ಚಡಚಣ: ಅನಾದಿ ಕಾಲದಿಂದಲೂ ಭಾರತದಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನವಿದೆ. ಭಾರತೀಯ ಸಂಸ್ಕೃತಿಯಲ್ಲಿ ಗುರು- ಶಿಷ್ಯ ಪರಂಪರೆ ಶ್ರೇಷ್ಠ ಭಾವನಾತ್ಮಕ ಸಂಬಂಧ ಹೊಂದಿದೆ ಎಂದು ಇಂಡಿ ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ರವಿಕುಮಾರ ಅರಳಿ ಹೇಳಿದರು.

ಸಮೀಪದ ಹಲಸಂಗಿ ಗ್ರಾಮದ ಅರವಿಂದ ಪ್ರೌಢ ಶಾಲೆಯಲ್ಲಿ 2004 –05ನೇ ಸಾಲಿನಲ್ಲಿ ಎಸ್.ಎಸ್.ಎಲ್ ಸಿ ವಿದ್ಯಾರ್ಥಿಗಳು ಭಾನುವಾರ ಆಯೋಜಿಸಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಹಿತಿ ಸುಮಿತ್ ಮೇತ್ರಿ ಮಾತನಾಡಿದರು.

ಅರವಿಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅರವಿಂದ ಮನಮಿ ಮಾತನಾಡಿ, 21 ವರ್ಷಗಳ ನಂತರ ಸಹಪಾಠಿಗಳೆಲ್ಲ ಒಂದೆಡೆ ಸೇರಿ ತಾವು ಕಲಿಸಿದ ಗುರುಗಳಿಗೆ ಸ್ಮಾನಿಸಿ, ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಶಾಲಾ ಹಳೆಯ ವಿದ್ಯಾರ್ಥಿ ಮಹಾದೇವ ಮಡ್ಡಿ ಮಾತನಾಡಿ, ಸ್ನೇಹಿತರು ಒಂದೆಡೆ ಸೇರಿ ತಮ್ಮ ಬಾಲ್ಯದ ನೆನಪುಗಳನ್ನು ಮೆಲಕು ಹಾಕುವ ಸುಯೋಗ ಕೂಡಿಬಂದಿದ್ದು ನಮ್ಮೆಲ್ಲರ ಸೌಭಾಗ್ಯ ಎಂದರು.

ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಿ.ಬಿ.ತಿಕೋಟಿ ಮಾತನಾಡಿ, ಗುರು-ಶಿಷ್ಯ ಪರಂಪರೆಯನ್ನು ಶ್ಲಾಘಿಸಿದರು.

ಸಾನ್ನಿಧ್ಯ ವಹಿಸಿದ ತಡವಲಗಾ ಹಿರೇಮಠದ ಅಭಿನವರಾಚೋಟೇಶ್ವರ ಶಿವಾಚಾರ್ಯ ಮಾತನಾಡಿದರು.

ನಿವೃತ್ತ ಶಿಕ್ಷಕರಾದ ಸಿದ್ಧಾರಾಮ ಖೇಡಗಿ, ಮಲ್ಲಪ್ಪ ಮದಭಾವಿ, ಬಾಲಾಸಾಹೇಬ ಮನವಿ, ಶಿಕ್ಷಕರಾದ ಚಂದ್ರಶೇಖರ ಬಗಲಿ, ರಮೇಶ ನಾಯಕ್, ಅಲ್ಲಮಪ್ರಭು ಕರ್ಜಗಿ, ಮಲ್ಲಿಕಾರ್ಜುನ ಗಾಯಕವಾಡ, ಸುವರ್ಣಬಾಯಿ ವಾಲಿಕಾರ ಅವರನ್ನು ಗೌರವಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-26-296417888

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.