ಯಾದಗಿರಿ: ‘ಜೈಲಿನ ಕೈದಿಗಳು ತಮ್ಮ ಹಳೆಯ ತಪ್ಪುಗಳನ್ನು ತಿದ್ದಿಕೊಂಡು ಬಿಡುಗಡೆಯಾದ ಬಳಿಕ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕು ನಡೆಸಬೇಕು’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ನ್ಯಾಯಾಧೀಶ ಮರಿಯಪ್ಪ ಹೇಳಿದರು.

ನಗರದ ಜಿಲ್ಲಾ ಕಾರಾಗೃಹದಲ್ಲಿ ಈಚೆಗೆ ಆಯೋಜಿಸಿಲಾಗಿದ್ದ ಮಾದಕ ವಸ್ತು ಮುಕ್ತ ಭಾರತಕ್ಕಾಗಿ ಮಾದಕ ವಸ್ತು ಜಾಗೃತಿ ಮತ್ತು ಸ್ವಾಸ್ಥ್ಯ ಸಂಚರಣೆ ಯೋಜನೆ-2025 ಅಡಿಯಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಜೈಲು ಶಿಕ್ಷೆಯು ಕೇವಲ ದಂಡನೆಯಲ್ಲ. ಅದು ವ್ಯಕ್ತಿಯನ್ನು ತಿದ್ದುವ ಅವಕಾಶ. ಕೈದಿಗಳು ಮಾನಸಿಕವಾಗಿ ಬದಲಾಗಿ, ಸಮಾಜದ ಮುಖ್ಯವಾಹಿನಿಗೆ ಸೇರಲು ಸಿದ್ಧರಾಗಬೇಕು’ ಎಂದರು.

‘ದೇಶವನ್ನು ಮಾದಕ ವಸ್ತುಗಳ ಹಾವಳಿಯಿಂದ ಮುಕ್ತಗೊಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ವ್ಯಸನ ಮುಕ್ತ ಜೀವನವೇ ಸುಖಿ ಜೀವನಕ್ಕೆ ದಾರಿ’ ಎಂದು ಹೇಳಿದರು.

‘ಅರಿವಿನ ಕೊರತೆಯಿಂದ ಯಾರು ಕೂಡ ನ್ಯಾಯದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಪ್ರಾಧಿಕಾರವು ಸದಾ ನೆರವಿಗೆ ಬರಲಿದೆ’ ಎಂದರು.

ಕಾರಾಗೃಹ ಅಧೀಕ್ಷಕ ಎಸ್.ಎಸ್.ಪಾಟೀಲ, ಮನೋವೈದ್ಯ ಡಾ.ಅಮೀತ್ ಕುಮಾರ್, ಅರೆಕಾಲಿಕ ಸ್ವಯಂ ಸೇವಕ ರಾಘವೇಂದ್ರ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-30-557519096

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.