ಯಾದಗಿರಿ: ಬೇಸಿಗೆಯ ರಜೆಯಲ್ಲಿ ಇರುವ ಮಕ್ಕಳು ಇನ್ನು ಕೆಲವೇ ದಿನಗಳಲ್ಲಿ ಖುಷಿಯಿಂದ ಶಾಲೆಗೆ ಹೊರಡಲು ಸಜ್ಜಾಗಲಿದ್ದಾರೆ. ಇತ್ತ ಶಿಕ್ಷಣ ಇಲಾಖೆಯು ಶೈಕ್ಷಣಿಕ ವರ್ಷದ ಆರಂಭದ ದಿನವೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಣೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.

ಜಿಲ್ಲೆಯಲ್ಲಿ 2026–27ನೇ ಸಾಲಿನ ತರಗತಿಗಳು ಮೇ 29ರಿಂದ ಆರಂಭಗೊಳ್ಳಲಿವೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಉಚಿತವಾಗಿ ಹಾಗೂ ಅನುದಾನ ರಹಿತ ಶಾಲೆಗಳಿಗೆ ನಿಗದಿತ ಬೆಲೆಯನ್ನು ನಿಗದಿಪಡಿಸಿ ಸರ್ಕಾರ ಪಠ್ಯ ಪುಸ್ತಕಗಳನ್ನು ಸರಬರಾಜು ಮಾಡುತ್ತದೆ.

ಕನ್ನಡ, ತೆಲಗು, ಉರ್ದು ಮತ್ತು ಇಂಗ್ಲಿಷ್ ಮಾಧ್ಯಮಗಳ ಪಠ್ಯಪುಸ್ತಕಗಳಿಗೆ ಜಿಲ್ಲೆಯಿಂದ ಈ ಬಾರಿ ಒಟ್ಟು 25.12 ಲಕ್ಷ ಪಠ್ಯ ಪುಸ್ತಕಗಳಿಗೆ ಬೇಡಿಕೆ ಸಲ್ಲಿಕೆಯಾಗಿದೆ. ಸಲ್ಲಿಕೆಯಾಗಿರುವ ಬೇಡಿಕೆಯ ಪೈಕಿ ಈಗಾಗಲೇ 15.82 ಲಕ್ಷ ಪುಸ್ತಕಗಳು ಸರಬರಾಜು ಮಾಡಿದ್ದು, ಜಿಲ್ಲೆಯ ಮೂರು ಬಿಇಒ ಕಚೇರಿಗಳು ಅವುಗಳನ್ನು ಸ್ವೀಕಾರ ಮಾಡಿವೆ. ಇನ್ನೂ 9.30 ಲಕ್ಷ ಪುಸ್ತಕಗಳು ಬರಬೇಕಿದ್ದು, ಈ ಹಿಂದಿನ ವರ್ಷದಲ್ಲಿ ಉಳಿಕೆಯಾದ 69 ಸಾವಿರ ಪುಸ್ತಕಗಳೂ ಇವೆ.

ಯಾದಗಿರಿ ಬಿಇಒ ಕಚೇರಿ ವ್ಯಾಪ್ತಿಯಿಂದ ಉಚಿತ ವಿತರಣೆಯಡಿ ಒಟ್ಟು 6.51 ಲಕ್ಷ ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಿದ್ದು, 3.76 ಲಕ್ಷ ಸರಬರಾಜು ಆಗಿವೆ. ಇನ್ನೂ 2.71 ಲಕ್ಷ ಪುಸ್ತಕಗಳು ಬರಬೇಕಿದೆ. ಮಾರಾಟ ವಿಭಾಗದಲ್ಲಿ ಇಂಡೆಂಟ್ ಕಳುಹಿಸಲಾದ 1.59 ಲಕ್ಷ ಪುಸ್ತಕಗಳ ಪೈಕಿ 87 ಸಾವಿರ ಪುಸ್ತಕಗಳನ್ನು ಸ್ವೀಕರಿಸಲಾಗಿದೆ. 42 ಸಾವಿರ ಪುಸ್ತಕಗಳು ಬರಬೇಕಿದೆ. ಈ ಹಿಂದಿನ ವರ್ಷದಲ್ಲಿ 32 ಸಾವಿರ ಉಳಿಕೆ ಪುಸ್ತಕಗಳಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡರು.

ಸುರಪುರ ಬಿಇಒ ಕಚೇರಿಯು 7.79 ಲಕ್ಷ ಉಚಿತ ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಿತ್ತು. ಅದರಲ್ಲಿ 4.48 ಲಕ್ಷ ಪುಸ್ತಕಗಳು ಬಂದಿದ್ದು, 3.28 ಲಕ್ಷ ಬರಬೇಕಾಗಿದೆ. ಮಾರಾಟದ 1.11 ಲಕ್ಷ ಪುಸ್ತಕಗಳಲ್ಲಿ 59 ಸಾವಿರ ಪುಸ್ತಕಗಳು ಪೂರೈಕೆಯಾಗಿದ್ದು, 17 ಸಾವಿರ ಪುಸ್ತಕಗಳು ಬಾಕಿ ಇವೆ. ಕಳೆದ ವರ್ಷದ 37 ಸಾವಿರ ಉಳಿಕೆ ಪಠ್ಯಪುಸ್ತಕಗಳಿವೆ.

ಶಹಾಪುರ ಬಿಇಒ ವ್ಯಾಪ್ತಿಯಿಂದ ಉಚಿತ ವಿಭಾಗದಲ್ಲಿ 6.64 ಲಕ್ಷ ಪಠ್ಯ ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಿದ್ದು, 4.95 ಲಕ್ಷ ಪುಸ್ತಕಗಳು ಬಂದಿವೆ. 1.68 ಲಕ್ಷ ಬರಲು ಬಾಕಿ ಉಳಿದಿದೆ. ಮಾರಾಟ ವಿಭಾಗದಲ್ಲಿ ಕೇಳಲಾದ 1.45 ಲಕ್ಷ ಪುಸ್ತಕಗಳ ಪೈಕಿ 1.14 ಲಕ್ಷ ಪುಸ್ತಕಗಳು ಬಂದಿದ್ದು, ಇನ್ನು 31 ಸಾವಿರ ಪಠ್ಯಪುಸ್ತಕಗಳು ಬರಬೇಕಿದೆ. ಈಗಾಗಲೇ ಶೇ 79ರಷ್ಟು ಪುಸ್ತಕಗಳು ಬಂದಿದ್ದು, ಉಳಿದವು ಶಾಲೆ ಆರಂಭ ಆಗುವ ವೇಳೆಗೆ ಬಂದು ಸೇರಲಿದೆ ಎನ್ನುತ್ತಾರೆ ಡಿಡಿಪಿಐ ಕಚೇರಿ ಅಧಿಕಾರಿಗಳು.

‘ಪುಸ್ತಕ ವಿತರಣೆ ಆರಂಭ, ಸಮವಸ್ತ್ರವೂ ಪೂರೈಕೆ’

‘ಬಿಇಒ ಕಚೇರಿಗಳಿಗೆ ಬಂದಂತಹ ಪುಸ್ತಕಗಳನ್ನು ಆಯಾ ಶಾಲೆಗಳಿಗೆ ಕಳುಹಿಸಿ ಮುಖ್ಯಶಿಕ್ಷಕರ ಮೂಲಕ ವಿತರಣೆ ಮಾಡಲಾಗುತ್ತಿದೆ. ಜೂನ್ 1ಕ್ಕೆ ಶಾಲೆಗೆ ಮಕ್ಕಳು ಬಂದ ತಕ್ಷಣವೇ ಕೈಗೆ ಪಠ್ಯಪುಸ್ತಕಗಳನ್ನು ಕೊಡುವಂತೆಯೂ ಸೂಚಿಸಲಾಗಿದೆ’ ಎಂದು ಡಿಡಿಪಿಐ ಚನ್ನಬಸಪ್ಪ ಮುಧೋಳ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ಯಾಟ್ಸ್ ತಂತ್ರಾಂಶದಲ್ಲಿನ ಕಳೆದ ವರ್ಷದ ಮಕ್ಕಳ ಹಾಜರಾತಿ ಅನುಸಾರ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರ ಪೂರೈಕೆಯಾಗಲಿದೆ. ಬಾಲಕಿಯರಿಗೆ ಎರಡು ಜೊತೆ ಹಾಗೂ ಬಾಲಕರಿಗೆ ಒಂದು ಸಮವಸ್ತ್ರ ವಿತರಣೆ ಮಾಡಲಾಗುವುದು. 1ರಿಂದ 10ನೇ ತರಗತಿ ವರಗಿನ ಬಾಲಕರ ಸಮವಸ್ತ್ರ ಹಾಗೂ 1ರಿಂದ 5ನೇ ತರಗತಿವರೆಗಿನ ಬಾಲಕಿಯರ ಸಮವಸ್ತ್ರಗಳು ಪೂರೈಕೆಯಾಗಿವೆ’ ಎಂದರು.

‘6ರಿಂದ 10ನೇ ತರಗತಿ ವರಗಿನ ಬಾಲಕಿಯರ ಸಮವಸ್ತ್ರ ಶೀಘ್ರವೇ ಬರಲಿದೆ. ಈ ಬಾರಿಯ ಶೂ ಮತ್ತು ಶಾಕ್ಸ್ ರಾಜ್ಯ ಮಟ್ಟದಿಂದಲೇ ವಿತರಣೆಯಾಗಲಿದ್ದು, ಜೂನ್ ಅಂತ್ಯದೊಳಗೆ ವಿದ್ಯಾರ್ಥಿಗಳಿಗೆ ತಲುಪಲಿವೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.