ವಿಜಯಪುರ: ‘ಮಹಿಳೆಯ ಸ್ಥಾನ ಅತ್ಯಂತ ಹಿರಿದಾಗಿದ್ದು, ಕುಟುಂಬದ ಅಷ್ಟೇ ಅಲ್ಲ ಸಮಾಜದ ಉನ್ನತಿಗೆ ಆಕೆಯ ಕೊಡುಗೆ ಅಪಾರ’ ಎಂದು ಪ್ರಸೂತಿ ತಜ್ಞೆ ಡಾ.ಜಯಶ್ರೀ ಮಂಗಲಗಿ ಹೇಳಿದರು.

ನಗರದ ಹಳಕೇರಿ ಗಲ್ಲಿಯಲ್ಲಿರುವ ಗಾಯಿ ಬಡಾವಣೆಯ ಬಕುಲ ಧಾಮದಲ್ಲಿ ಸಿರಿಗನ್ನಡ ವೇದಿಕೆ ಮಹಿಳಾ ಘಟಕದ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ಮಹಿಳಾ ಶ್ರೇಯೋಭಿವೃದ್ಧಿ ಸಮಾಲೋಚನಾಗೋಷ್ಠಿಯಲ್ಲಿ ಮಾತನಾಡಿದರು.

‘ಮಹಿಳೆ ತ್ಯಾಗದ ಪ್ರತೀಕ, ಕರುಣೆಯ ಗಣಿ, ವಾತ್ಸಲ್ಯದ ಪ್ರತಿಬಿಂಬ, ಮಹಿಳೆ ಸಹನೆಯ ಮೂರ್ತಿ, ಆದರೆ ಅದು ಆಕೆಯ ದೌರ್ಬಲ್ಯವಲ್ಲ, ಮಹಿಳೆ ಅಪಾರ ಶಕ್ತಿವಂತಳು, ಅಸಾಧ್ಯವಾದುದನ್ನು ಸಾಧಿಸಿ ತೋರಿಸುವ ಛಲಗಾರಿಕೆ ಮಹಿಳೆಯಲ್ಲಿದೆ’ ಎಂದರು.

ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ವಿಮಲಾ ಹಂದಿಗೋಳ ಮಾತನಾಡಿ, ‘ಜೀವನದಲ್ಲಿ ಯಾವುದೇ ಬಗೆಯ ತೊಂದರೆ ಬಂದರೂ ಅದನ್ನು ಧೈರ್ಯದಿಂದ ಎದುರಿಸುವ ಗುಣವನ್ನು ಮಹಿಳೆ ಹೊಂದಿದ ಕಾರಣ ಮಹಿಳೆ ಸಬಲೆ, ಆಕೆ ಅಬಲೆಯಲ್ಲ. ಎಲ್ಲ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು’ ಎಂದರು.

ಗಾಯಕಿ ನಂದಾ ಮಿರ್ಜಿ ಮಾತನಾಡಿದರು. ರೇಖಾ ಮುಜುಮದಾರ, ಆರ್.ವೈ. ಕಾಂಬಳೆ, ಎಂ.ಎಂ. ಬಾಗೇವಾಡಿ, ಎಸ್.ವಿ. ಕದಂ, ಜಿ.ವೈ. ಕುಬಕಡ್ಡಿ, ಸುನಂದಾ ಹೊಕ್ರಾಣಿ, ನಿವೃತ್ತ ಶಿಕ್ಷಕಿ ಅನಿತಾ ಗಾಯಿ, ವೈಶಾಲಿ ಥೊಬ್ಬಿ, ಜ್ಯೋತಿ ಕುಲಕರ್ಣಿ, ಎಸ್.ಪಿ. ಕಡ್ಲಿ, ವಿ.ಬಿ. ದಿವಾಣಜಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-26-914797634

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.