ಯಳಂದೂರು: ಆ ಮಕ್ಕಳ ಕೈಯಲ್ಲಿ ತಾವೇ ರಚಿಸಿದ ಚಿತ್ರಗಳ ಪಟವಿತ್ತು. ಹತ್ತಾರು ಸೃಜನಶೀಲ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ಸಂಭ್ರಮ ಮನೆ ಮಾಡಿತ್ತು. ಕಂಪ್ಯೂಟರ್ ಸ್ಪರ್ಶಿಸಿ ಆನಂದಿಸಿದ ಕ್ಷಣಗಳಿತ್ತು. ನಾಟಕ, ಹಾಡು, ಕುಣಿತದ ಪರಿಚಯ ಇತ್ತು... ಹೀಗೆ, 30 ದಿನಗಳ ಕಾಲ ಒಂದೊಂದು ಕಲಾ ಪ್ರಕಾರದಲ್ಲಿ ಪರಿಣಿತರಾದ ಮಕ್ಕಳಿಗೆ ಬಹುಮಾನ ಸಿಕ್ಕಾಗ ಅವರ ಖುಷಿಗೆ ಪಾರವೇ ಇರಲಿಲ್ಲ.

ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಕ್ಷಣ ಫೌಂಡೇಶನ್ ಮತ್ತು ಗ್ರಾಮ ಪಂಚಾಯತಿ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐವತ್ತಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಗಮನ ಸೆಳೆದರು. ಉತ್ತಮ ಸಾಧನೆ ತೋರಿದ ಚಿಣ್ಣರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಪಿಡಿಒ ಮಹದೇವಸ್ವಾಮಿ ಮಾತನಾಡಿ, ‘ಮಕ್ಕಳ ಕಲಿಕೆಗೆ ಮಿತಿ ಇಲ್ಲ. ಚಿತ್ರಕಲೆಯ ಮೂಲಕ ಮಕ್ಕಳೇ ರಚಿಸಿದ ರಾಕೆಟ್, ಹೂ ಚಿತ್ರಗಳು, ನೀರಿನ ಚಿಲುಮೆಗಳು, ಮನೆ, ಸಾಕು ಪ್ರಾಣಿಗಳ ಆಕೃತಿಗಳು ಮಕ್ಕಳ ಸುಕೋಮಲ ಮನಸ್ಥಿತಿಯನ್ನು ಪರಿಚಯ ಮಾಡಿಕೊಟ್ಟವು. ಮಣ್ಣಿನಲ್ಲಿ ಅರಳಿಸಿದ ಪ್ರಕೃತಿ ಚಿತ್ರಗಳು, ಚಿಣ್ಣರು ಅಭಿನಯಿಸಿದ ಹಾಡಿದ ಪದ್ಯ ಗದ್ಯದ ನಾಟಕದ ಸಂಭಾಷಣೆಗಳು, ಸಹಪಾಠಿಗಳ ನಟನೆಗೆ ನಲಿದ ಕ್ಷಣಗಳು ಪೋಷಕರಿಗೆ ಸುಂದರ ಅನುಭೂತಿ ಕಟ್ಟಿಕೊಟ್ಟವು ಎಂದರು.

ಐಸಿಇ ಸಂಯೋಜಕರಾದ ವಿಶ್ವನಾಥ್ ಮಾತನಾಡಿ, ‘ಕಲಿಕೆ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತದೆ. ಆದರೆ ಮಕ್ಕಳ ಸುಪ್ತ ಮನಸ್ಸು ಪ್ರಕೃತಿಯ ನಡುವೆ ಇರಲು ಬಯಸುತ್ತದೆ. ಇಂತಹ ಸಮಯದಲ್ಲಿ ತರಬೇತಿ ನೀಡಿ ರಜಾ ಮಜಾವನ್ನು ಅನುಭವಿಸಲು ಅವಕಾಶ ನೀಡಿದರೆ ಮಕ್ಕಳ ಕಲಿಕ ಸಾಮರ್ಥ್ಯ ಮತ್ತಷ್ಟು ಮೇಲೇರುತ್ತದೆ. ಬೇರೆಬೇಸಿಗೆ ಶಿಬಿರಗಳಲ್ಲಿ ಚಿಣ್ಣರಿಗೆ ಸಿದ್ಧ ಸೂತ್ರದಲ್ಲಿ ಕಲಿಕೆಗೆ ಅವಕಾಶ ನೀಡದೆ, ಮಕ್ಕಳ ಮನೋವಿಕಾಸಕ್ಕೆ ತಕ್ಕಂತೆ ಕಲಿಯಲು ಅವಕಾಶ ನೀಡುವುದರಿಂದ ಗ್ರಾಮೀಣ ಮಟ್ಟದಲ್ಲೂ ಬೇಸಿಗೆ ಶಿಬಿರದ ಆಯೋಜನೆ ಸುಲಭವಾಗಿದೆ ಎಂದು ಅವರು ಹೇಳಿದರು.

ಶಿಕ್ಷಣ ಫೌಂಡೇಷನ್ ಕಾರ್ಯಕ್ರಮ ಐಸಿಇ ಸಂಯೋಜಕರಾದ ವಿಶ್ವನಾಥ್ ರಾಜೇಶ್ ಬಹುಮಾನ ನೀಡಿದರು. ಪಿಡಿಒ ಉಪಹಾರ ನೀಡಿ ಮಕ್ಕಳ ಚಟುವಟಿಕೆಗೆ ಸಹಕರಿಸಿದರು. ಗ್ರಂಥಾಲಯದ ಮೇಲ್ವಿಚಾರಕ ಸಿದ್ದರಾಜು ಟಿಪಿಒ ಜಗದೀಶ್ ಮಕ್ಕಳ ಉತ್ಸಾಹಕ್ಕೆ ಸಹಕಾರ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-37-1433065499

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.