ವಿಜಯಪುರ: ‘ನಾವು ಮಾಡಿದ ನಿಷ್ಠೆ, ಪ್ರಾಮಾಣಿಕತೆ, ನಿಸ್ವಾರ್ಥ ಸತ್ಕಾರ್ಯಗಳು ಆಪತ್ಕಾಲದಲ್ಲಿ ನಮ್ಮನ್ನು ಕಾಪಾಡುತ್ತವೆ’ ಎಂದು ಇಂಗ್ಲೆಂಡಿನ ಎಡಿನ್ಬರ್ಗ್ ವಿಶ್ವವಿದ್ಯಾಲಯದ ಡಾ.ಗೀತಾ ಶೆಟ್ಟಿ ಹೇಳಿದರು.

ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸೆ ವಿಭಾಗದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಕ್ಯಾನ್ಸರ್ ನೊಂದಿಗೆ ಹೋರಾಟ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮೂರು ವರ್ಷಗಳ ಹಿಂದೆ ಸಾಮಾನ್ಯ ಬೇಧಿ, ಅತಿಸಾರದಿಂದ ಶುರುವಾದ ಕಾಯಿಲೆ ಉಲ್ಬಣಗೊಳ್ಳುತ್ತ, ಲಿವರ್ ವೈಫಲ್ಯ ಹಂತ ತಲುಪಿತ್ತು. ಎಷ್ಟೇ ನವೀನ ಮಾದರಿಯ ರೋಗ ಪತ್ತೆಯ ವಿಧಾನಗಳಿಂದಲೂ ಪ್ರಾಥಮಿಕ ಕಾರಣ ತಿಳಿಯಲು ತಿಂಗಳುಗಳೇ ಬೇಕಾದವು. ಅತೀ ವಿರಳವಾದ ಲಿವರ್ ಮೆಟಾಸ್ಟಾಟಿಕ್ ಕಾರ್ಸಿನಾಯ್ಡ ಟ್ಯುಮರ್ ನಿಂದ ಬಳಲುತ್ತಿದ್ದೆ. ಈ ಸಂದರ್ಭದಲ್ಲಿ ನನ್ನ ಪತಿ, ಪರಿವಾರ, ಸ್ನೇಹಬಳಗದ ತಮ್ಮ ಕಷ್ಟಕಾಲದಲ್ಲಿಯ ಸೇವೆ ಸಹಕಾರ ಅನನ್ಯವಾಗಿತ್ತು. ಲಿವರ್ ಕಸಿ ಮತ್ತು ಇತರ ಚಿಕಿತ್ಸೆಗಳನ್ನು ಭಾರತದಲ್ಲಿಯೇ ಪಡೆದಿದ್ದು, ಭಾರತೀಯ ವೈದ್ಯಕೀಯ ಚಿಕಿತ್ಸೆ ವಿಶ್ವದಲ್ಲೇ ಶ್ರೇಷ್ಠವಾಗಿದೆ ಎಂದು ಹೇಳಿದರು.

ಶಸ್ತ್ರ ಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಕೋಟೆಣ್ಣವರ, ಪ್ರಾಧ್ಯಾಪಕಿ ಡಾ.ವಿಜಯಾ.ಪಾಟೀಲ ಮಾತನಾಡಿದರು. ಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲ್ ಡಾ.ತೇಜಸ್ವಿನಿ ವಲ್ಲಭ, ಹಿರಿಯ ಉಪ ಪ್ರಾಚಾರ್ಯ ಡಾ.ವಿಜಯಕುಮಾರ ಟಿ. ಕಲ್ಯಾಣಪ್ಪಗೋಳ, ವೈದ್ಯಕೀಯ ಅಧೀಕ್ಷಕ ಡಾ.ಸಂಜೀವ ಬೆಂಟೂರ, ಆರ್ ಆ್ಯಂಡ್ ಡಿ ವಿಭಾಗದ ಡೀನ್ ಡಾ.ಎಂ.ಎಂ. ಪಾಟೀಲ, ಎಸ್.ಎ.ಆರ್.ಎಸ್ ಚೇರಮನ್ ಡಾ.ಲತಾದೇವಿ ಎಚ್.ಟಿ, ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘದ ಕಾರ್ಯದರ್ಶಿ ಡಾ.ರಮಾಕಾಂತ ಬಳೂರಕರ, ಜಿಲ್ಲಾಸ್ಪತ್ರೆಯ ಹಿರಿಯ ಶಸ್ತ್ರ ಚಿಕಿತ್ಸಕ ಡಾ.ಆನಂದ ಝಳಕಿ, ಡಾ.ವಿಜಯ.ಕಟ್ಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-26-1048771509

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.