ವಿಜಯಪುರ: ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಇತ್ತೀಚೆಗೆ ನೃತ್ಯ ದಿನಾಚರಣೆಯನ್ನು ನಟರಾಜನ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸಂಸ್ಥೆಯ ನಿರ್ದೇಶಕ ಭರತ ಬಿರಾದಾರ ಮಾತನಾಡಿ, ನೃತ್ಯ ಮನಸ್ಸು ಮತ್ತು ದೈಹಿಕ ಆರೋಗ್ಯವನ್ನು ಉತ್ತಮಗೊಳಿಸುವ ಸಾಮರ್ಥ್ಯ ಹೊಂದಿದೆ, ನೃತ್ಯ ಒಂದು ಪವಿತ್ರ ಕಲೆ, ನೃತ್ಯದಿಂದ ಅನೇಕ ಪ್ರಯೋಜನಗಳಿವೆ, ನೃತ್ಯ ಒಲಿಸಿಕೊಳ್ಳುವುದು ಸುಲಭದ ಮಾತಲ್ಲ, ಕಠಿಣ ಪರಿಶ್ರಮ, ತಪಸ್ಸಿನ ತರಬೇತಿ ಅಗತ್ಯ ಎಂದರು. ನೃತ್ಯ ಶಿಕ್ಷಕಿಯರಾದ ಪೂಜಾ ಮತ್ತು ರಾಕೇಶ ಅವರು ನೃತ್ಯ ಕಲೆಯ ಕುರಿತು ಸುದೀರ್ಘವಾಗಿ ವಿವರಿಸಿದರು.

ಪ್ರಾಂಶುಪಾಲ ರಿಜೇಶ್ ಪಿ.ಎನ್ ಮಾತನಾಡಿ, ಎಲ್ಲಿ ಹಸ್ತ ಇರುತ್ತದೆಯೋ ಅಲ್ಲಿ ತೃಪ್ತಿ ಇರುತ್ತದೆ. ಎಲ್ಲಿ ದೃಷ್ಟಿ ಇರುತ್ತದೆ ಅಲ್ಲಿ ಮನಸ್ಸು ಇರುತ್ತದೆ. ಎಲ್ಲಿ ಮನಸ್ಸು ಇರುತ್ತದೆಯೋ ಅಲ್ಲಿ ಭಾವನೆ ಇರುತ್ತದೆ. ಎಲ್ಲಿ ಭಾವ ಇರುತ್ತದೆಯೋ ಅಲ್ಲಿ ರಸ, ಕಲೆ, ಭಾವನೆ ಉಂಟಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-26-2113087607

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.