ವಿಜಯಪುರ : ಸಾಹಿತ್ಯ, ಶಿಕ್ಷಣದ ಮೂಲಕ ಗಡಿ ಭಾಗದಲ್ಲಿ ಕನ್ನಡದ ಹೂವನ್ನು ಅರಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಗಡಿನಾಡು ಚೇತನ ಪ್ರಶಸ್ತಿಗೂ ಭಾಜನರಾಗಿರುವ ಎನ್.ಆರ್.ಕುಲಕರ್ಣಿ ಅವರನ್ನು ಪುಸ್ತಕಗಳ ಮೂಲಕ ತುಲಾಭಾರ ಮಾಡಿ ಅಪೂರ್ವ ರೀತಿಯಲ್ಲಿ ಅವರ ಸೇವೆಯನ್ನು ಗೌರವಿಸಲಾಯಿತು.

ನಗರದ ಅನಂತ ಲಕ್ಷ್ಮೀ ಮಂಗಲ ಕಾರ್ಯಾಲಯದಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಅವರ ಜೀವನ ಸಾಧನೆ, ಗಡಿ ಭಾಗದಲ್ಲಿ ಅಪೂರ್ವ ಸಾಹಿತ್ಯ ಸೇವೆಯನ್ನು ತಿಳಿಸುವ ಅಭಿನಂದನಾ ಗ್ರಂಥ ಸಹ ಬಿಡುಗಡೆಗೊಂಡಿತು.

ಗ್ರಂಥ ಬಿಡುಗಡೆಗೊಳಿಸಿದ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಂ.ಎಸ್. ಮದಭಾವಿ ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸುವುದು ನಮ್ಮ ಪರಂಪರೆ. ಮಾಸ್ತರ ಎಂದು ಸಂಬೋಧಿಸುವುದಕ್ಕೆ ಒಂದು ಗೌರವ ಸೂಚಕವಾಗಿದೆ ಹಾಗೂ ಸರ್ವಶ್ರೇಷ್ಠವಾಗಿದೆ. ಈ ಹಿನ್ನೆಲೆಯಲ್ಲಿ ಬೇಂದ್ರೆ-ಸಿಂಪಿ ಲಿಂಗಣ್ಣನವರನ್ನು ಮಾಸ್ತರ ಎಂದೇ ಜನಜನೀತರಾಗಿರುವರು. ಪ್ರಾಥಮಿಕ ಶಾಲಾ ಶಿಕ್ಷಕರು ಜಿಲ್ಲೆಯಲ್ಲಿ ಮಾಡಿದ ಸೇವೆ ಅಪಾರ. ಕುಲಕರ್ಣಿ ಅವರು ಜಾತ್ಯಾತೀತತೆಯನ್ನು ಅಪ್ಪಿಕೊಂಡ ವ್ಯಕ್ತಿಯಾಗಿದ್ದು, ಅವರ ಹೃದಯ ವೈಶಾಲ್ಯತೆ ವರ್ಣನಾತೀತ ಎಂದರು.

ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭೆ ಅಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿದರು.

ಎನ್.ಆರ್. ಕುಲಕರ್ಣಿ ಅವರು ರಚಿಸಿದ `ಹಣ್ಣೆಲೆಯ ಹಸಿರು ನೆನಪುಗಳು' ಗ್ರಂಥ ಕುರಿತು ಉಪನ್ಯಾಸಕ ಪ್ರೋ ಯು.ಎನ್. ಕುಂಟೋಜಿ ಮಾತನಾಡಿದರು. ಪಂ.ಪ್ರಕಾಶಾಚಾರ್ಯ ಮದಭಾವಿ, ಡಾ.ಜಿ.ಡಿ. ಕೊಟ್ನಾಳ, ವಿ.ಎಸ್. ಖಾಡೆ, ಎಸ್.ಬಿ. ಬಾಗೇವಾಡಿ, ವಿದ್ಯಾವತಿ ಅಂಕಲಗಿ, ಸುಜಾತಾ ಪಟ್ಟಣಶೆಟ್ಟಿ, ಪಂಡಿತರಾವ ಪಾಟೀಲ, ಜಿ.ಎಸ್.ಕುಲಕರ್ಣಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-26-1105812851

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.