ಸುರಪುರ: ‘ಈಗ ಶಾಲೆಗಳಿಗೆ ರಜೆ ಇದೆ. ಮಕ್ಕಳು ಬಿಸಿಲಿನಲ್ಲಿ ಆಟವಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕಾರಣ ಬೇಸಿಗೆ ಶಿಬಿರಗಳಿಗೆ ತಮ್ಮ ಮಕ್ಕಳನ್ನು ಕಳಿಸಿ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಜಾ ವೆಂಕಪ್ಪನಾಯಕ ಹೇಳಿದರು.

ನಗರದ ಪರಾಂಕುಶಸ್ವಾಮಿ ಮಠದಲ್ಲಿ ಮಹರ್ಷಿ ವಾಲ್ಮೀಕಿ ಆರ್.ಸಿ.ನಾಯಕ ಟ್ರಸ್ಟ್ ಆಯೋಜಿಸಿರುವ ಉಚಿತ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯ ಆನಂದ ಹೇರೂರ ಮಾತನಾಡಿ, ‘ವಿದ್ಯೆ ಅಮೂಲ್ಯ ಸಂಪತ್ತು. ಮಕ್ಕಳು ಶಿಕ್ಷಣವನ್ನು ಪಡೆಯುವುದು ಅವರ ಹಕ್ಕು. ಪಾಲಕರು ಮಕ್ಕಳಿಗೆ ಶಿಕ್ಷಣದಿಂದ ವಂಚಿತರಾಗಿಸುವಂತಿಲ್ಲ. ಬೇಸಿಗೆ ಶಿಬಿರಗಳು ರಜಾ ಸಮಯದಲ್ಲಿ ಮಕ್ಕಳಿಗೆ ಉಪಯುಕ್ತವಾಗಿವೆ’ ಎಂದು ತಿಳಿಸಿದರು.

ಟ್ರಸ್ಟ್ ಅಧ್ಯಕ್ಷ ಆರ್.ಸಿ.ನಾಯಕ ಮಾತನಾಡಿ, ‘ನಮ್ಮ ಟ್ರಸ್ಟ್ ವತಿಯಿಂದ ಸತತ ಎರಡನೇ ಬಾರಿಗೆ ಉಚಿತ ಶಿಬಿರ ಏರ್ಪಡಿಸಿದ್ದೇವೆ. ಮಕ್ಕಳಿಗೆ ಪಠ್ಯಕ್ರಮ, ವ್ಯಾಕರಣ, ಸಾಮಾನ್ಯ ಜ್ಞಾನ, ಆಟೋಟಗಳ ಜೊತೆಗೆ ಸಂಸ್ಕಾರವನ್ನೂ ಕಲಿಸುತ್ತೇವೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹುಲಿಹೈದರ ಸಂಸ್ಥಾನದ ರಾಜಾ ಸುಭಾಶ್ಚಂದ್ರ ನಾಯಕ, ರಾಜಾ ಮದನಗೋಪಾಲ ನಾಯಕ, ಡಾ.ಎಸ್.ಎಂ.ಕನಕರಡ್ಡಿ, ಹುಲಗಪ್ಪ ಪುಜಾರಿ, ಶ್ರೀಹರಿರಾವ ಆದೋನಿ, ರಾಘವೇಂದ್ರ ಸುಗಂಧಿ, ರಾಜಾ ಉಡಚಪ್ಪನಾಯಕ, ವೆಂಕಟೇಶ ಭಕ್ರಿ, ನಿಟಿಲಾಕ್ಷ ಪಂಚಾಂಗಮಠ, ಎಸ್.ಎಂ. ಬುಖಾರಿ, ಆಬಿದ್ ಹುಸೇನ್ ಪಗಡಿ, ಸಂತೋಷ ನಾಯಕ, ಹರ್ಷವರ್ಧನ ನಾಯಕ, ಮಕ್ಕಳು, ಪಾಲಕರು ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-30-831719687

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.