ವಿಶ್ವವಿದ್ಯಾಲಯದ ಮೌಲ್ಯಮಾಪನ ಪ್ರಕ್ರಿಯೆ ಡಿಜಿಟಲೈಜೇಸನ್ ಮಾಡಲಾಗುತ್ತಿದ್ದು, ಇದಕ್ಕಾಗಿ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸಿಂಡಿಕೇಟ್ ಅನುಮತಿ ಪಡೆಯಲಾಗಿದೆ. ಅಕ್ರಮಕ್ಕೆ ಅವಕಾಶವಿಲ್ಲದಂತೆ ನೇಮಕಾತಿ ನಿಯಮಾವಳಿ ಪಾಲಿಸಲಾಗುವುದು
ಪ್ರೊ. ವಿಜಯಾ ಕೋರಿಶೆಟ್ಟಿ, ಕುಲಪತಿ, ಅಕ್ಕಮಹಾದೇವಿ ಮಹಿಳಾ ವಿ.ವಿ, ವಿಜಯಪುರ
ಸರ್ಕಾರದಿಂದ ಅನುಮತಿ ಪಡೆದು, ನಿಯಮಾವಳಿ ಪ್ರಕಾರ ನೇಮಕಾತಿ ಆಗಬೇಕು, ರೋಸ್ಟರ್ ಪದ್ಧತಿ ಅನುಸರಿಸಬೇಕು. ಯಾರದ್ದೋ ಒತ್ತಡಕ್ಕೆ ಮಣಿದು ನೇಮಕ ಮಾಡಿಕೊಳ್ಳಬಾರದು ಎಂದು ಈಗಾಗಲೇ ಕುಲಪತಿ ಗಮನಕ್ಕೆ ತಂದಿರುವೆ. ಒಂದು ವೇಳೆ ನಿಯಮಬಾಹಿರ ನೇಮಕ ಪ್ರಕ್ರಿಯೆ ನಡೆದರೆ ಸರ್ಕಾರದ ಗಮನಕ್ಕೆ ತರುತ್ತೇನೆ
ಮಲ್ಲಮ್ಮ ಯಾಳವಾರ, ಸಿಂಡಿಕೇಟ್ ಸದಸ್ಯೆ, ಅಕ್ಕಮಹಾದೇವಿ ಮಹಿಳಾ ವಿ.ವಿ, ವಿಜಯಪುರ