಿಶ್ವವಿದ್ಯಾಲಯಗಳ ಪ್ರಸಾರಂಗಗಳ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ನಡೆಯುವ ಈ ಮೇಳದಲ್ಲಿ ನಾಡಿನ ಹೆಸರಾಂತ ಲೇಖಕರೊಂದಿಗೆ ಸಂವಾದ, ವಿದ್ಯಾರ್ಥಿಗಳ ಮಾತು, ಕವಿಗೋಷ್ಠಿ, ಪತ್ರಕರ್ತರ ಅನುಭವದ ನುಡಿಗಳು ಇರಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳೂ ಕೂಡ ನಡೆಯಲಿವೆ.

‘ರಾಜ್ಯ ಸರ್ಕಾರ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಸಂಘಟನೆಗಳು ಆಯೋಜಿಸುವ ಸಾಂಪ್ರದಾಯಕ ಪುಸ್ತಕ ಮೇಳಕ್ಕೂ ವಿಜಯಪುರದಲ್ಲಿ ಆಯೋಜಿಸುತ್ತಿರುವ ಬುದ್ಧ, ಬಸವ, ಅಂಬೇಡ್ಕರ್ ಪುಸ್ತಕ ಮೇಳಕ್ಕೂ ವ್ಯತ್ಯಸವಿದೆ’ ಎಂದು ಪುಸ್ತಕ ಮೇಳದ ಆಯೋಜಕ ಬಸವರಾಜ ಸೂಳಿಬಾವಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಹುತೇಕ ಪುಸ್ತಕ ಮೇಳದಲ್ಲಿ ಎಲ್ಲ ಬಗೆಯ ಲೇಖಕರ, ಎಲ್ಲ ವಿಷಯಗಳು ಒಳಗೊಂಡ ಪುಸ್ತಕಗಳ ಪ್ರದರ್ಶನ, ಮಾರಾಟಕ್ಕೆ ಅವಕಾಶ ಇರುತ್ತದೆ. ಆದರೆ, ಈ ಮೇಳದಲ್ಲಿ ಜೀವಪರ, ಮನುಷ್ಯ ಪರ, ಸೌಹಾರ್ದ ಮೂಡಿಸುವ, ಪ್ರಗತಿಪರವಾದ ಆಯ್ದ ಪುಸ್ತಕಗಳ ಪ್ರದರ್ಶನ, ಮಾರಾಟಕ್ಕೆ ಮಾತ್ರ ಅವಕಾಶ ಇರಲಿದೆ’ ಎಂದರು.

ರಿಯಾಯಿತಿ ಮಾರಾಟ: ‘ಪುಸ್ತಕ ಮೇಳದಲ್ಲಿ ಪಾಲ್ಗೊಳ್ಳುವ ಪ್ರಕಾಶಕರಿಂದ ಅಲ್ಪ ಮೊತ್ತದ ಶುಲ್ಕ ಸಂಗ್ರಹಿಸಲಾಗುವುದು, ಪ್ರಕಾಶಕರಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ರಿಯಾಯಿತಿ ದರದಲ್ಲಿ ಪುಸ್ತಕಗಳ ಮಾರಾಟವಿದೆ’ ಎಂದು ಪುಸ್ತಕ ಮೇಳದ ಸಂಘಟಕ ಅನಿಲ ಹೊಸಮನಿ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-21-903794105

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.