ವಿಜಯಪುರ: ಇಲ್ಲಿನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪ್ರವೇಶಾತಿ, ಮಾರ್ಗದರ್ಶನ ಮತ್ತು ಪದವಿ ಪ್ರದಾನ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ, ಗಂಭೀರ ಅಕ್ರಮ ಮತ್ತು ಭ್ರಷ್ಟಾಚಾರ ನಡೆದಿರುವುದನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿ ಆವರಣದ ಎದುರು ಗುರುವಾರ ಪ್ರತಿಭಟನೆ ನಡೆಸಿದ ಎಎಪಿ ಕಾರ್ಯಕರ್ತರು, ಪಿಎಚ್.ಡಿ. ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕಗೊಳಿಸಿ, ಯು.ಜಿ.ಸಿ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ವಿದ್ಯಾರ್ಥಿನಿಯರ ಮೇಲಿನ ಶೋಷಣೆಯನ್ನು ತಡೆಯಲು ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕು ಮತ್ತು ದೂರುಗಳಿಗೆ ತ್ವರಿತ ಪರಿಹಾರ ಒದಗಿಸಬೇಕು. ಅನರ್ಹ ಅಭ್ಯರ್ಥಿಗಳಿಗೆ ನೀಡಲಾದ ಪಿ.ಎಚ್.ಡಿ. ಪದವಿಗಳನ್ನು ಪರಿಶೀಲಿಸಿ, ಅಕ್ರಮಗಳಿದ್ದಲ್ಲಿ ಅಂತಹ ಪದವಿಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಎಎಪಿ ಜಿಲ್ಲಾ ಘಟಕದ ಅಧ್ಯಕ್ಷ ಭೋಗೇಶ್ ಸೋಲಾಪುರ್ ಮಾತನಾಡಿ, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿನಿಯರಿಂದ ಬಂದಿರುವ ದೂರುಗಳ ಪ್ರಕಾರ ಪಿಎಚ್.ಡಿ ಪ್ರಕ್ರಿಯೆಯಲ್ಲಿ ಯು.ಜಿ.ಸಿ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ, ಅನರ್ಹ ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ ಮತ್ತು ವಿದ್ಯಾರ್ಥಿನಿಯರ ಮೇಲೆ ಶೋಷಣೆ ನಡೆಯುತ್ತಿರುವುದು ಖಂಡನೀಯ ಎಂದರು.

‘ಶೈಕ್ಷಣಿಕ ಕ್ಷೇತ್ರದಲ್ಲಿ ನಿಯಮ ಉಲ್ಲಂಘನೆ ಆಗುತ್ತಿದ್ದರೆ ಅದು ಸಮಾಜಕ್ಕೆ ದೊಡ್ಡ ಹಾನಿ. ಪಿಎಚ್.ಡಿ ಅಂದರೆ ಮೂಲ ಸಂಶೋಧನೆ, ಗುಣಮಟ್ಟ, ಮತ್ತು ನೈತಿಕತೆಯ ಸಂಕೇತ. ಅದನ್ನು ಅಕ್ರಮ ಮಾರ್ಗಗಳಿಂದ ಪಡೆಯುವುದು ಅಥವಾ ಅನುಮತಿಸುವುದು ಇಡೀ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಕುಗ್ಗಿಸುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ವಿಶ್ವವಿದ್ಯಾಲಯಗಳು ಸ್ವಾಯತ್ತತೆ ಹೊಂದಿರಬೇಕು. ಆದರೆ, ಅದು ನಿಯಮಗಳನ್ನು ಮೀರಲು ಅವಕಾಶ ನೀಡುವಂತಿಲ್ಲ. ರಾಜ್ಯಪಾಲರು ಅನುಮೋದಿಸಿದ ನಿಯಮಗಳನ್ನು ವಿಶ್ವವಿದ್ಯಾಲಯವೇ ಉಲ್ಲಂಘಿಸುತ್ತಿದೆ ಎಂಬ ಆರೋಪ ಬಂದರೆ, ಇದು ತನಿಖೆಗೆ ಅರ್ಹವಾಗಿದೆ‘ ಎಂದು ಒತ್ತಾಯಿಸಿದರು.

‘ಮಹಿಳಾ ವಿಶ್ವವಿದ್ಯಾಲಯವು ವಿದ್ಯಾರ್ಥಿನಿಯರ ಭವಿಷ್ಯದೊಂದಿಗೆ ಆಟವಾಡುವ ಈ ರೀತಿಯ ಭ್ರಷ್ಟಾಚಾರವು ಸಮಾಜದ ಮೂಲಭೂತ ಮೌಲ್ಯಗಳನ್ನು ಕೆಡಿಸುತ್ತಿದೆ. ಪಿಎಚ್.ಡಿ ಪ್ರವೇಶಾತಿಯಿಂದ ಹಿಡಿದು ಅವಾರ್ಡ್ ಆಗುವವರೆಗಿನ ಸಂಪೂರ್ಣ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲದಿರುವುದು, ಅರ್ಹ ವಿದ್ಯಾರ್ಥಿನಿಯರಿಗೆ ಅನ್ಯಾಯ ಮಾಡುತ್ತಿದೆ ಮತ್ತು ವಿಶ್ವವಿದ್ಯಾಲಯದ ಖ್ಯಾತಿಗೆ ಕಳಂಕ ತರುತ್ತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ವಿಶ್ವವಿದ್ಯಾಲಯದ ವ್ಯವಸ್ಥಾಪಕರು, ರಾಜ್ಯ ಉನ್ನತ ಶಿಕ್ಷಣ ಇಲಾಖೆ ಅಥವಾ ಯು.ಜಿ.ಸಿ ಇದನ್ನು ಗಂಭೀರವಾಗಿ ತೆಗೆದುಕೊಂಡು ಸ್ವತಂತ್ರ ತನಿಖೆ ಮಾಡಬೇಕು ಅಥವಾ ವಿಶ್ವವಿದ್ಯಾಲಯದ ಉನ್ನತ ಸಮಿತಿ ರಚಿಸಿ ತಕ್ಷಣ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳು ಮತ್ತು ಪ್ರಾಧ್ಯಾಪಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಶೈಕ್ಷಣಿಕ ಸಂಸ್ಥೆಗಳಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಅಗತ್ಯ, ಆನ್ಲೈನ್ನಲ್ಲಿ ಪಿಎಚ್.ಡಿ ಅರ್ಜಿ, ಮಾರ್ಗದರ್ಶಕ ನೇಮಕ, ಪ್ರಗತಿ ವರದಿ ಎಲ್ಲವೂ ಸ್ಪಷ್ಟವಾಗಿರಬೇಕು ಎಂದರು.

ಆಮ್ ಆದ್ಮಿ ಪಕ್ಷದ ಮುಖಂಡರಾದ ಜಗದೇವ್ ಸೂರ್ಯವಂಶಿ, ಪ್ರಕಾಶ್ ಸಬರದ, ನೀಲಾಂಬಿಕ ಬಿರಾದಾರ, ಚಿದಾನಂದ್ ಅವಟಿ, ಈಶ್ವರಚಂದ್ ಪಡಗಣ್ಣವರ, ಶರಣಪ್ಪ ಕಟ್ಟಿ, ಕಿರಣ್ ಮೇಲಿನಕೇರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-26-1887730737

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.