ಹುಣಸಗಿ: ‘ಪುಸ್ತಕ, ಗ್ರಂಥಗಳು ಕೇವಲ ಸರಕಾಗದೇ ನಮ್ಮ ಜ್ಞಾನ ಸಂಪತ್ತನ್ನು ಹೆಚ್ಚಿಸುವ ಹಾಗೂ ಸಂಸ್ಕೃತಿಯ ಪ್ರತೀಕವಾಗಿದ್ದು, ಮನೆಗೊಂದು ಗ್ರಂಥಾಲಯ ಇರುವುದು ಇಂದಿನ ತುರ್ತು’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಹೇಳಿದರು.

ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದ ಅಡಿಯಲ್ಲಿ ಹುಣಸಗಿ ಪಟ್ಟಣದ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಕುಮಾರ ಬಂಡೋಳಿ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ಗ್ರಂಥಾಲಯಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಮನೆಯಲ್ಲಿರುವ ಪ್ರತಿಯೊಂದು ಪುಸ್ತಕವು ಅರಿವಿನ ಹಾಗೂ ಜ್ಞಾನದ ಸಂಕೇತವಾಗಿದೆ. ಈ ಕುರಿತು ಜಾಗ್ರತಿಗಾಗಿ ಯಾದಗಿರಿ ಜಿಲ್ಲೆಯ ಹುಣಸಗಿಯಲ್ಲಿ ಮೊದಲ ಕಾರ್ಯಕ್ರಮ ಆರಂಭವಾಗುತ್ತಿದ್ದು, ಈ ಪುಸ್ತಕ ಕೊಳ್ಳುವ ಹಾಗೂ ಓದುವ ಸಂಸ್ಕೃತಿ ಎಲ್ಲರಿಗೂ ಮಾದರಿಯಾಗಲಿ’ ಎಂದು ಹೇಳಿದರು.

‘ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅದನ್ನು ಓದುವುದರಿಂದ ಮಾತ್ರ ತಿಳಿದುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಮನೆಗೊಂದು ಗ್ರಂಥಾಲಯ ಯೊಜನೆಯಡಿ ಒಂದು ಲಕ್ಷ ಗ್ರಂಥಾಲಯಗಳನ್ನು ಗುರತಿಸಿ ಪ್ರೋತ್ಸಾಹಿಸುವ ಗುರಿ ಹೊಂದಲಾಗಿದೆ’ ಎಂದು ವಿವರಿಸಿದರು.

ಜಿಲ್ಲಾ ಸಂಚಾಲಕ ಪ್ರಕಾಶ ಅಂಗಡಿ ಕನ್ನಳ್ಳಿ ಮಾತನಾಡಿ, ‘ಯಾದಗಿರಿ ಜಿಲ್ಲೆಯು ಅತ್ಯಂತ ಐತಿಹಾಸಿಕ ಮತ್ತು ಸಾಹಿತ್ಯಕ ಶ್ರೀಮಂತಿಕೆ ಹೊಂದಿರುವ ಜಿಲ್ಲೆಯಾಗಿದೆ. ಮುಂದಿನ ದಿನಮಾನಗಳಲ್ಲಿ ಜಿಲ್ಲೆಯ ಸಾಹಿತಿಗಳು ಮತ್ತು ಅವರ ಕೃತಿಗಳನ್ನು ಗುರುತಿಸುವ ಕಾರ್ಯ ಪ್ರಾಧಿಕಾರದಿಂದ ಸೂಕ್ತ ಪ್ರತಿಭೆಗಳಿಗೆ ಅವಕಾಶ ಸಿಗುವಂತಾಗಲಿ’ ಎಂದರು.

‘ಹುಣಸಗಿ ತಾಲ್ಲೂಕಿನಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆಗಳಲ್ಲಿ ಈ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಆಯೋಜಿಸಲಾಗಿದ್ದು, ಶುಕ್ರವಾರ ಸುರಪುರ ತಾಲ್ಲೂಕಿನಲ್ಲಿ ನಡೆಯಲಿದೆ’ ಎಂದು ತಿಳಿಸಿದರು.

ತಾಲ್ಲೂಕು ಸಂಚಾಲಕ ನೀಲಕಂಠ ಹೊನಕಲ್ಲ ಮಾತನಾಡಿದರು. ಪ.ಪಂ ಸದಸ್ಯ ಸಿದ್ರಾಮಪ್ಪ ಮುದಗಲ್ಲ, ನಿವೃತ್ತ ಅಭಿವೃದ್ಧಿ ಅಧಿಕಾರಿ ಬಸವರಾಜ ಬಂಡೋಳಿ, ವೆಂಕಟಗಿರಿ ದೇಶಪಾಂಡೆ, ಪರಮಣ್ಣ ನಿಲೋಗಲ್ಲ, ಪಾಟೀಲ ಬಸನಗೌಡ, ನಾಗನಗೌಡ ಪಾಟೀಲ, ಎಸ್.ಎಸ್.ಮಾರನಾಳ, ಶರಣಗೌಡ ಗೆಣ್ಣೂರ, ಮಹೇಶ ಸ್ಥಾವರಮಠ, ಗುರುನಾಥ ನಾವದಗಿ, ನೀಲಮ್ಮ ನಾಗರಬಟ್ಟ, ಮಹಾದೇವಿ ಬೇನಾಳಮಠ, ಶಶಿಕಲಾಮಠದ ಸೇರಿದಂತೆ ಇತರರು ಇದ್ದರು. ಶಿವಲೀಲಾ ಮುರಾಳ ಪ್ರಾರ್ಥಿಸಿದರು. ಬಸವಶ್ರೀ ನಿರೂಪಿಸಿ, ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-30-1656873910

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.