ವಿಜಯಪುರ: ವಿದ್ಯಾರ್ಥಿಗಳಿಗೆ ನಿರಂತರ ಅಧ್ಯಯನ ಅತ್ಯವಶ್ಯ. ಭವಿಷ್ಯ ಕಟ್ಟಿಕೊಳ್ಳಲು ನಿಮಗೆ ಇದೊಂದು ಸುವರ್ಣವಕಾಶ ಎಂದು ಐಪಿಎಸ್ ಅಧಿಕಾರಿ ಇಸಿತಾ ಗುಪ್ತಾ ಹೇಳಿದರು.

ನವಬಾಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಲಬಾರ್ ಗೋಲ್ಡ್ನಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು.

ಮಲಬಾರ್ ಗೋಲ್ಡ್ ದೇಶದ 20 ರಾಜ್ಯಗಳಲ್ಲಿ ಸುಮಾರು ₹200 ಕೋಟಿ ವಿದ್ಯಾರ್ಥಿ ವೇತನ ವಿತರಣೆ ಮಾಡಿರುವುದು ಶ್ಲಾಘನೀಯ ಕಾರ್ಯ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಶಿಕ್ಷಣ, ಆರೋಗ್ಯ, ಪರಿಸರ, ಬಡತನ ನಿರ್ಮೂಲನೆ ಮುಂತಾದ ಕಾರ್ಯಗಳಿಗೆ ಮಲಬಾರ್ ಗೋಲ್ಡ್ ಸಹಾಯ ನೀಡುತ್ತಿರುವುದು ಪ್ರಶಂಸನೀಯ ಎಂದರು.

ಡಾ. ವನಿತಾ ತೊರವಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಸದುಪಯೋಗ ಪಡೆದುಕೊಳ್ಳಬೇಕು.ನಿಮ್ಮ ಹಣೆಬರಹ ನೀವೇ ಬದಲಾಯಿಕೊಳ್ಳಬೇಕು, ಜ್ಞಾನ ನಿಮ್ಮ ಶಕ್ತಿಯಾಗಲಿ ಎಂದರು.

ಮಲಬಾರ್ ಗೋಲ್ಡ್ ಉದ್ಯಮವಾಗಿ ಪರಿವರ್ತನೆಯಾಗಿದೆ. ದೇಶದಲ್ಲಿ 30 ಸಾವಿರ ಜನರಿಗೆ ಉದ್ಯೋಗ ನೀಡಿದ್ದು ಸ್ಮರಣೀಯ ಎಂದರು.

ಕಲ್ಪನಾ ಶಾಬಾದಿ ಹಾಗೂ ಮಲಬಾರ್ ಗೋಲ್ಡ್ ಶಾಖಾ ಮುಖ್ಯಸ್ಥ ಎ. ಆರ್. ಅಬ್ದುಲ್ ಮಿರಾಜ ಶೇಖ ಮಾತನಾಡಿದರು.

ಜಿಲ್ಲೆಯ 83 ವಿದ್ಯಾರ್ಥಿಗಳಿಗೆ ₹7 ಲಕ್ಷ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು.

ವಿಜಯಪುರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಉಪ ಪ್ರಾಂಶುಪಾಲ ಚಿದಾನಂದ ಆನೂರ, ಪ್ರೊ. ಪಿ. ಬಿರಾದಾರ. ಪ್ರೊ. ಸುನೀಲ ನಡಕಟ್ಟಿ, ಡಾ. ಅನಂತಪದ್ಮನಾಭ ಸರವಂದಿ, ಪ್ರೊ.ಉಮೇಶ ಹಿರೇಮಠ,ಪ್ರೊ. ಸಂಗಮೇಶ ಗುರವ, ಪ್ರೊ. ಸುನೀಲ ಹತ್ತಿ, ಡಾ. ಸುರೇಶ ಬಿರಾದಾರ, ಬಸವರಾಜ ಪೋಲೆಸಿ, ಪಿಂಟು ಚವ್ವಾಣ, ರಿಯಾಜ್, ಡಾ.ಎಚ್. ಕುಮಾರಸ್ವಾಮಿ, ಐಶ್ವರ್ಯ ಸಿಗಣಾಪೂರ, ಶಮೀನಾ ಜಮಾದಾರ ಇದ್ದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-26-96320633

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.