ವಿಜಯಪುರ: ‘ಭಕ್ತಿ ಮತ್ತು ನೀತಿಯ ಸುಂದರ ಮಿಲನ ಶರಣ ಸಾಹಿತ್ಯ. ಈ ಶರಣ ಸಾಹಿತ್ಯ ಅರಿವಿಲ್ಲದ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಅಂದಿನ ಆಡುಭಾಷೆಯಾದ ಕನ್ನಡದಲ್ಲೇ ಗಹನವಾದ ತತ್ವಶಾಸ್ತ್ರವನ್ನು ಶರಣರು ಕಟ್ಟಿಕೊಟ್ಟರು’ ಎಂದು ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಸಲಹೆಗಾರ ವಿ.ಡಿ. ಐಹೊಳ್ಳಿ ಹೇಳಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿವಿಧ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ವಿಜಯಪುರ ಶರಣರ, ಸಂತರ, ಸೂಫಿಗಳ ನಾಡು ಹಾಗೂ ಸಾಂಸ್ಕೃತಿಯ ಬೀಡು. ಡಾ.ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯ ಪ್ರಶಂಸನೀಯ’ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಶಿಲ್ಪಾ ಭಸ್ಮೆ ಮಾತನಾಡಿ, ‘12ನೇ ಶತಮಾನದ ವಚನ ಸಾಹಿತ್ಯ ಇಂದಿಗೂ ಪ್ರಸ್ತುತ. ಮನುಷ್ಯನ ಅಂತರಂಗವನ್ನು ಶುದ್ಧೀಕರಿಸಲು ವಚನಗಳು ಅವಶ್ಯ. ಸಾಮಾಜಿಕ ಪರಿವರ್ತನೆಗೆ ವಚನ ಸಾಹಿತ್ಯ ಸಾರ್ವಕಾಲಿಕ. ಮನುಷ್ಯ ತನ್ನ ಅಹಂಕಾರವನ್ನು ತೊರೆದು, ಸಹಜೀವಿಗಳನ್ನು ಗೌರವಿಸುತ್ತಾ, ನೆಮ್ಮದಿಯ ಸಮಾಜವನ್ನು ನಿರ್ಮಿಸಲು ವಚನಗಳ ಚಿಂತನೆ ಇಂದಿನ ತುರ್ತು ಅಗತ್ಯವಾಗಿದೆ’ ಎಂದರು.

ಡಾ. ಫ.ಗು ಹಳಕಟ್ಟಿ ಅವರ ಬದುಕು ಸಾಧನೆ ಕುರಿತು ಸಿಂದಗಿಯ ಶೈಕ್ಷಣಿಕ ಚಿಂತಕ ಅಶೋಕ ಬಿರಾದಾರ, ವಚನ ಸಾಹಿತ್ಯ ಅತ್ಯಗತ್ಯ ಕುರಿತು ಶಿವಣಗಿಯ ಶಿಕ್ಷಕ ಎಸ್.ಬಿ ರೆಡ್ಡಿ ಮಾತನಾಡಿದರು.

ರೂಪಸಿಂಗ್ ರಾಮಜಿ ಲೋನಾರಿ, ಮಹಿಬೂಬ್ ಮಾಲಬಾವಡಿ, ಅರ್ಜುನ ಶಿರೂರು, ಶಕುಂತಲಾ ಹಿರೇಮಠ, ಜಯಶ್ರೀ ಹಿರೇಮಠ, ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಗೌರವ ಕಾರ್ಯದರ್ಶಿ ರವಿ ಕಿತ್ತೂರ, ಲತಾ ಗುಂಡಿ, ಜಿ.ಎಸ್. ಬಳ್ಳೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-26-55511095

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.