ವಿಜಯಪುರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿಜಯಪುರ ನಗರ ಘಟಕಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಸಿಂದಗಿ ತಾಲ್ಲೂಕು ಹಾಗೂ ನಗರ ವಲಯದ ಶಿಕ್ಷಕರ ಪರವಾಗಿ ಮಂಗಳವಾರ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಗರ ವಲಯದ ನೂತನ ಅಧ್ಯಕ್ಷ ಸಯ್ಯದ್ ಜುಬೇರ ಕೆರೂರ, ‘ಹಲವು ವರ್ಷಗಳಿಂದ ಶಿಕ್ಷಕರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತ ಬಂದಿರುವೆ. ಅದಕ್ಕಾಗಿ ಹೊಸ ಜವಾಬ್ದಾರಿ ದೊರೆತಿದ್ದು, ಮುಂಬರುವ ದಿನಗಳಲ್ಲಿ ಶಿಕ್ಷಕರ ಸಮಸ್ಯೆಗಳಿಗೆ ಹೆಚ್ಚಿನ ರೀತಿಯಲ್ಲಿ ಸ್ಪಂದಿಸಿ ಕಾರ್ಯ ನಿರ್ವಹಿಸುತ್ತೇನೆ’ ಎಂದು ತಿಳಿಸಿದರು.

ಸಿಂದಗಿ ತಾಲೂಕು ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಯು.ಐ. ಶೇಖ ಮಾತನಾಡಿ, ‘ಶಿಕ್ಷಕರ ಸಮಸ್ಯೆಗಳಿಗೆ ಸದಾ ದ್ವನಿಯಾಗಿ ಸಂಘ ಕಾರ್ಯ ನಿರ್ವಹಿಸಬೇಕು. ಈ ಸಲ ಆಯ್ಕೆಯಾದ ನೂತನ ಪದಾಧಿಕಾರಿಗಳೆಲ್ಲರೂ ಕ್ರೀಯಾಶೀಲರಾಗಿದ್ದು, ಉತ್ತಮ ಕಾರ್ಯ ನಿರ್ವಹಣೆ ಮಾಡುವ ಭರವಸೆ ಇದೆ’ ಎಂದರು.

ನೂತನ ಪದಾಧಿಕಾರಿಗಳಾದ ಮಂಜುನಾಥ ಅರೆಶಂಕರ, ಬಸೀರ ನದಾಫ, ಅಜೀಜ ಅರಳಿಮಟ್ಟಿ, ಶಿವಾನಂದ ರೂಗಿ, ಕಬೂಲ್ ಕೊಕಟನೂರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ರಿಯಾಜ್ ತಮದಡ್ಡಿ, ಅಲ್ತಾಫ ಸಾಲೋಟಗಿ, ಸರತಾಜ ಬಗಲಿ, ಲತೀಫ ಬಾಗವಾನ, ಜಮೀರ್ ನಾಗರಬೌಡಿ, ಅಬೀದ್ ಬುರಕಾಫೋಷ, ಅಜರ್ ಮುಲ್ಲಾ, ಹಾಶಿಂಪೀರ ಇನಾಮದಾರ, ಪಿ.ಎ. ಚಿಕ್ಕಗಸಿ, ಫಯಾಜ್ ತಮದಡ್ಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-26-239717459

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.