ಯಾದಗಿರಿ: ಎರಡು ತಿಂಗಳು ಬೇಸಿಗೆ ರಜೆಯ ಮಜಾ ಅನುಭವಿಸಿದ ಚಿಣ್ಣರು ಸೋಮವಾರ ನಗುಮೊಗದಲ್ಲಿ ನಲಿ ಯುತ ಕುಣಿಯುತ ಶಾಲೆಗೆ ಬಂದರು. ಶಿಕ್ಷಕರೂ ಮಕ್ಕಳಿಗೆ ಹೂವುಗಳನ್ನು ನೀಡಿ ಸಂತಸದಿಂದ ಬರಮಾಡಿಕೊಂಡರು.

ಶಿಕ್ಷಣ ಇಲಾಖೆಯು ‘ಉತ್ತಮ ಕಲಿಕೆ, ಉಜ್ವಲ ಭವಿಷ್ಯ’ ಧ್ಯೇಯವಾಕ್ಯದೊಂದಿಗೆ 2026–27ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಅದ್ದೂರಿಯಾಗಿ ಆರಂಭ ಮಾಡಿದ್ದು, ಮೊದಲ ದಿನ ಶಾಲೆಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು.

ಶಾಲೆಯ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಬೆಳಿಗ್ಗೆಯಿಂದಲೇ ಸಿದ್ಧತೆಯಲ್ಲಿ ತೊಡಗಿದ್ದರು. ಶಾಲಾ ಪ್ರವೇಶ ದ್ವಾರದಲ್ಲಿ ತೆಂಗಿನ ಗರಿ ಹಾಗೂ ಮಾವಿನ ತಳೀರು ತೋರಣ ಕಟ್ಟಿ ಸಿಂಗರಿಸಿದ್ದರು.

ಶಾಲೆಯ ಪ್ರವೇಶ ದ್ವಾರ, ಆವರಣದಲ್ಲಿ ‘ಉತ್ತಮ ಕಲಿಕೆ, ಉಜ್ವಲ ಭವಿಷ್ಯ’, 2026–27ನೇ ಸಾಲಿನ ಶೈಕ್ಷಣಿಕ ವರ್ಷ’, ‘ಶಾಲೆಗೆ ಸ್ವಾಗತ’ ಸೇರಿ ಹಲವು ಬಗೆಯ ಸಂದೇಶಗಳನ್ನು ರಂಗೋಲಿಯಲ್ಲಿ ಬಿಡಿಸಲಾಯಿತು.

ಮೊದಲ ದಿನ ಮಕ್ಕಳು ಸಾಲಾಗಿ ನಿಂತು ಶಾಲೆಯ ಆವರಣವನ್ನು ಪ್ರವೇಶಿಸಿದರು. ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಮಕ್ಕಳ ಮೇಲೆ ಹೂಗಳನ್ನು ಹಾಕಿ ಹೂವು, ಚಾಕೊಲೇಟ್ ನೀಡಿ ಸಂಭ್ರಮದಿಂದ ಸ್ವಾಗತಿಸಿದರು.

ಕೆಲವು ಶಾಲೆಗಳ ತರಗತಿಯ ಕೋಣೆಯಲ್ಲಿ ಸರಸ್ವತಿಯ ಫೋಟೊವನ್ನು ಇರಿಸಿ ಪೂಜೆ ಮಾಡಿ, ಪ್ರಾರ್ಥನೆ ಗೀತೆಯನ್ನು ಹಾಡಿ ಮಂಗಳಕರವಾದ ರೀತಿಯಲ್ಲಿ ಪ್ರಸಕ್ತ ವರ್ಷದ ಮಕ್ಕಳ ಕಲಿಕೆಯನ್ನು ಆರಂಭ ಮಾಡಲಾಗಿದೆ.

ಮಕ್ಕಳು ಶಾಲೆಗೆ ಬಂದ ಮೊದಲ ದಿನವೇ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ಕೈಗೆ ನೀಡಲು ಸರ್ಕಾರಿ ಶಾಲೆಗಳ ಶಿಕ್ಷಕರು ಸಾಕಷ್ಟು ತಯಾರಿ ಮಾಡಿಕೊಂಡಿದ್ದರು.

ಅಂತೆಯೇ, ಶಾಲೆಗೆ ಬಂದಂತಹ ಮಕ್ಕಳಿಗೆ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರಗಳನ್ನು ಕೈಗಿಟ್ಟರು. ಶಾಲೆಗಳಲ್ಲಿ ಮಕ್ಕಳಿಗೆ ಸಿಹಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ‘ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಿ’ ಎನ್ನುವ ಮುಖೇನ ದಾಖಲಾತಿ ಆಂದೋಲನವೂ ನಡೆಸಲಾಯಿತು.

‘ಪ್ರಸಕ್ತ ವರ್ಷದಲ್ಲಿ ಮಕ್ಕಳಿಗೆ ಇನ್ನಷ್ಟು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಆಸೆಯೊಂದಿಗೆ ಶಾಲೆಯನ್ನು ಆರಂಭಿಸಿದ್ದೇವೆ. ಬಂದಂತಹ ಮಕ್ಕಳಿಗೆ ಪಠ್ಯ ಪುಸ್ತಕ, ಸಮಸ್ತ್ರಗಳನ್ನು ಕೊಟ್ಟು, ಸಿಹಿಯಾದ ಬಿಸಿಯೂಟವನ್ನು ಬಡಿಸಿದ್ದೇವೆ. ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ನಮ್ಮ ಶಾಲೆಗೆ

ಶೇ 92.03ರಷ್ಟು ಬಂದಿತ್ತು. ಈ ವರ್ಷ 100 ಪರ್ಸೆಂಟ್ ಫಲಿತಾಂಶ ಸಾಧಿಸುವ ಗುರಿ ಇಟ್ಟುಕೊಂಡಿದ್ದೇವೆ’ ಎಂದು ಸರ್ಕಾರಿ ಪ್ರೌಢಶಾಲೆ ಸ್ಟೇಷನ್ ಬಜಾರ್ ಶಾಲೆಯ ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಪೂಜಾರಿ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-30-1323562336

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.