ವಿಜಯಪುರ (ದೇವನಹಳ್ಳಿ): ವಿದ್ಯಾರ್ಥಿಗಳು ದೇಶದ ಭವಿಷ್ಯವಾಗಿದ್ದು, ಪ್ರತಿಯೊಬ್ಬರಲ್ಲೂ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ದೇವನಹಳ್ಳಿ ಜಿಲ್ಲಾ 5ನೇ ಸತ್ರ ನ್ಯಾಯಾಲಯದ ನ್ಯಾಯಾಧೀಶ ಲಕ್ಷ್ಮಣ ರಾಮು ಕುರಾಣಿ ತಿಳಿಸಿದರು.

ಇಲ್ಲಿನ ಸಮೀಪದ ನಾರಾಯಣಪುರ ಗ್ರಾಮದ ಶ್ರೀಸಾಯಿ ಕಾನೂನು ಕಾಲೇಜಿನಲ್ಲಿ ಸಾಯಿ ಜ್ಞಾನಗಂಗಾ ಎಜುಕೇಶನ್ ಟ್ರಸ್ಟ್ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಸಹಯೋಗದಲ್ಲಿ ನಡೆದ ವಿಶ್ವ ತಂಬಾಕು ನಿಷೇಧ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕ್ಷಣಿಕ ಖುಷಿಗಾಗಿ ಯುವಪೀಳಿಗೆ ತಂಬಾಕು ವ್ಯಸನಗಳಿಗೆ ದಾಸರಾಗುತ್ತಿದ್ದು, ಚಲನಚಿತ್ರ ಮಂದಿರಗಳಲ್ಲಿ ಪ್ರತಿ ಪ್ರದರ್ಶನದ ವೇಳೆ ತಂಬಾಕಿನ ವಿರುದ್ಧ ಜಾಗೃತಿ ಮೂಡಿಸಿದರೂ ಯುವಜನತೆ ಎಚ್ಚೆತ್ತುಕೊಳ್ಳದಿರುವುದು ಆತಂಕಕಾರಿ ವಿಷಯ ಎಂದು ದೇವನಹಳ್ಳಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾದ ಮುನಿರಾಜು ಕಳವಳ ವ್ಯಕ್ತಪಡಿಸಿದರು.

ದೇಶದಲ್ಲಿ ತಂಬಾಕು ಉತ್ಪನ್ನಗಳ ಮೇಲೆ ನಿರಂತರವಾಗಿ ತೆರಿಗೆ ಹೆಚ್ಚಿಸುವ ಮೂಲಕ, ಅದು ಯುವಜನತೆಯ ಕೈಗೆಟುಕದಂತೆ ಮಾಡಬೇಕು. ಆ ಮೂಲಕ ದೇಶದಲ್ಲಿ ಸಂಪೂರ್ಣ ತಂಬಾಕು ನಿಷೇಧ ಜಾರಿಗೆ ತರಬೇಕು ಎಂದು ತಾಲೂಕು ಕಾನೂನು ಸೇವೆಗಳ ಸಮಿತಿಯ ಪ್ಯಾನೆಲ್ ನ್ಯಾಯವಾದಿ ಎಂ.ಮೂರ್ತಿ ಹೇಳಿದರು.

ಆಸ್ತಿ, ಅಂತಸ್ತಿಗಿಂತ ಆರೋಗ್ಯವೇ ನಿಜವಾದ ಸಂಪತ್ತು. ಉತ್ತಮ ಭವಿಷ್ಯಕ್ಕಾಗಿ ಯುವಜನತೆ ತಂಬಾಕಿನಿಂದ ದೂರವಿರಬೇಕು ಎಂದು ಉಪನ್ಯಾಸಕ ಶ್ರೀನಿವಾಸ ಮೂರ್ತಿ ತಿಳಿಸಿದರು.

ತಾಲ್ಲೂಕು ಕಾನೂನು ಸೇವೆಗಳ ಸಮಿತಿಯ ಕಾರ್ಯದರ್ಶಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಎನ್.ವೆಂಕಟೇಶ್, ಶ್ರೀಸಾಯಿ ಜ್ಞಾನಗಂಗಾ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಬಿ.ಮಂಜುನಾಥ್, ಪ್ರಾಂಶುಪಾಲ ಸದಾಶಿವ ಕಾಂಬ್ಳೆ, ತಾಲೂಕು ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಮುನೇಗೌಡ, ವಕೀಲರಾದ ವೆಂಕಟೇಶ್, ಮೋಹನ್, ಚೇತನ್, ಹಾಗೂ ಉಪನ್ಯಾಸಕರಾದ ಭಾಗ್ಯಶ್ರೀ, ಕೇಶವಮೂರ್ತಿ, ರಾಘವೇಂದ್ರ, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-15-1261015354

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.