‘ಮನಸ್ಸು ದೃಢವಾಗಿದ್ದರೆ ಅಸಾಧ್ಯವೆಂಬುದೇ ಇಲ್ಲ’ ಮಹಾತ್ಮ ಗಾಂಧೀಜಿ ಹೇಳಿದ ಈ ಮಾತು ಜೀವನದ ಪ್ರತಿಯೊಂದು ಹಂತದಲ್ಲೂ ಸತ್ಯ. ಗುರಿ ಸಾಧನೆಗೆ ಬೇಕಾಗಿರುವುದು ಕೇವಲ ಬುದ್ಧಿಶಕ್ತಿ ಮತ್ತು ಸಂಪನ್ಮೂಲವಷ್ಟೇ ಅಲ್ಲ, ದೃಢ ಮನಸ್ಸು ಮತ್ತು ಸಕಾರಾತ್ಮಕ ದೃಷ್ಟಿಕೋನವೂ ಕೂಡ ನಿರ್ಣಾಯಕ.

ಗುರಿ ತಲುಪಲು ಎಲ್ಲರಿಗೂ ಏಕೆ ಸಾಧ್ಯವಾಗುವುದಿಲ್ಲ?

ಅನೇಕರು ತಮ್ಮ ಸಾಮರ್ಥ್ಯ ಅರಿಯದೆ ಬದುಕುತ್ತಾರೆ. ಪ್ರಸಿದ್ಧ ಲೇಖಕ ಸ್ಟೀಫನ್ ಕೋವಿ ತಮ್ಮ ‘ಸೆವೆನ್ ಹ್ಯಾಬಿಟ್ಸ್ ಆಫ್ ಹೈಲಿ ಎಫೆಕ್ಟಿವ್ ಪೀಪಲ್’ ಕೃತಿಯಲ್ಲಿ ಹೇಳುವಂತೆ, ಬಹುಪಾಲು ಜನರು ತಮ್ಮೊಳಗಿನ ಶಕ್ತಿಯನ್ನು ಬಳಸದೆ, ಪರಿಸ್ಥಿತಿಗಳ ಒತ್ತಡಕ್ಕೆ ತಲೆಬಾಗುತ್ತಾರೆ. ಆತ್ಮವಿಶ್ವಾಸದ ಕೊರತೆ, ನಕಾರಾತ್ಮಕ ಮನೋಭಾವ, ಮತ್ತು ಗುರಿಯ ಸ್ಪಷ್ಟತೆಯ ಅಭಾವವೇ ಅಡೆತಡೆಗಳಾಗುತ್ತವೆ.

ಜೀವನದ ಸವಾಲುಗಳು

ಮಾನವನ ಚೈತನ್ಯಕ್ಕೆ ಮಿತಿಯಿಲ್ಲ. ಆದರೆ ನಾವು ಸ್ವತಃ ನಿರ್ಮಿಸುವ ನಕಾರಾತ್ಮಕ ಆಲೋಚನೆಗಳು ಆ ಮಿತಿಯನ್ನು ಕಟ್ಟುತ್ತವೆ. ಕನಸುಗಳು ದೊಡ್ಡದಾಗಿರಬೇಕು; ಅವು ಮಹಾತ್ವಾಕಾಂಶೆಯಾಗಬೇಕು. ಗುರಿಗಳು ಸ್ಪಷ್ಟವಾಗಿರಬೇಕು. ದೀರ್ಘಾವಧಿಯಲ್ಲಿಯೂ ಪ್ರಸ್ತುತವಾಗಿರಬೇಕು. ವಿದ್ಯಾರ್ಥಿಗಳಿಗೆ ವೈಯಕ್ತಿಕ ಜೀವನದಲ್ಲೂ, ವೃತ್ತಿ ಜೀವನದಲ್ಲೂ ಕೆಲವು ಸಾಮಾನ್ಯ ಸವಾಲುಗಳು ಎದುರಾಗುತ್ತವೆ.

ಅಭಿರುಚಿ ಮತ್ತು ಆಸಕ್ತಿಗೆ ಅನುಗುಣವಾಗಿ ವೃತ್ತಿಯ ಆಯ್ಕೆ

ವೃತ್ತಿಗೆ ತಕ್ಕ ಕೋರ್ಸ್ ಮತ್ತು ಕಾಲೇಜು/ವಿಶ್ವವಿದ್ಯಾಲಯ ಆಯ್ಕೆ

ವೃತ್ತಿಜೀವನದಲ್ಲಿ ನಿರೀಕ್ಷೆಗೆ ಮೀರಿದ ಉತ್ಪಾದಕತೆ.

ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಸಮತೋಲನ ಮತ್ತು ಸಂತೃಪ್ತಿ

ಈ ಸವಾಲುಗಳನ್ನು ಎದುರಿಸಲು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಪರಿಸ್ಥಿತಿ ಮತ್ತು ಪರಿಸರದ ಬಗ್ಗೆ ಸಕಾರಾತ್ಮಕ ಮನೋಭಾವವಿರಬೇಕು. ಯಶಸ್ಸಿಗೆ ನಿಜವಾದ ಕೀಲಿಕೈ ಇದೇ.

ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವುದು ಹೇಗೆ?

ಜೀವನ ವಿಧಾನವೆಂಬ ಯಾವುದೇ ಕೈಪಿಡಿ ಇಲ್ಲ. ತಪ್ಪುಗಳಾದಾಗ, ಅವುಗಳನ್ನು ಜೀವನದ ಪಾಠಗಳಂತೆ ಪರಿಗಣಿಸಿ, ಪುನರಾವರ್ತನೆಗೊಳಿಸದೆ ದೀರ್ಘಾವಧಿ ಗುರಿಗಳ ಸಾಧನೆಗೆ ಗಮನ ಹರಿಸಬೇಕು.

ದೃಷ್ಟಿಕೋನ ಬದಲಾಯಿಸಿ: ಪ್ರತಿಯೊಂದು ಸಂದರ್ಭದಲ್ಲೂ ತಪ್ಪುಗಳನ್ನು ಹುಡುಕುವುದಕ್ಕಿಂತ ಅವಕಾಶಗಳನ್ನು ಕಾಣುವ ಅಭ್ಯಾಸ ಬೆಳೆಸಿಕೊಳ್ಳಿ. ಉದಾಹರಣೆಗೆ, ಕಷ್ಟಕರ ಯೋಜನೆ ಬಂದಾಗ, ‘ಇದು ಸಾಧ್ಯವಿಲ್ಲ’ ಎನ್ನುವುದಕ್ಕಿಂತ ‘ಇದರಿಂದ ನಾನು ಹೊಸದನ್ನು ಕಲಿಯಬಹುದು’ ಎನ್ನುವ ಮನೋಭಾವ ಬೆಳೆಸಿಕೊಂಡರೆ ಚೈತನ್ಯ ವೃದ್ಧಿಸುತ್ತದೆ.

ಮುಂದೂಡುವ ಪ್ರವೃತ್ತಿ ತೊರೆಯಿರಿ: ಸಮಯವೇ ಅತ್ಯಂತ ಅಮೂಲ್ಯವಾದ ಸಂಪನ್ಮೂಲ. ’ಇಂದು ಮಾಡಬೇಕಾದ ಕೆಲಸವನ್ನು ನಾಳೆಗೆ ಮುಂದೂಡಬೇಡಿ’, ಎಂಬ ಗಾದೆಯನ್ನು ನೆನಪಿಟ್ಟುಕೊಂಡು, ಕೆಲಸಗಳನ್ನು ಯೋಜಿಸಿದ ಸಮಯಕ್ಕೆ ಮುಗಿಸಿದರೆ ದಕ್ಷತೆ ಹೆಚ್ಚುತ್ತದೆ, ಆತ್ಮವಿಶ್ವಾಸವೂ ವೃದ್ಧಿಸುತ್ತದೆ.

ಕಲಿಕೆ ನಿರಂತರವಾಗಿರಲಿ: ತಂತ್ರಜ್ಞಾನ ಕ್ಷಿಪ್ರವಾಗಿ ಬದಲಾಗುತ್ತಿದೆ. ಹೊಸ ಕೌಶಲ್ಯಗಳನ್ನು ಕಲಿಯುವುದು, ಮೌಲ್ಯಾಧಾರಿತ ಶಿಕ್ಷಣ ಪಡೆಯುವುದು, ಮತ್ತು ಜೀವನಪರ್ಯಂತ ಕಲಿಕೆಯ ಮನೋಭಾವ ಹೊಂದುವುದು ಅಗತ್ಯ. ಉದಾಹರಣೆಗೆ, ವೃತ್ತಿ ಜೀವನದಲ್ಲಿ ಮುಂಚೂಣಿಯಲ್ಲಿರಬೇಕಾದರೆ ಕೃತಕ ಬುದ್ಧಿಮತ್ತೆಯನ್ನು ನಮ್ಮ ವೃತ್ತಿಯಲ್ಲಿ ಸಮರ್ಪಕವಾಗಿ ಬಳಸುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಇಂದು ನಾವು ನೋಡುತ್ತಿರುವಂತೆ, ಹೆಚ್ಚಿನ ಆದಾಯದ ವೃತ್ತಿಯಿಂದಲೇ ಜೀವನದಲ್ಲಿ ಆರೋಗ್ಯವನ್ನಾಗಲೀ, ಸಂತೃಪ್ತಿಯನ್ನಾಗಲಿ ಪಡೆಯಲಾಗುವುದಿಲ್ಲ.

ಪರಸ್ಪರ ಭಿನ್ನಾಭಿಪ್ರಾಯ, ವೈಮನಸ್ಯಗಳಿಲ್ಲದೆ ವೃತ್ತಿ ಮತ್ತು ವೈಯಕ್ತಿಕ ಜೀವನದ ಸಮತೋಲನವೇ ಸಂತೃಪ್ತಿಗೆ ಮೂಲ ಕಾರಣವಾಗುತ್ತದೆ.

ಸ್ವಗೌರವ ಬೆಳೆಸಿಕೊಳ್ಳಿ:

ನಿಮ್ಮ ಬಗ್ಗೆ ನಿಮಗಿರುವ ಭಾವನೆ ನಿಮ್ಮ ಕಾರ್ಯಶೈಲಿಯನ್ನು ನಿರ್ಧರಿಸುತ್ತದೆ. 'ನಾನು ಮಾಡಬಲ್ಲೆ" ಎಂಬ ನಂಬಿಕೆ ಸ್ವಗೌರವವನ್ನು ಬಲಪಡಿಸುತ್ತದೆ. ಆತ್ಮಗೌರವವಿಲ್ಲದವರು ಸಹೋದ್ಯೋಗಿಗಳೊಡನೆ, ಮೇಲಧಿಕಾರಿಗಳೊಡನೆ ಅಂತರ್-ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳಲು ಕಷ್ಟಪಡುತ್ತಾರೆ.

ಸಕಾರಾತ್ಮಕ ಭಾವನೆಗಳನ್ನು ಹರಡಿ:

ಇಂದಿನ ಉದ್ಯೋಗ ಜಗತ್ತಿನಲ್ಲಿ ಅನಿಶ್ಚತೆಯ ವಾತಾವರಣವಿದೆ. ಆದ್ದರಿಂದ, ನಕಾರಾತ್ಮಕ ಚಟುವಟಿಕೆಗಳಿಂದ ದೂರವಿರಿ. ಗಾಸಿಪ್, ಟೀಕೆ, ದೂರುಗಳ ಬದಲು ಉದ್ಯಮದ ಅಭಿವೃದ್ಧಿಗಾಗಿ ರಚನಾತ್ಮಕ ಸಲಹೆ ನೀಡಿ. ಇಂತಹ ಸಲಹೆ, ಸದ್ಭಾವನೆಗಳನ್ನು ಹಂಚಿಕೊಂಡರೆ ಮೇಲಧಿಕಾರಿಗಳ ವಿಶ್ವಾಸ ದೊರಕಿ, ವೃತ್ತಿಯಲ್ಲಿ ಪ್ರಗತಿ ಖಚಿತವಾಗುತ್ತದೆ.

ಜೀವನದ ಮಹತ್ವಾಕಾಂಶೆಗಳಂತೆ ಗುರಿಗಳಿರಲಿ

ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ನಿರ್ದಿಷ್ಟ, ಸ್ಪಷ್ಟ, ಸಾಧಿಸಬಹುದಾದ, ಅಳೆಯಬಹುದಾದ, ಕಾಲಮಿತಿಗೆ ಒಳಪಟ್ಟಿರುವ ಗುರಿಗಳಿರಬೇಕು. ಗುರಿ ಇಲ್ಲದ ಜೀವನ ದಿಕ್ಕಿಲ್ಲದ ಹಡಗಿನಂತೆ. ಗುರಿಗಳಿದ್ದರೆ, ಮನಸ್ಸು ದೃಢವಾಗಿದ್ದರೆ, ಅಗತ್ಯಕ್ಕೆ ತಕ್ಕ ಪರಿಶ್ರಮವಿದ್ದರೆ, ಸಕಾರಾತ್ಮಕ ಮನೋಭಾವದಿಂದ, ಪ್ರತಿಯೊಂದು ಸವಾಲು ಕೂಡಾ ಯಶಸ್ಸಿನ ಮೆಟ್ಟಿಲಾಗಿ. ನಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬಹುದು.

(ಲೇಖಕ: ಪ್ರದೀಪ್ ಎಸ್. ವೆಂಕಟರಾಮ್, ಶಿಕ್ಷಣ ತಜ್ಞ ಮತ್ತು ವೃತ್ತಿ ಸಲಹೆಗಾರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.