ವಿಜಯಪುರ: ‘ಸಮಾನತೆ ಹೋರಾಟಕ್ಕೆ ಮುನ್ನುಡಿ ಬರೆದವರು ಫುಲೆ ದಂಪತಿ. ಜಾತಿ ವ್ಯವಸ್ಥೆ ತಾಂಡವವಾಡುತ್ತಿದ್ದ ಕಾಲದಲ್ಲಿ ಜಾತಿಯತೆಯನ್ನು ಮೆಟ್ಟಿನಿಂತು ಸರ್ವರ ಹೃದಯದಲ್ಲಿ ಅಕ್ಷರವನ್ನು ಬಿತ್ತಿದ ಕೀರ್ತಿ ಮಹಾತ್ಮ ಜ್ಯೋತಿಬಾ ಫುಲೆ ಅವರದು’ ಎಂದು ಸಾಹಿತಿ ಡಾ.ಜಯದೇವಿ ಗಾಯಕವಾಡ ಹೇಳಿದರು.

ದಲಿತ ವಿದ್ಯಾರ್ಥಿ ಪರಿಷತ್ ಹಾಗೂ ವಿವಿಧ ಪ್ರಗತಿಪರ ಸಂಘ–ಸಂಸ್ಥೆಗಳು ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ಅಂಬೇಡ್ಕರ್ ಹಬ್ಬ’ ಎರಡನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಡಾ.ಬಿ.ಆರ್.ಅಂಬೇಡ್ಕರ್ ಯಾವುದೇ ಒಂದು ಸಮಾಜಕ್ಕೆ ಸೀಮಿತವಲ್ಲ. ಸೀಮಿತ ಮಾಡುವವರಿಗೆ ತಕ್ಕ ಉತ್ತರ ನೀಡಬೇಕಿದೆ. ದೇಶದಲ್ಲಿ ಅಂಬೇಡ್ಕರ್ ರಚಿತ ಸಂವಿಧಾನ ಜಾರಿಯಲ್ಲಿದ್ದರೂ ಬಡತನ, ಹಸಿವು, ಶೋಷಣೆ, ದೌರ್ಜನ್ಯ ನಿಂತಿಲ್ಲ. ಉದ್ಯೋಗ, ಶಿಕ್ಷಣ ಲಭಿಸುತ್ತಿಲ್ಲ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದು ಹೇಳಿದರು.

‘ಅಂಬೇಡ್ಕರ್ ಜಾರಿಗೆ ತಂದ ಮೀಸಲಾತಿ ಸೌಲಭ್ಯ ಪಡೆದ ಫಲಾನುಭವಿಗಳು ತಮ್ಮ ಸಮಾಜವನ್ನೇ ತಿರುಗಿ ನೋಡುತ್ತಿಲ್ಲ ಎಂಬುದು ಅವರಿಗೆ ಕೊನೆಗಾಲದಲ್ಲಿ ಬೇಸರ ತರಿಸಿತ್ತು, ಅದಕ್ಕಾಗಿಯೇ ಅವರು, ನಾನು ಎಳೆದು ತಂದಿರುವ ಸಾಮಾಜಿಕ ಸುಧಾರಣೆಯ ರಥವನ್ನು ಸಾಧ್ಯವಾದರೆ ಮುಂದಕ್ಕೆ ಎಳೆಯಿರಿ, ಇಲ್ಲವೇ ಅಲ್ಲಿಯೇ ಬಿಡಿ. ಹಿಂದಕ್ಕೆ ಎಳೆಯಬೇಡಿ ಎಂದಿದ್ದರು’ ಎಂದು ಹೇಳಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಶ್ರೀನಾಥ ಪೂಜಾರಿ, ‘ವಿಜಯಪುರಕ್ಕೆ ಅಂಬೇಡ್ಕರ್ ಒಮ್ಮೆ ಭೇಟಿ ನೀಡಿ, ಅಂದಿನ ರಾಣಿ ಬಗೀಚದಲ್ಲಿ ನಡೆದ ಕಾರ್ಯಕ್ರಮದಲ್ಲಿ 40 ಸಾವಿರ ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಅದರ ಅಸ್ಮರಣೆಗಾಗಿ ಅಂಬೇಡ್ಕರ್ ಹಬ್ಬ ಆಯೋಜಿಸಲಾಗುತ್ತಿದೆ. ಇದು ಕೇವಲ ಹಬ್ಬವಲ್ಲ ಇದೊಂದು ವೈಚಾರಿಕ ಹಬ್ಬವಾಗಿದೆ’ ಎಂದು ಹೇಳಿದರು.

ಕಲಬುರ್ಗಿಯ ಎ.ಬಿ.ಹೊಸಮನಿ, ಬೆಂಗಳೂರಿನ ಲೋಕೇಶ ಎಂ., ಹಾರೋಗೇರಿಯ ಲತಾ ರಾಮು ನಡೋಣಿ, ಕೊಪ್ಪಳದ ಸಾವಿತ್ರಿ ಮುಜುಮದಾರ, ಧಾರವಾಡದ ಡಾ.ಜಿತದತ್ತ ಹಡಗಲಿ, ವಿಜಯಪಯರದ ಡಾ.ಋತುನಬಿ ಗಡೇದ ಅವರಿಗೆ ಮಹಾತ್ಮ ಜ್ಯೋತಿಬಾ ಫುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮನಗೂಳಿ ಷರೀಪ ಪೀಠಾಧಿಪತಿ ಡಾ. ಫೈರೋಜ್ ಹುಸೇನಿ ಇನಾಮದಾರ, ವೇದ ಅಕಾಡೆಮಿ ಅಧ್ಯಕ್ಷ ಶಿವಾನಂದ ಕೆಲೂರ, ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅರ್ಜುನ ಗೊಳಸಂಗಿ, ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಸಚಿವ ಸೋಮಲಿಂಗ ಗೆಣ್ಣೂರ, ಸಾಹಿತಿ ವೈ.ಎನ್. ಭಜಂತ್ರಿ, ಪತ್ರಕರ್ತ ಪ್ರಭು ಮಲ್ಲಿಕಾರ್ಜುನ ಮಠ, ಡಾ. ಬಿ.ಎಂ.ಬಿರಾದಾರ, ಮಹಮ್ಮದ್ ರಫೀಕ್ ಟಪಾಲ್, ಎಸ್.ಎಂ.ಪಾಟೀಲ ಗಣಿಹಾರ, ಅಬ್ದುಲ್ ರಜಾಕ್ ಹೊರ್ತಿ,ರಾಕೇಶ ಕಲ್ಲೂರ, ಎಚ್.ಎನ್.ಬಾಗವಾನ, ಜಮೀರ್ ಬಕ್ಷಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-26-830509539

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.