ಯಲಬುರ್ಗಾ: ‘ದೈನಂದಿನ ಬದುಕು ನೆಮ್ಮದಿಯಿಂದ ಕೂಡಿರಬೇಕಾದರೆ ಕಾನೂನಿನ ಅರಿವು ಇರುವುದು ಅಪೇಕ್ಷಣೀಯ. ಈ ನಿಟ್ಟಿನಲ್ಲಿ ಮಹಿಳೆಯರು ಹಾಗೂ ಯುವಕರು ಕಾನೂನಿನ ಜ್ಞಾನವನ್ನು ಪಡೆದುಕೊಳ್ಳಬೇಕು’ ಎಂದು ವಕೀಲ ವೀರಣ್ಣ ತಳಕಲ್ ಹೇಳಿದರು.

ತಾಲ್ಲೂಕಿನ ತುಮ್ಮರಗುದ್ದಿ ಗ್ರಾಮದಲ್ಲಿ ಆದಿಶಕ್ತಿ ಅಗ್ರಮ್ಮದೇವಿ ಗುಡಿಯ ಆವರಣದಲ್ಲಿ ಹಮ್ಮಿಕೊಂಡಿದ್ದ 60ನೇ ಶಿವಾನುಭವ ಕಾರ್ಯಕ್ರಮದ ಪ್ರಯುಕ್ತ ಕಾನೂನಿನ ಮಹತ್ವದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರತಿ ನಡೆ, ನುಡಿ ಹಾಗೂ ಬದುಕಿನ ನಡಾವಳಿಗಳು ಕಾನೂನು ಹಾಗೂ ನೀತಿ ನಿಯಮಗಳಿಗೆ ಒಳಪಟ್ಟಿರುತ್ತವೆ. ದೈನಂದಿನ ಬದುಕಿಗೆ ಪೂರಕವಾಗುವ ಕೆಲವೊಂದು ಕಾನೂನಿನ ಬಗ್ಗೆ ತಿಳಿದುಕೊಂಡರೆ, ಅನಗತ್ಯವಾಗಿ ಉಂಟಾಗಬಹುದಾದ ವ್ಯಾಜ್ಯಗಳಿಂದ ದೂರ ಉಳಿಯಲು ಸಾಧ್ಯವಿದೆ’ ಎಂದು ಹೇಳಿದರು.

ಕಾನೂನು ವಿದ್ಯಾರ್ಥಿ ಮಲ್ಲಪ್ಪ ಮಾಟರಂಗಿ ಮಾತನಾಡಿ, ‘ಕಾನೂನು ಎಂದರೆ ಧರ್ಮ. ಧರ್ಮ ಎಂದರೆ ಸತ್ಯ, ನ್ಯಾಯ ಎಂದೇ ಭಾವಿಸಲಾಗುತ್ತದೆ. ಸತ್ಯದ ಮಾರ್ಗದಲ್ಲಿ ನಡೆದರೆ ಕಾನೂನನ್ನು ಪಾಲಿಸಿದಂತಾಗುತ್ತದೆ. ಶಿವಾನುಭವ ಎಂದರೆ ನಮ್ಮ ಒಳಮನಸ್ಸಿನಲ್ಲಿ ಶಿವತತ್ವವನ್ನು ಅರಿತುಕೊಳ್ಳುವುದು. ಶಾಂತಿ, ಸತ್ಯ, ಸಮತೆ ಮತ್ತು ಧರ್ಮದ ಪ್ರತೀಕವೇ ಶಿವತತ್ವ, ಜೀವನದಲ್ಲಿ ಅನುಸರಿಸುವ ಮೂಲಕ ಸಾರ್ಥಕತೆ ಮಾಡಿಕೊಳ್ಳಬೇಕಾಗಿದೆ’ ಎಂದರು.

ಅಧ್ಯಕ್ಷತೆ ವಹಿಸಿ ತಾ.ಪಂ ಮಾಜಿ ಸದಸ್ಯ ಶರಣಪ್ಪ ಈಳಿಗೇರ ಮಾತನಾಡಿ, ‘ಮಕ್ಕಳಿಗೆ ಬಾಲ್ಯದಲ್ಲಿಯೇ ಒಳ್ಳೆಯ ಸಂಸ್ಕಾರಗಳನ್ನು ನೀಡಿ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಪಾಲಕರು ಹಾಗೂ ಸಾರ್ವಜನಿಕರು ಪ್ರೋತ್ಸಾಹಿಸಬೇಕು’ ಎಂದು ಹೇಳಿದರು.

ಮಹಾದೇವಯ್ಯ ಹಿರೇಮಠ, ರಾಜಶೇಖರಯ್ಯ ಹಿರೇಮಠ, ಬಸಪ್ಪ ಕುದರಿಕೋಟಗಿ, ದುರಗಪ್ಪ ನಡುವಿನಮನಿ, ಮಂಗಳೇಶ ಶ್ಯಾಗೋಟಿ, ಬಸವರಾಜ ಮಾಲಿಗೌಡ್ರ, ರುದ್ರಯ್ಯ ಹಿರೇಮಠ, ಕುಬೇರಪ್ಪ ತೋಪಲಕಟ್ಟಿ, ಕಳಕನಗೌಡ ಪಾಟೀಲ, ಶ್ರೀಶೈಲ ಚಿಕ್ಕೊಪ್ಪದ, ಮಲ್ಲಪ್ಪ ಬಡಿಗೇರ, ಕುಮಾರ ಯರಿಗೇರಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-35-1204690819

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.