ವಿಜಯಪುರ : ‘ಸಾಮ್ರಾಟ ಅಶೋಕನ ಆಡಳಿತ ಪೂರ್ವದಲ್ಲಿ ಗಟ್ಟಿಯಾದ ವಸ್ತುಗಳ ಮೇಲೆ ಬರವಣಿಗೆ ನಿಷೇಧವಾಗಿತ್ತು, ಆದರೆ ಗ್ರೀಕ್ ಹಾಗೂ ಪರ್ಷಿಯಾ ದೇಶದ ಪ್ರಭಾವದ ಫಲವಾಗಿ ಸಾಮ್ರಾಟ ಅಶೋಕ ಬಂಡೆಗಲ್ಲುಗಳ ಮೇಲೆ ಶಾಸನ ಬರೆಯಲು ಆರಂಭಿಸಿದ’ ಎಂದು ಶಾಸನ ತಜ್ಞ ದೇವರಕೊಂಡ ರೆಡ್ಡಿ ಹೇಳಿದರು.

ವಿಜಯಪುರದ ಚೇತನಾ ಕಾಲೇಜು ಸಭಾಂಗಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವಿಜಯಪುರ ಜಿಲ್ಲಾ ಘಟಕದ ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ `ಸಾಮ್ರಾಟ ಅಶೋಕನ ಶಾಸನಗಳು' ವಿಷಯದ ಕುರಿತು ಸಮಗ್ರವಾದ ಐತಿಹಾಸಿಕ ವಿವರಣೆಗಳನ್ನು ನೀಡಿ ಮಾತನಾಡಿದರು.

‘ಸಾಮ್ರಾಟ ಅಶೋಕನ ಶಾಸನಗಳು ಸಹ ಅವನಷ್ಟೇ ಪ್ರಸಿದ್ಧಿ ಪಡೆದಿವೆ, ಅಶೋಕ ನಾಲ್ಕು ಭಾಷೆಗಳು ಹಾಗೂ ಮೂರು ಲಿಪಿಗಳಲ್ಲಿ ಶಾಸನ ಬರೆಸಿದ್ದಾನೆ, ಸಾಮ್ರಾಟ ಅಶೋಕನಿಗಿಂತ ಪೂರ್ವದಲ್ಲಿ ಭಾರತದಲ್ಲಿ ಗಟ್ಟಿಯಾದ ವಸ್ತುಗಳ ಮೇಲೆ ಬರವಣಿಗೆ ನಿಷಿದ್ಧವಾಗಿತ್ತು, ಗಟ್ಟಿಯಾದ ವಸ್ತುಗಳ ಮೇಲೆಯೂ ಶಾಸನ ಬರೆಯಲು ಅಶೋಕ ಅಣಿಯಾದ ಪರಿಣಾಮ ಬಂಡೆಗಲ್ಲುಗಳ ಮೇಲೆ ಶಾಸನಗಳ ಬರವಣಿಗೆ ಆರಂಭಗೊಂಡಿತು’ ಎಂದರು.

‘ಕರ್ನಾಟಕದಲ್ಲಿ ಒಟ್ಟು ಏಳು ಅಶೋಕನ ಶಾಸನಗಳು ಸಿಕ್ಕಿವೆ. ವಿಶೇಷವೆಂದರೆ ಉಳಿದ ಕಡೆಗಳಲ್ಲಿ ದೇವನಾಂಪ್ರಿಯ ಪ್ರಿಯದರ್ಶಿ ಅಂತಿದ್ದರೆ ಕರ್ನಾಟಕ ಮಸ್ಕಿ ಸೇರಿದಂತೆ ಅನೇಕ ಕಡೆ ದೊರದಕಿದ ಶಾಸನಗಳಲ್ಲಿ ದೇವನಾಪ್ರಿಯ ಪ್ರಿಯದರ್ಶಿ ರಾಜ ಅಶೋಕ ಅಂತಿದೆ’ ಎಂದು ಶಾಸನಗಳ ಸಾರವನ್ನು ಉಲ್ಲೇಖಿಸಿದರು.

ಅಭಾಸಾಪ ಜಿಲ್ಲಾ ಘಟಕದ ಅಧ್ಯಕ್ಷ ವಿವೇಕ ಕುಲಕರ್ಣಿ, ಆನಂದ ಗೋಡಸೆ, ಸುಕಾಂತ ಕುಲಕರ್ಣಿ, ಭಾರತಿ, ಗೀತಾ ವೈದ್ಯ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-26-888194631

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.