ವಿರಾಜಪೇಟೆ: ಬದುಕಿನಲ್ಲಿ ಯಾವುದನ್ನೂ ಲೆಕ್ಕಿಸದೆ ದುಡಿದು, ಕುಟುಂಬದ ರಕ್ಷಿಸುವ ತಾಯಿಯ ಪಾತ್ರ ಮಹತ್ವದ್ದು’ ಎಂದು ಗೋಣಿಕೊಪ್ಪಲಿನ ಸಹಾಯಕ ಪ್ರಾಧ್ಯಾಪಕಿ ಎಸ್.ಎಂ.ರಜನಿ ಹೇಳಿದರು.

ಅರಮೇರಿ ಕಳಂಚೇರಿ ಮಠದಲಿಂಗರಾಜೇಂದ್ರ ಭವನದಲ್ಲಿ ಈಚೆಗೆ ನಡೆದ ಹೊಂಬೆಳಕು ಕಾರ್ಯಕ್ರಮದಲ್ಲಿ ‘ಕುಟುಂಬದ ರಕ್ಷಣೆಯಲ್ಲಿ ದುಡಿಯುವ ಮಹಿಳೆಯರ ಪಾತ್ರ’ ಎಂಬ ವಿಷಯದಲ್ಲಿ ಅವರು ಉಪನ್ಯಾಸ ನೀಡಿದರು.

‘ಮಗುವಿಗೆ ಯಾವುದೇ ತೊಂದರೆಯಾಗದಂತೆ ಪ್ರೀತಿ-ಮಮತೆಯಿಂದ ನೋಡಿಕೊಳ್ಳುವಳು. ಮಕ್ಕಳು ಗುಣವಂತರಾಗುವಲ್ಲಿ ತಾಯಿಯ ಪಾತ್ರ ಬಹುಮುಖ್ಯ. ಹಿರಿಯರಿಂದ ಕಲಿತ ಸಂಸ್ಕಾರವನ್ನು ಯುವಕರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

‘ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಹೆಚ್ಚುತ್ತಿದೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕು. ಇಂದು ವಿದ್ಯಾರ್ಥಿಗಳ ಕೈಯಲ್ಲಿ ಸದಾ ಮೊಬೈಲ್ ಪೋನ್ ಇರುತ್ತದೆ, ಇದು ವಿದ್ಯಾರ್ಥಿಗಳಿಗೆ ಅವಶ್ಯಕವೇ ಎಂದು ಚಿಂತಿಸಬೇಕಿದೆ’ ಎಂದರು.

ಕಡಂಗದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ವತ್ಸಲಾ ಶ್ರೀಶ ಚಾಲನೆ ನೀಡಿ ಮಾತನಾಡಿ, ಮನೆ ಹಾಗೂ ಮಕ್ಕಳ ಯೋಗ ಕ್ಷೇಮ ನೋಡಿಕೊಳ್ಳುವಳು ತಾಯಿ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ತಾಯಿ ಸದಾ ಹಂಬಲಿಸುತ್ತಾಳೆ. ತಂದೆ, ತಾಯಿ ಕಲಿಸಿದ ಸಂಸ್ಕಾರವನ್ನು ಮಕ್ಕಳು ಅಳವಡಿಸಿಕೊಳ್ಳಬೇಕು ಎಂದರು.

ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ತಾಯಿಯ ರೂಪದಲ್ಲಿ ದೇವರನ್ನು ಕಾಣಬಹುದು. ಹಿಂದಿನ ದಿನದಲ್ಲಿ ವಿದ್ಯೆಯಿಲ್ಲದಿದ್ದರೂ ಸರಿ, ತಪ್ಪು ಎಂಬುದನ್ನು ವಿಮರ್ಶೆ ಮಾಡುವ ಜ್ಞಾನ ಸಮಾಜದಲ್ಲಿತ್ತು. ಯಾರು ತಂದೆ-ತಾಯಿ ಆಶಿರ್ವಾದ ಪಡೆದು ಜೀವನ ನಡೆಸುತ್ತಾರೋ ಅವರು ಉತ್ತಮ ವ್ಯಕ್ತಿಗಳಾಗಲು ಸಾಧ್ಯ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೇಶವ ಕಾಮತ್, ಎಸ್.ವಿ.ನರಸಿಂಹನ್, ಸಾಹಿತಿ ಕಿಗ್ಗಾಲು ಗಿರೀಶ್, ವೈಲೇಶ್, ಕೃಷಿಕರಾದ ತಿಮ್ಮಪ್ಪಯ್ಯ, ವೆಂಕಟಗಿರಿ, ಉಪನ್ಯಾಸಕ ಹರೀಶ್ ಕಿಗ್ಗಾಲು ಮಾತನಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-51-1010449924

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.