ಚಂದ್ರಹಾಸ ಹಿರೇಮಳಲಿ

ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರ ಹೆಸರಿನಲ್ಲಿ ಅಧ್ಯಯನ ಪೀಠಗಳನ್ನು ಎಲ್ಲ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲೂ ಸ್ಥಾಪಿಸಬೇಕು ಎಂದು ಪ್ರೊ.ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಸಮಿತಿ ಶಿಫಾರಸು ಮಾಡಿದೆ.

ವಿಶ್ವವಿದ್ಯಾಲಯಗಳಲ್ಲಿ ಹಲವು ಅಧ್ಯಯನ ಪೀಠಗಳಿದ್ದರೂ ಸಾಧಕ ಮಹಿಳೆಯರ ಹೆಸರಿನ ಪೀಠಗಳ ಸಂಖ್ಯೆ ಅತ್ಯಂತ ಕಡಿಮೆ ಇವೆ. ಹಾಗಾಗಿ, ಗಣನೀಯ ಸಾಧನೆ ಮಾಡಿದ ಮಹಿಳೆಯರ ಹೆಸರಿನ ಪೀಠಗಳ ಅಗತ್ಯವಿದೆ. ಭವಿಷ್ಯದಲ್ಲಿ ಸ್ಥಾಪನೆಯಾಗುವ ಪೀಠಗಳಲ್ಲಿ ಸಾಧಕಿಯರಿಗೂ ಆದ್ಯತೆ ನೀಡಬೇಕು ಎಂದು ಸಮಿತಿ ತನ್ನ ಅಧ್ಯಯನ ವರದಿಯಲ್ಲಿ ಹೇಳಿದೆ.

ಅಧ್ಯಯನ ಪೀಠಗಳಿಗೆ ಇಟ್ಟಿರುವ ಇಡುಗಂಟುಗಳಲ್ಲಿ ಭಾರಿ ವ್ಯತ್ಯಾಸವಿದೆ. ₹5ಲಕ್ಷದಿಂದ ಆರಂಭವಾಗಿ ₹5 ಕೋಟಿಯವರೆಗೂ ಇದೆ. ಇಡುಗಂಟಿನಿಂದ ಬರುವ ಬಡ್ಡಿಯ ಹಣದಲ್ಲೇ ಅಧ್ಯಯನ ಪೀಠಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಈ ವ್ಯತ್ಯಾಸದ ಫಲವಾಗಿ ಕೆಲ ಅಧ್ಯಯನ ಪೀಠಗಳು ಉತ್ತಮವಾಗಿ ನಡೆದರೆ, ಇನ್ನೂ ಕೆಲವು ಸಂಪೂರ್ಣ ನಿಷ್ಕ್ರಿಯವಾಗಿವೆ. ಹಾಗಾಗಿ, ಏಕರೀತಿಯ ಇಡುಗಂಟು ನೀಡಬೇಕು. ಪ್ರತಿ ಪೀಠಕ್ಕೂ ಕನಿಷ್ಠ ₹1 ಕೋಟಿ ಬಿಡುಗಡೆ ಮಾಡಬೇಕು. ಸಮಾನ ಉದ್ದೇಶ ಹೊಂದಿರುವ ನಿಗಮ–ಮಂಡಳಿಗಳು, ಪ್ರಾಧಿಕಾರಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಹೆಚ್ಚುವರಿ ಹಣದ ಅಗತ್ಯವಿರುವ ಪೀಠಗಳು ಕ್ರಿಯಾ ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸಮಿತಿ ಹೇಳಿದೆ.

ಒಂದೇ ನಿಯಮ ಜಾರಿ: ಎಲ್ಲ ಅಧ್ಯಯನ ಪೀಠಗಳಿಗೂ ಏಕ ರೀತಿಯ ನಿಯಮ ರೂಪಿಸಬೇಕು. ನಿಯಮಗಳ ಆಧಾರದಲ್ಲೇ ಕಾರ್ಯಕ್ರಮಗಳ ಆಯೋಜನೆ. ವಿಚಾರಸಂಕಿರಣ, ಕಾರ್ಯಾಗಾರ, ಅಧ್ಯಯನ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಪ್ರತಿ ಪೀಠವೂ ಎರಡು ತಿಂಗಳಿಗೆ ಒಂದು ಕಾರ್ಯಕ್ರಮ, ಒಂದು ವರ್ಷದಲ್ಲಿ ಎರಡು ಪುಸ್ತಕ ಪ್ರಕಟಿಸಬೇಕು. ಆಯಾ ಪೀಠಗಳು ವಿಷಯಗಳ ಬಗ್ಗೆ ಆಸಕ್ತಿ, ಅರಿವು ಇರುವ ಪ್ರಮುಖರನ್ನು ಒಳಗೊಂಡ ಆಂತರಿಕ ಸಲಹಾ ಸಮಿತಿ ರಚಿಸಿಕೊಳ್ಳಬೇಕು. ಸಂದರ್ಶಕ ಅಧ್ಯಾಪಕರ ನೇಮಕ ಮಾಡಿಕೊಳ್ಳಬೇಕು. ಸಂಯೋಜಕರಿಗೆ ನಿಗದಿಪಡಿಸಿದ ಗೌರವ ಸಂಭಾವನೆ ನೀಡಬೇಕು. ಸಂಯೋಜಕರು, ಸಂದರ್ಶಕರ ಅವಧಿಯನ್ನು ಎರಡು ವರ್ಷಗಳಿಗೆ ಮಿತಿಗೊಳಿಸಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.

ಪೀಠಗಳ ಆಶಯಕ್ಕೆ ಅನುಗುಣವಾಗಿ ಸರ್ಟಿಫಿಕೇಟ್ ಕೋರ್ಸ್ಗಳನ್ನು ಆರಂಭಿಸಬಹುದು. ವಿಷಯಗಳ ಕುರಿತು ಆಳ ಅಧ್ಯಯನ ಮಾಡಿ ಕೃತಿ ರಚನೆ ಮಾಡಲು ಫೆಲೋಶಿಪ್ ನೀಡಬಹುದು ಎಂದು ಸಮಿತಿ ಹೇಳಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-51-315739428

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.