ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿ.ವಿ.ಯಲ್ಲಿ ಕೇಳಿ ಬಂದ ಪಿಎಚ್.ಡಿ ಅಕ್ರಮ ಪರಿಶೀಲನೆಯನ್ನು ಪಾರದರ್ಶಕ, ಕ್ರಮಬದ್ಧವಾಗಿ ನಡೆಸುವಂತೆ ಎಎಪಿ ಒತ್ತಾಯಿಸಿದೆ.

ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಅವರನ್ನುಮಂಗಳವಾರ ಭೇಟಿ ಮಾಡಿ ಮನವಿಸಲ್ಲಿಸಿದ ಎಎಪಿ ಜಿಲ್ಲಾ ಘಟಕದಅಧ್ಯಕ್ಷ ಭೋಗೇಶ್ ಸೋಲಾಪುರ,ಯಾರ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಮಿತಿ ರಚನೆಯಾಗಿದೆ? ಸದಸ್ಯರು ಎಷ್ಟು?ಯಾರ್ಯಾರು? ಹೊರಗಿನವರು ಸದಸ್ಯರ ಸಮಿತಿಯಲ್ಲಿ ಏಕಿಲ್ಲ? ಸಮಿತಿಗೆ ವರದಿ ನೀಡಲು ನೀಡಿದ ಕಾಲಾವಕಾಶ ಎಷ್ಟು ಎಂದು ಬಹಿರಂಗ ಪಡಿಸಬೇಕು ಎಂದರು.

ಪರಿಶೀಲನಾ ಸಮಿತಿಯ ಕಾರ್ಯವಿಧಾನವನ್ನು ಪಾರದರ್ಶಕತೆಯನ್ನು ಕಾಪಾಡಿ ಸಾರ್ವಜನಿಕರಿಗೆ ತಿಳಿಸಬೇಕು ಹಾಗೂ ವರದಿಯ ಪ್ರಮುಖ ಅಂಶಗಳನ್ನು ವಿಶ್ವವಿದ್ಯಾಲಯದ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು, ಪರಿಶೀಲನಾ ಸಮಿತಿಯ ವರದಿಯನ್ನು 30 ದಿನಗಳೊಳಗೆ ಸ್ವೀಕರಿಸಬೇಕು, ತಪ್ಪು ಮಾಡಿದ ಅಧಿಕಾರಿಗಳು, ಸಿಬ್ಬಂದಿ ಮತ್ತು ಇತರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. 2024ರಿಂದ 26ರವರೆಗೆ ನಡೆದ ಎಲ್ಲಾ ನೇಮಕಾತಿ, ಹಣಕಾಸು ವ್ಯವಹಾರ, ಪರೀಕ್ಷೆ, ಮೌಲ್ಯಮಾಪನ ಮತ್ತು ಇತರ ಆಡಳಿತಾತ್ಮಕ ಅಕ್ರಮಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-26-981462149

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.