ವಿಜಯಪುರ (ದೇವನಹಳ್ಳಿ): ಇಲ್ಲಿನ ಮೇಲೂರು ರಸ್ತೆಯ ಬಸವಕಲ್ಯಾಣ ಮಠದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ವೋದಯ ಮಂಡಳಿ ವತಿಯಿಂದ ಸರ್ವೋದಯ ಶಿಕ್ಷಣ ಪ್ರತಿಭಾ ಪುರಸ್ಕಾರ ನಡೆಯಿತು.

ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಸೇವಾಗ್ರಾಮದಲ್ಲಿ ಅಖಿಲ ಭಾರತ ಸರ್ವೋದಯ ಮಂಡಳಿ ಆಯೋಜಿಸಿದ್ದ ರಾಷ್ಟ್ರೀಯ ಸರ್ವೋದಯ ಶಿಕ್ಷಣ ಯುವ ಶಿಬಿರದಲ್ಲಿ ಭಾಗವಹಿಸಿದ್ದ ವಿಜಯಪುರ ಶಾಂತಿನಗರದ ನಿವಾಸಿ ಎಂ.ಗಗನ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಸವಕಲ್ಯಾಣ ಮಠಾಧ್ಯಕ್ಷ ಡಾ.ಮಹದೇವ ಸ್ವಾಮೀಜಿ, ಶಿಕ್ಷಣವು ಕೇವಲ ಅಕ್ಷರ ಜ್ಞಾನವಲ್ಲ, ಅದು ಜೀವನದಲ್ಲಿ ಜ್ಞಾನ, ಕೌಶಲ್ಯ ಮತ್ತು ನೈತಿಕತೆ ಬೆಳೆಸುವ ನಿರಂತರ ಪ್ರಕ್ರಿಯೆಯಾಗಿದೆ. ಉತ್ತಮ ಶಿಕ್ಷಣವು ಉಜ್ವಲ ವೃತ್ತಿಜೀವನಕ್ಕೆ ದಾರಿದೀಪವಾಗಲಿದೆ ಎಂದರು.

ಶಿಕ್ಷಣವು ವ್ಯಕ್ತಿಗೆ ಆತ್ಮವಿಶ್ವಾಸ, ಆರ್ಥಿಕ ಸ್ಥಿರತೆ ಹಾಗೂ ವಿಮರ್ಶಾತ್ಮಕ ಚಿಂತನಾ ಶಕ್ತಿಯನ್ನು ನೀಡುತ್ತದೆ. ಸಮಾಜದ ಪ್ರಗತಿಗೆ ಶಿಕ್ಷಣವೇ ಅಡಿಪಾಯವಾಗಿದ್ದು, ವಿದ್ಯಾರ್ಥಿಗಳು ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಹೇಳಿದರು.

ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ವಿ.ಪ್ರಶಾಂತ, ಮಠದ ಕಾರ್ಯದರ್ಶಿ ಜಯಕುಮಾರ್, ಶಿವಣ್ಣ, ನಾರಾಯಣಸ್ವಾಮಿ, ನಂಜುಂಡಪ್ಪ, ನಂದೀಶ್, ಪ್ರಾಂಶುಪಾಲ ಎಸ್.ಎಸ್. ಪ್ರದೀಪ, ಪ್ರಾಧ್ಯಾಪಕರಾದ ಕೆ.ಎಂ. ನಾಗರಾಜ್, ಎಂ.ಜಿ. ಹರೀಶ್, ಡಿ.ಎನ್. ನಾಗೇಶ್, ಬಿ.ಎಸ್. ಶರತ್, ಮುಭಾರಕ್, ಕೆ.ಸಿ. ಅಂಬಿಕಾ, ಕೆ. ಅರ್ಚನಾ, ಎಂ.ಚೈತ್ರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-15-198136217

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.