ಸಿಂದಗಿ: ಸಂಸ್ಕಾರವಿಲ್ಲದ ಶಿಕ್ಷಣ ಅಪೂರ್ಣ, ಹೀಗಾಗಿ ಸಂಸ್ಕಾರಯುತ ಶಿಕ್ಷಣ ನೀಡುವ ಶಾಲಾ-ಕಾಲೇಜುಗಳ ಅಗತ್ಯ ತುಂಬಾ ಇದೆ ಎಂದು ಶಿಕ್ಷಕ ಸಾಹಿತಿ ಬಸವರಾಜ ಅಗಸರ ಹೇಳಿದರು.

ಇಲ್ಲಿಯ ಬಂದಾಳ ರಸ್ತೆ ಶಾಂತವೀರನಗರದಲ್ಲಿನ ಸಂಗಮೇಶ್ವರ ವಿದ್ಯಾಲಯದ ಮಲ್ಲಿಕಾರ್ಜುನ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಗೌರವ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಸಂಕಲ್ಪ, ಏಕಾಗ್ರತೆ, ಸಾಧಿಸುವ ಛಲವಿರಬೇಕು. ಅಂದಾಗಲೇ ಸಾಧನೆ ಸಾಧ್ಯ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಪ್ರೌಢಶಾಲೆಯ ಮುಖ್ಯಶಿಕ್ಷಕ ಮುತ್ತುರಾಜ ಮಂದೇವಾಲಿ ಮಾತನಾಡಿ, ವಿದ್ಯಾರ್ಥಿಗಳು ಅನ್ವೇಷಣಾ ಮನೋಭಾವನೆ ರೂಢಿಸಿಕೊಂಡು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಸಂಗಮೇಶ್ವರ ವಿದ್ಯಾಲಯದ ಸಂಚಾಲಕ ಗುರುನಾಥ ಅರಳಗುಂಡಗಿ, ವಿಜಯಪುರ ತೋಟಗಾರಿಕೆ ಇಲಾಖೆಯ ಸಮಾಲೋಚಕಿ ಮಹಾದೇವಿ ಅಂಬಲಿ ಮಾತನಾಡಿದರು.

ಪ್ರತಿಭಾವಂತ ವಿದ್ಯಾರ್ಥಿಗಳಾದ ಪ್ರೇಮಾ ವಾಲಿಕಾರ, ಜಯರಾಮ ಮಂದೇವಾಲಿ, ಅನಿತಾ ದಂಡಗೊಂಡ, ಶರತ್ ಹಡಪದ, ಪೂರ್ಣಿಮಾ ಬಿರಾದಾರ ಅವರನ್ನು ಗೌರವಿಸಲಾಯಿತು.

ವಿದ್ಯಾರ್ಥಿ ಪಾಲಕರನ್ನು ಕೂಡ ಸನ್ಮಾನಿಸಲಾಯಿತು. ಶಿಕ್ಷಕಿ ಎಸ್.ವೈ.ತಾಳಿಕೋಟಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಶಿಕ್ಷಕ ಶಂಕರ ಮಡ್ನಳ್ಳಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-26-1570941819

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.