ವಿರಾಜಪೇಟೆ: ‘ಕೊಡವ ಸಂಸ್ಕೃತಿಯ ಉಳಿವಿಗೆ ಯುವಕರು ಸದಾ ಮುಂಚೂಣಿಯಲ್ಲಿರಬೇಕು. ಇದಕ್ಕೆ ಪೋಷಕರು ಪ್ರೋತ್ಸಾಹ, ಸಹಕಾರ ನೀಡಬೇಕು’ ಎಂದು ಕೊಡವ ಸಂಘ ಒಕ್ಕೂಟದ ಅಧ್ಯಕ್ಷ ಮಾದಂಡ ಎಸ್.ಪೂವಯ್ಯ ಹೇಳಿದರು.

ಪಟ್ಟಣದ ಕೊಡವ ಸಮಾಜದ ಆಡಳಿತ ಮಂಡಳಿಯ ಸಹಯೋಗದೊಂದಿಗೆ ವಿರಾಜಪೇಟೆ ಕೊಡವ ಸಂಘ ಒಕ್ಕೂಟದಿಂದ ಕೊಡವ ಸಮಾಜದ ಸಭಾಂಗಣದಲ್ಲಿ ಈಚೆಗೆ ಆಯೋಜಿಸಲಾಗಿದ್ದ 'ಕೊಡವ ಆಟ್ ಪಾಟ್ ಪಡಿಪು' ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊಡವ ಸಂಸ್ಕೃತಿ ಆಚಾರ ವಿಚಾರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆಟ್ ಪಾಟ್ ಪಡಿಪು ಕಾರ್ಯಕ್ರಮ ಆಯೋಜನೆಯ ವಿಚಾರದಲ್ಲಿ ಸಂಘ ಸಂಸ್ಥೆಗಳು ಮುಂಚೂಣಿಯಲ್ಲಿರಬೇಕೆಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯವಾಗಿ ಬಾಳೊಪಾಟ್, ಉಮ್ಮತ್ತಾಟ್, ವಸ್ತ್ರ ಹಾಗೂ ಚೇಲೆ ಕಟ್ಟುವ ಬಗ್ಗೆ ತರಬೇತಿ ನೀಡಲಾಯಿತು. ಬಾಳೊಪಾಟ್ ಮುಖ್ಯ ತರಬೇತುದಾರರಾಗಿ ಅಚ್ಚಪಂಡ ಪಟ್ಟು ಅಯ್ಯಪ್ಪ, ಅಪ್ಪನೆರವಂಡ ರತಿ ಕಾರ್ಯಪ್ಪ ಭಾಗವಹಿಸಿದ್ದರು.

ಕೊಡವ ಸಮಾಜದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ, ಕಾರ್ಯದರ್ಶಿ ಮಾಳೆಟಿರ ಶ್ರೀನಿವಾಸ್ ಹಾಗೂ ನಿವೃತ್ತ ಪ್ರಾಂಶುಪಾಲೆ ತಾತಂಡ ಜ್ಯೋತಿ ಪ್ರಕಾಶ್ ಅವರು ಮಾತನಾಡಿದರು. ಉಮ್ಮತ್ತಾಟ್ ತರಬೇತಿಯನ್ನು ಚೊಟ್ಟಂಡ ತಶ್ವಿ ಸೋಮಯ್ಯ ನೀಡಿದರು. ಸಂಚಲಕರಾಗಿ ಒಕ್ಕೂಟದ ಉಪಾಧ್ಯಕ್ಷ ಮುಂಡ್ಯೊಳಂಡ ಅಜಿತ್ ಸುಬ್ಬಯ್ಯ, ಒಕ್ಕೂಟದ ಗೌರವ ಕಾರ್ಯದರ್ಶಿ ಬಾಚಿರ ಜಗದೀಶ್, ಮೂಕೊಂಡ ಪ್ರೀತ್ ಈರಪ್ಪ ಹಾಗೂ ಚಿಕ್ಕಪೇಟೆ ಕೇರಿಯ ಉಪಾಧ್ಯಕ್ಷ ಬಿದ್ದಂಡ ನಾಣಿ ದೇವಯ್ಯಕಾರ್ಯಕ್ರಮ ನಿರ್ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-51-731109340

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.