ಯಾದಗಿರಿ: ‘ಶಿಕ್ಷಣ ಹಕ್ಕು ಕಾಯ್ದೆ- 2009ರ (ಆರ್ಟಿಇ) ಪ್ರಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಗುವಿನ ಮೂಲಭೂತ ಹಕ್ಕಾಗಿದೆ. ಮಗುವಿಗೆ ತನ್ನ ಬದುಕಿಗೆ ಬೇಕಾದ ಕನಿಷ್ಠ ಮಟ್ಟದ ಶಿಕ್ಷಣವನ್ನು ಗಳಿಸಿಕೊಳ್ಳಲು ಆಗದೆ ಇದ್ದಾಗ, ತನಗೆ ಸರಿಯಾಗಿ ಕಲಿಸಿದ ಶಿಕ್ಷಕರಿಂದ ಜೀವನೋಪಾಯಕ್ಕೆ ಪರಿಹಾರ ಕೊಡಿಸುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಬಹುದು’ ಎಂದು ಡಿಡಿಪಿಐ ನ್ನಬಸಪ್ಪ ಮುಧೋಳ ಹೇಳಿದರು.

ಇಲ್ಲಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸೋಮವಾರ ಶಾಲಾ ಶಿಕ್ಷಣ ಇಲಾಖೆ ಮತ್ತು ಅಕ್ಷರ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಗಣಿತ ವಿಚಾರ ಸಂಕಿರಣ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬದುಕು ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳು. ಒಬ್ಬ ವ್ಯಕ್ತಿಗೆ ಕನಿಷ್ಠ ಶಿಕ್ಷಣ ಸಿಗದೆ ಇದ್ದಾಗ ಆತ ಉತ್ತಮವಾಗಿ ಬದುಕಲು ಆಗದೆ, ದೌರ್ಜನ್ಯ, ಮೋಸಕ್ಕೆ ಒಳಗಾಗಬಹುದು. ಒಳ್ಳೆಯ ಆರೋಗ್ಯ ಮತ್ತು ವಾತಾವರಣವೂ ಸಿಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟು ಆರ್ಟಿಇ– 2009 ಕಾಯ್ದೆ 21 ಎ ಅಡಿ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ಸೇರಿಸಿದ್ದಾರೆ’ ಎಂದರು.

‘ಒಬ್ಬ ವ್ಯಕ್ತಿಯು 1 ರಿಂದ 10ನೇ ತರಗತಿಯವರೆಗೆ ಸರಿಯಾಗಿ ಶಾಲೆಗೆ ತೆರಳಿ. 6 ರಿಂದ 10ನೇ ತರಗತಿಯ ಕಲಿಕಾ ಸಾಮರ್ಥ್ಯ ಆಧಾರಿತವಾದ ಎಸ್ಡಿಎ ಪರೀಕ್ಷೆಯನ್ನು ಕೆಲ ಅಂಕಗಳಿಂದ ಫೇಲಾದರೆ, ಕನಿಷ್ಠ ಮಟ್ಟದ ಕಲಿಕಾ ಸಾಮರ್ಥ್ಯವನ್ನು ಗಳಿಸಿಕೊಡುವಲ್ಲಿ ನನ್ನ ಶಿಕ್ಷಕರು ವಿಫಲವಾಗಿದ್ದಾರೆ ಎಂದು ದೂರಿ ಮೂಲಭೂತ ಹಕ್ಕಿನಡಿ ಕೋರ್ಟ್ ಮೆಟ್ಟಿಲು ಹತ್ತಬಹುದು. ಒಂದು ವೇಳೆ ತಪ್ಪು ಕಂಡುಬಂದಲ್ಲಿ ಜೀವನಾಂಶ ಕೊಡುವಂತೆ ಕೋರ್ಟ್ ಆದೇಶಿಸಬಹುದು. ಹೀಗಾಗಿ, ಶಿಕ್ಷಕರು ಶಿಕ್ಷಣದ ಮೂಲಭೂತ ಹಕ್ಕನ್ನು ಅರಿತು ಜವಾಬ್ದಾರಿಯುತವಾಗಿ ಬೋಧಿಸಬೇಕಿದೆ’ ಎಂದು ಎಚ್ಚರಿಸಿದರು.

‘ಮತ್ತೊಂದೆಡೆ, ಶಾಲೆಗೆ ಬಂದಂತಹ ಮಕ್ಕಳಿಗೆ ಸರಿಯಾಗಿ ಕಲಿಸದ ಶಿಕ್ಷಕರಿಗೆ ಆರ್ಟಿಇ– 2009ರ ಅನ್ವಯ ಮಕ್ಕಳ ಶಿಕ್ಷಣ ಹಕ್ಕು ಕಸಿದುಕೊಂಡು, ಕಾಯ್ದೆ ಉಲ್ಲಂಘನೆ ಮಾಡಿದ್ದಾಗಿ ನೋಟಿಸ್ ಕೊಟ್ಟು, ಮುಂಬಡ್ತಿ ತಡೆದರೂ ಯಾರೂ ಅಡ್ಡ ಬರಲ್ಲ. ಒಂದು ವೇಳೆ ಕೋರ್ಟ್ಗೆ ಹೋದರೆ ಅದಕ್ಕಿಂತಹ ದೊಡ್ಡ ದಂಡನೆಗೆ ಒಳಗಾಗಬೇಕಾಗುತ್ತದೆ’ ಎಂದು ಹೇಳಿದರು.

‘ನಾವು ನಮ್ಮ ಜವಾಬ್ದಾರಿಗಳನ್ನು ಹೊತ್ತುಕೊಳ್ಳದೆ ವ್ಯವಸ್ಥೆಯ ಮೇಲೆ ಭಾರ ಹಾಕಿ, ಮುಖ್ಯಶಿಕ್ಷಕರು ಸರಿಯಲ್ಲ ಎಂದು ದೋಷಿಸುತ್ತಿದ್ದೇವೆ. ಆದರೆ, ನಾವು ಎಷ್ಟರ ಮಟ್ಟಿಗೆ ಸರಿ ಇದ್ದೆವೆ ಎಂಬುದನ್ನು ನೋಡಿಕೊಳ್ಳಬೇಕು. ಸಮಾಜ ಶಿಕ್ಷಕರನ್ನು ಒಂದೇ ಚೌಕಟ್ಟಿನಲ್ಲಿ ನೋಡುತ್ತಿದೆ. ನಮ್ಮ ಬೇಕುಗಳ ನಡುವೆ ಒಂದು ತಲೆಮಾರು ಹಾಳಾಗದಂತೆ ನೋಡುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಹೇಳಿದರು.

ಫೌಂಡೇಷನ್ನ ವಿಭಾಗೀಯ ಕ್ಷೇತ್ರ ಹಿರಿಯ ವ್ಯವಸ್ಥಾಪಕ ರಂಗನಾಥ ಪಲ್ಲೇದ್ ಮಾತನಾಡಿ, ‘ಜಿಲ್ಲೆಯ ಫಲಿತಾಂಶವನ್ನು ಕುಸಿಯದಂತೆ ನೋಡಿಕೊಳ್ಳಬೇಕು. ಶಾಲಾ ಶಿಕ್ಷಣದಲ್ಲಿ ಸಮುದಾಯ ಹಾಗೂ ಸ್ವಯಂಸೇವಕರ ಸಹಭಾಗಿತ್ವ ಅಗತ್ಯವಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಯಟ್ ಉಪನ್ಯಾಸಕ ಎಂ.ಶೇಖರಪ್ಪ, ಬಿಆರ್ಸಿ ಸಮನ್ವಯ ಅಧಿಕಾರಿ ಜಗದೀಶ ಸಜ್ಜನ ಉಪಸ್ಥಿತರಿದ್ದರು. ಬಿಆರ್ಪಿ ವೆಂಕಟರೆಡ್ಡಿ ನಿರೂಪಿಸಿ, ಮಂಜುನಾಥ ಗುರುಸುಣಗಿ ಸ್ವಾಗತಿಸಿ, ಪ್ರದೀಪ್ರೆಡ್ಡಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-30-1726060228

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.