ಗುರುಮಠಕಲ್: ‘ನಮ್ಮ ವಿದ್ಯಾಭ್ಯಾಸ ಪರೀಕ್ಷೆಗಳಿಗೆ ಮಾತ್ರ ಸೀಮಿತವಾಗದಿರಲಿ. ಡಾ.ಅಂಬೇಡ್ಕರ್ ಅವರಂತೆ ಬದುಕು ರೂಪಿಸುವ ಅಧ್ಯಯನ ಶೀಲತೆ ಅಳವಡಿಸಿಕೊಳ್ಳೋಣ’ ಎಂದು ರಂಗ ಬಳಪ ಸಾಂಸ್ಕೃತಿಕ ವೇದಿಕೆಯ ನಿರ್ದೇಶಕ ರಾಜೇಂದ್ರಕುಮಾರ ಮುದ್ನಾಳ್ ಕರೆ ನೀಡಿದರು.

ತಾಲ್ಲೂಕಿನ ಚಿಂತನಹಳ್ಳಿ ಗ್ರಾಮದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತಾಡಿ, ‘ಅಂಬೇಡ್ಕರ್ ಅವರ ಚಿಂತನಶೀಲ ಬರಹಗಳು ನಮಗೆ ದಾರಿ ದೀಪವಾಗಿದ್ದು, ಸತತ ಅಭ್ಯಾಸದಿಂದ ಅಧ್ಯಯನಶೀಲರಾಗಲು ಸಾಧ್ಯ’ ಎಂದರು.

ಮುಖ್ಯಶಿಕ್ಷಕ ಭೀಮಣ್ಣ ಆಲೆಮನಿ ಮತ್ತು ಶಿಕ್ಷಕ ಸಿದ್ದಲಿಂಗ ಮಾತನಾಡಿ, ‘ಶಿಕ್ಷಣದ ಮಹತ್ವವನ್ನು ಅರಿತರೆ ಸಮಾಜಕ್ಕೂ ಸಂತಸ ಹಂಚಲು ಸಾಧ್ಯ. ನಿಮ್ಮ ಓದು ಇತರರಿಗೆ ಮಾದರಿಯಾಗಲಿ’ ಎಂದು ಆಶಯ ವ್ಯಕ್ತಪಡಿಸಿದರು.

ಶಿಕ್ಷಣಪ್ರೇಮಿ ಮಹಾದೇವಪ್ಪ ಮಾತನಾಡಿ, ‘ಪಠ್ಯ–ಪುಸ್ತಕ, ಸಮವಸ್ತ್ರ, ಬಿಸಿಯೂಟ, ಕ್ಷೀರಭಾಗ್ಯದಂತಹ ಸೌಲಭ್ಯಗಳು ಸರ್ಕಾರ ಉಚಿತವಾಗಿ ನೀಡುತ್ತಿದೆ. ಇದರ ಲಾಭ ಪಡೆದು, ಉತ್ತಮ ಶಿಕ್ಷಣವನ್ನು ಪಡೆಯುವಂತೆ’ ಅವರು ಕರೆ ನೀಡಿದರು.

ಎಸ್ಡಿಎಂಸಿ ಉಪಾಧ್ಯಕ್ಷ ಮಲ್ಲೇಶ, ಮುಖಂಡ ಪಂಪನಗೌಡ, ಮುಖ್ಯಶಿಕ್ಷಕ ಪ್ರಕಾಶ, ಶಿಕ್ಷಕರಾದ ನರಸಮ್ಮ, ಹನುಮಂತ, ಬನ್ನಪ್ಪ, ಜಲ್ಲಪ್ಪ, ಪುಷ್ಪಾವತಿ, ಅಂಬಿಕಾ, ರೇಣುಕಾದೇವಿ, ಸುಭಾಷ್ಚಂದ್ರ, ಸಿದ್ದಲಿಂಗ, ಶರಣು, ಭರ್ಮಪ್ಪ, ಆನಂದ, ಭಾಸ್ಕರ, ಮಮತಾ, ಶಶಿಕಲಾ, ಬಂದೆಮ್ಮ, ವಿಜಯಲಕ್ಷ್ಮಿ, ಲಕ್ಷ್ಮಿ, ಹಳೇ ವಿದ್ಯಾರ್ಥಿಗಳಾದ ಮೌನೇಶ ಮತ್ತಿತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-30-1148582009

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.