ಹೊರ್ತಿ: ‘ಮಕ್ಕಳನ್ನು ಕೇವಲ ಒಳ್ಳೆಯ ಶಾಲೆಗೆ ಸೇರಿಸಿದರೆ ಪಾಲಕರ ಜವಾಬ್ದಾರಿ ಮುಗಿಯುವುದಿಲ್ಲ. ಅವರ ದೈನಂದಿನ ಚಟುವಟಿಕೆಗಳನ್ನು ಗಮನಿಸಿ, ಅವರಲ್ಲಿ ನಾಗರಿಕ ಪ್ರಜ್ಞೆ ಹಾಗೂ ಸಂಸ್ಕಾರ ಬೆಳೆಸುವುದು ತಂದೆ-ತಾಯಂದಿರ ಆದ್ಯ ಕರ್ತವ್ಯವಾಗಿದೆ’ ಎಂದು ಮೇಜರ್ ಎಸ್.ಸಿ. ಆನಂದ ಹೇಳಿದರು.

ಸಮೀಪದ ವಿಜಯಪುರ ತಾಲ್ಲೂಕಿನ ಕನ್ನೂರಿನ ಶಾಂತಿ ಕುಟೀರ ಆಶ್ರಮದಲ್ಲಿ ಶಾಂತಿ ಕುಟಿಞರ ಟ್ರಸ್ಟ್ ಹಾಗೂ ಸಂಡೂರು ಶ್ರೀಶೈಲೇಶ್ವರ ವಿದ್ಯಾಕೇಂದ್ರ ಮತ್ತು ಭಾರತೀಯ ಸುರಾಜ್ಯ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಉಚಿತ ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಬೇಸಿಗೆ ಶಿಬಿರದಲ್ಲಿ ಪಾಲಕರ ಸಭೆಯಲ್ಲಿ ಮಾತನಾಡಿದರು.

ಮಕ್ಕಳು ನಮ್ಮನ್ನು ಅನುಸರಿಸುತ್ತಾರೆ. ಮಕ್ಕಳು ನಾವು ಹೇಳಿದ್ದನ್ನು ಕೇಳುವುದಕ್ಕಿಂತ ಹೆಚ್ಚಾಗಿ, ಪಾಲಕರ ನಡವಳಿಕೆ ಯನ್ನು ನೋಡಿ ಕಲಿಯುತ್ತಾರೆ. ಪಾಲಕರು ಮೊದಲು ತಮ್ಮ ನಡವಳಿಕೆಯನ್ನು ಆದರ್ಶಪ್ರಾಯವಾಗಿಸಿಕೊಳ್ಳಬೇಕು. ಮಕ್ಕಳ ಮುಂದೆ ಮೊಬೈಲ್ ಬಳಸುವುದನ್ನು ಬಿಟ್ಟು ಪುಸ್ತಕ ಹಿಡಿಯುವ ಹವ್ಯಾಸ ಬೆಳೆಸಿಕೊಳ್ಳಿ’ ಎಂದು ಹೇಳಿದರು.

ಸಂಡೂರು ಶ್ರೀಶೈಲೇಶ್ವರ ವಿದ್ಯಾಕೇಂದ್ರ ಆಡಳಿತಾಧಿಕಾರಿ ಕುಮಾರ್ ಎಸ್.ನಾನಾವಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಾಂತಿ ಕುಟೀರ ಆಶ್ರಮದ ನಿವಾಸಿಗಳಾದ ವಿದ್ಯಾ ತಾಯಿ, ಜ್ಞಾನಮಾಲ, ಕ್ಷಮಾಶಾಂತಿ, ಶ್ರೀನಿವಾಸ ಕುಲಕರ್ಣಿ, ಡೊಮನಾಳ ಗ್ರಾಮದ ಶಿಕ್ಷಕ ಪ್ರಕಾಶ ಪಾಟೀಲ್, ಸಂಡೂರಿನ ಶಿಕ್ಷಕರಾದ ಅಶೋಕ ಜಿ ಎಂ.ವೀರೇಂದ್ರ ಕುಮಾರ್, ವಿಜಯಪುರದ ಚಾಣಕ್ಯ ಕರಿಯರ್ ಅಕಾಡೆಮಿಯ ಎನ್ ಎಂ.ಬಿರಾದಾರ, ಶ್ರೀಕೃಷ್ಣ ಸಂಪಗಾಂವಕರ ಮಹಾರಾಜರು ಇದ್ದರು. ರಾಮರಾಜ್ಯ ಕಲಾ ಮೇಳದ ಅಧ್ಯಕ್ಷ ಶ್ರೀಕೃಷ್ಣ ಸಂಪಗಾಂವಕರ ಪರಿಚಯಿಸಿ, ಸ್ವಾಗತಿಸಿದರು. ವಿಜಯಪುರದ ಚಾಣಕ್ಯ ಕರಿಯರ್ ಅಕಾಡಮಿಯ ಎನ್ ಎಂ.ಬಿರಾದಾರ ಕಾರ್ಯಕ್ರಮ ಪ್ರಾಯೋಜಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-26-1687065341

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.