ವಡಗೇರಾ: ತಾಲ್ಲೂಕಿನ ಕಾಡಂಗೇರಾ (ಬಿ) ಗ್ರಾಮದ ಪಿಎಂಶ್ರೀ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ‘ಶಾಲಾ ಪ್ರಾರಂಭೋತ್ಸವ’ದ ಅಂಗವಾಗಿ ಶಾಲಾ ಮಕ್ಕಳು, ಶಿಕ್ಷಕರು ಮತ್ತು ಅಧಿಕಾರಿಗಳು ಎತ್ತಿನ ಬಂಡಿಗಳನ್ನು ಏರಿ ಶಾಲೆಗೆ ಬಂದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಎತ್ತಿನ ಬಂಡಿ ಮತ್ತು ಡೊಳ್ಳು ವಾದ್ಯಗಳ ಮೂಲಕ ಮೆರವಣಿಗೆಯಲ್ಲಿ ಶಾಲೆಗೆ ಬಂದರು.

ಯಾದಗಿರಿ ಡಯಟ್ ಪ್ರಾಂಶುಪಾಲ ನಿಂಗಣ್ಣ ಸಿಂಪಿ ಮಾತನಾಡಿ, ‘ತಾಲ್ಲೂಕಿನಲ್ಲಿ ಶಿಕ್ಷಕರ ಕೊರತೆ ಇದ್ದರೂ ಶೈಕ್ಷಣಿಕವಾಗಿ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಳ್ಳಲಾಗಿದೆ. ಕಾಡಂಗೇರ ಪ್ರೌಢಶಾಲೆಯು ಪ್ರಸಕ್ತ ವರ್ಷದಲ್ಲಿ ಪ್ರತಿಶತ ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್ ಎನ್.ಮಂಗಳಾ, ‘ಪ್ರಸ್ತುತ ವರ್ಷದಲ್ಲಿಯೂ ಕಾಡಂಗೇರಾ ಶಾಲೆ ನೂರಕ್ಕೆ ನೂರು ಫಲಿತಾಂಶ ಸಾಧನೆ ಮಾಡಲಿ’ ಎಂದು ಹಾರೈಸಿದರು.

ಇಒ ಶಶಿಧರ್ ಹಿರೇಮಠ ಮಾತನಾಡಿ, ‘ಸರ್ಕಾರದಿಂದ ಶಿಕ್ಷಣಕ್ಕಾಗಿ ಸಾಕಷ್ಟು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಯಾವುದೇ ಮಗು ಶಾಲೆಯಿಂದ ಹೊರಗೆ ಉಳಿಯದಂತೆ ನೋಡಿಕೊಳ್ಳುವುದು ಶಿಕ್ಷಕರ ಮತ್ತು ಪೋಷಕರ ಕರ್ತವ್ಯ’ ಎಂದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕ ಆಯುಬ್ ಜಮಾದಾರ್, ಶಿಕ್ಷಣ ಸಂಯೋಜಕ ನಿಂಗನಗೌಡ ಕಲಾಲ್, ಪಿಡಿಒ ಶೇಷಗಿರಿರಾವ್ ಕುಲಕರ್ಣಿ, ಡಯಟ್ನ ಉಪನ್ಯಾಸಕರಾದ ರಂಗೋಜಿ ಕೋತಂಬರಿಕರ್, ಅಂಬ್ರಣ್ಣ, ಬಿಆರ್ಪಿ ವೆಂಕಟೇಶ್ ಗಡ್ಡದ್, ಸಿಆರ್ಪಿ ಮಲ್ಕಪ್ಪ ನಾಶಿ, ಎಸ್ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.

ಶಿಕ್ಷಕರಾದ ನರಸಪ್ಪ ನಿರೂಪಿಸಿ, ಖಾಜಾ ಮೈನುದ್ದೀನ್ ಸ್ವಾಗತಿಸಿ, ರಾಘವೇಂದ್ರ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-30-100854719

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.