ಯಳಂದೂರು: ಶೈಕ್ಷಣಿಕ ವರ್ಷದ (2026-27) ಮೊದಲ ದಿನವೇ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಡಗರ ಕಂಡುಬಂದಿತು.

ಶಾಲಾ ಶಿಕ್ಷಣ ಇಲಾಖೆ ಆದೇಶದಂತೆ 1 ರಿಂದ 10ನೇ ತರಗತಿ ಮಕ್ಕಳನ್ನು ಸ್ವಾಗತಿಸಲು ಶಾಲೆಗಳಲ್ಲಿ ಸಿದ್ಧತೆ ನಡೆಸಲಾಗಿತ್ತು. ಬೇಸಿಗೆ ರಜೆ ಬಳಿಕ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸುವ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ತಾಲ್ಲೂಕಿನಲ್ಲಿ 100ಕ್ಕೂ ಹೆಚ್ಚಿನ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿವೆ. ಕೆಪಿಎಸ್, ವಸತಿ ಶಾಲೆಗಳಿಗೆ ರಜಾ ಅವಧಿಯಲ್ಲಿ ಅಗತ್ಯ ಶೈಕ್ಷಣಿಕ ಸಾಮಗ್ರಿಗಳು ಮುಂಚಿತವಾಗಿಯೇ ತಲುಪಿದ್ದು, ಶಾಲಾ ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಶೌಚಾಲಯ, ತರಗತಿ ಕೊಠಡಿ ದುರಸ್ತಿಗೂ ಅಧಿಕಾರಿಗಳು ಗಮನ ಹರಿಸಿದ್ದು, ವಿದ್ಯಾರ್ಥಿಗಳನ್ನು ಆಕರ್ಷಿಸಲು ಕಾರಣವಾಗಿದೆ.

ಕೆಲವು ಶಾಲೆಗಳಲ್ಲಿ ಸ್ವಾಗತ ಸಮಾರಂಭದಲ್ಲಿ ಮಕ್ಕಳಿಗೆ ಹೂ ಮಳೆಗರೆದು ಬರಮಾಡಿಕೊಳ್ಳಲಾಯಿತು. ಸಿಹಿ ಹಂಚಿ ಬೆಳಗಿನ ಅವಧಿಯಲ್ಲಿ ಹಾಲು, ಮಧ್ಯಾಹ್ನ ಪಾಯಸ, ಬಾಳೆಹಣ್ಣು, ಮೊಟ್ಟೆ ಹಾಗೂ ಬಿಸಿಯೂಟವನ್ನು ನೀಡುವ ಮೂಲಕ ಚಿಣ್ಣರ ಉತ್ಸಾಹವನ್ನು ಹೆಚ್ಚಿಸಿತು. ಶಾಲೆಯ ಮುಂಭಾಗ ತಳಿರು ತೋರಣಗಳ ಸಿಂಗಾರ ಹಾಗೂ ಹಬ್ಬದ ವಾತಾವರಣ ಇರುವಂತೆ ಶಿಕ್ಷಕರು ತಯಾರಿ ನಡೆಸಿದ್ದರು ಎಂದು ಬಾಲಕಿಯರ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರವಿಕುಮಾರ್ ಹೇಳಿದರು.

ಮೇ 29 ರಿಂದಲೇ ಪ್ರೌಢ ಶಾಲೆಗಳಲ್ಲಿ ಮೂಲಸೌಕರ್ಯ ವಿಸ್ತರಿಸುವ ಕೆಲಸಗಳು ಭರದಿಂದ ಸಾಗಿತ್ತು. ತಾಲ್ಲೂಕಿನ ಸುಮಾರು 8 ಸಾವಿರ ಮಕ್ಕಳಿಗೆ ಕನ್ನಡ, ಉರ್ದು, ಇಂಗ್ಲಿಷ್, ಹಿಂದಿ, ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನ ಪುಸ್ತಕಗಳನ್ನು ವಿತರಿಸಲಾಗಿದೆ. ಮಕ್ಕಳು ಶಾಲೆಗೆ ಬರುತ್ತಲೇ ತಕ್ಷಣವೇ ಕೈಗೆ ಪಠ್ಯ ಪುಸ್ತಕಗಳನ್ನು ಕೊಡುವಂತೆ ಸೂಚಿಸಲಾಗಿದೆ. ಸ್ಯಾಟ್ಸ್ ತಂತ್ರಾಂಶದಲ್ಲಿ ಕಳೆದ ವರ್ಷದ ವಿದ್ಯಾರ್ಥಿಗಳ ಹಾಜರಾತಿ ಅನುಸಾರ 1 ರಿಂದ 10ನೇ ತರಗತಿವರೆಗಿನ ಮಕ್ಕಳ ಪಠ್ಯ ಮತ್ತು ಸಮವಸ್ತ್ರ ಪೂರೈಸಲಾಗುತ್ತದೆ ಎಂದು ಬಿಇಒ ಮಾರಯ್ಯ ಹೇಳಿದರು.

ಸರ್ಕಾರಿ ಶಾಲೆಗಳಲ್ಲೂ ಡಿಜಟಲ್ ಕಲಿಕೆ: ‘ಉತ್ತಮ ಕಲಿಕೆ ಮತ್ತು ಉಜ್ವಲ ಭವಿಷ್ಯ’ ಧ್ಯೇಯವಾಕ್ಯದಡಿ ಈ ವರ್ಷ ಶಿಕ್ಷಣ ಇಲಾಖೆ ಕಲಿಕೆ ಆರಂಭಿಸಿದೆ. ಮಕ್ಕಳ ಕಲಿಕೆಯಲ್ಲಿ ನಾವಿನ್ಯತೆ ತುಂಬಲು ಮತ್ತು ಬದಲಾಗುತ್ತಿರುವ ಪಾಠ ಕೌಶಲವನ್ನು ಮಕ್ಕಳಿಗೆ ಪರಿಚಯಿಸಲು ಡಿಜಿಟಲ್ ಬೋಧನೆ ಆರಂಭಿಸಿವೆ. ಏಕ ಕಾಲದಲ್ಲಿ ಕಪ್ಪು ಹಲಗೆ ಮತ್ತು ಡಿಜಿಟಲ್ ಲರ್ನಿಂಗ್ ಆ್ಯಪ್ ಬಳಸಿ ಕಲಿಸುವ ತಂತ್ರಾಂಶಗಳನ್ನು ಸರ್ಕಾರಿ ಶಾಲೆಗಳಲ್ಲಿ ಅಳವಡಿಸಿದೆ. ಇದರಿಂದ ಗ್ರಾಮೀಣ ಭಾಗದ ಮಕ್ಕಳು ಶಾಲೆಯಲ್ಲಿ ಅಭ್ಯಾಸ ಮಾಡಿದ ವಿಷಯಗಳ ಕಲಿಕೆಯನ್ನು ದೃಢಪಡಿಸಿಕೊಳ್ಳಬಹುದು. ಸರಳವಾಗಿ ಅರ್ಥೈಸಿಕೊಳ್ಳಲು ಅನುವಾಗುವಂತೆ ರೂಪಿಸಿದ ಹತ್ತಾರು ಮಾದರಿಗಳನ್ನು ವಿಡಿಯೊ ಮೂಲಕ ವೀಕ್ಷಿಸಬಹುದು. ನಂತರ ಎಐ ತಂತ್ರಜ್ಞಾನ ಬಳಸಿ ಮಾಹಿತಿ ವಿಶ್ಲೇಷಿಸುವ ಆನ್ಲೈನ್ ಶಿಕ್ಷಣವೂ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಿಸಲು ನೆರವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ಚಿಣ್ಣರು ಶೈಕ್ಷಣಿಕ ವರ್ಷದ ಮೊದಲ ದಿನ ಸಂಭ್ರಮದಿಂದ ಶಾಲೆಯತ್ತ ತೆರಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-37-594744572

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.