ಯಾದಗಿರಿ: ‘ಮಾದಿಗ ಸಮಾಜದ ಸರ್ವಾಂಗೀಣ ಅಭಿವೃದ್ಧಿ, ಸಂಘಟನಾ ಬಲವರ್ಧನೆ ಹಾಗೂ ಯುವಜನರಲ್ಲಿ ಸೇವಾ ಮನೋಭಾವ ಬೆಳೆಸುವ ಅಗತ್ಯವಿದೆ’ ಎಂದು ಮಾದಾರ ಚೆನ್ನಯ್ಯ ಸೇವಾ ಸಮಿತಿ ರಾಜ್ಯ ಅಧ್ಯಕ್ಷ ಮಂಜುನಾಥ ಹೂಡಿ ಹೇಳಿದರು.

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶನಿವಾರ ನಡೆದ ಮಾದಾರ ಚೆನ್ನಯ್ಯ ಸೇವಾ ಸಮಿತಿಯ ಜಿಲ್ಲಾ ಕಾರ್ಯಕಾರಿಣಿ ಸಭೆ ಹಾಗೂ ಪದಾಧಿಕಾರಿಗಳ ನೇಮಕಾತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂಘಟನೆಯಿಂದ ಬಲವಿದೆ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕು. ಸಮುದಾಯದ ಏಳ್ಗೆ ನಮ್ಮೆಲ್ಲರ ಒಗ್ಗಟ್ಟು, ಶಿಕ್ಷಣ ಮತ್ತು ಸೇವಾ ಮನೋಭಾವದಲ್ಲಿ ಅಡಗಿದೆ. ಶಿಕ್ಷಣದ ಜೊತೆಗೆ ಸಮಾಜ ಸೇವೆಯ ಸಂಕಲ್ಪವನ್ನು ಅಳವಡಿಸಿಕೊಂಡಾಗ ಸಮಾಜವು ಮುಖ್ಯವಾಹಿನಿಯಲ್ಲಿ ತನ್ನದೇ ಆದ ಸ್ಥಾನವನ್ನು ಪಡೆಯಲು ಸಾಧ್ಯ’ ಎಂದರು.

ರಾಜ್ಯ ಕಾರ್ಯಾಧ್ಯಕ್ಷ ದೇವೇಂದ್ರನಾಥ್ ನಾದ ಮಾತನಾಡಿ, ‘ಸಮಾಜದ ಏಕತೆ ಮತ್ತು ಸೇವಾ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಯುವಜನರು ಮುಂಚೂಣಿಯಲ್ಲಿ ನಿಂತು ನಿರ್ವಹಿಸಬೇಕು’ ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕೊಂಡಪಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.

ನೂತನ ಪದಾಧಿಕಾರಿಗಳು: ಹಣಮಂತ ಇಟಗಿ (ಜಿಲ್ಲಾಧ್ಯಕ್ಷ), ಶಿವಪ್ಪ ಮುದ್ನಾಳ, ನಂದಪ್ಪ ಪೀರಾಪುರ (ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು), ಭೀಮಶಪ್ಪ ಶನಿವಾರಂ (ಅಧ್ಯಕ್ಷ, ಗುರುಮಠಕಲ್), ಶಿವಶರಣಪ್ಪ ಮುದ್ನಾಳ (ಅಧ್ಯಕ್ಷ, ಯಾದಗಿರಿ), ವನರಾಜ್ ಶಿರಗೋಳ, ಮಲ್ಲಿಕಾರ್ಜುನ (ಪ್ರಧಾನ ಕಾರ್ಯದರ್ಶಿಗಳು), ಭೀಮರಾಯ ಕರಕಳ್ಳಿ (ಶಹಾಪುರ), ಮಲ್ಲಿಕಾರ್ಜುನ ಮಂದಾಲೆ (ಸುರಪುರ) ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕಲಬುರಗಿ ವಿಭಾಗೀಯ ಉಸ್ತುವಾರಿ ವಿಜಯಕುಮಾರ ಅಡಕಿ, ರಾಜ್ಯ ಕಾರ್ಯದರ್ಶಿ ಭೀಮಶಂಕರ್ ಬಿಲ್ಲವ, ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ಪ ಮುದ್ನಾಳ, ನಂದಪ್ಪ ಪೀರಾಪುರ, ಕಾರ್ಯದರ್ಶಿಗಳಾದ ಚಂದ್ರಶೇಖರ ಕಡೆಸೂರ್, ಹನುಮಂತ ಅಚ್ಚೋಲ, ಮಲ್ಲಿಕಾರ್ಜುನ್ ಬಬಲಾದಿ, ಮಲ್ಲಿಕಾರ್ಜುನ ಮಂದಾಲಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-30-1755442350

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.