ಯಳಂದೂರು: ‘ವಿಶ್ವದ ವಿವಿಧ ಭಾಷೆಗಳಲ್ಲಿ ಕನ್ನಡಕ್ಕೆ ಹಿರಿದಾದ ಸ್ಥಾನವಿದ್ದು, ವಿಶ್ವದ ಭಾಷೆಗಳ ರಾಣಿಯಾಗಿ ವಿಜೃಂಭಿಸಿದೆ’ ಎಂದು ಪ್ರಾಂಶುಪಾಲ ಹೇಮಂತ್ ಕುಮಾರ್ ಹೇಳಿದರು.

ಪಟ್ಟಣದ ಬಿಳಿಗಿರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಭಾಷೆಯ ಬನಿ ವಿದ್ಯಾವಂತರಿಗಿಂತ ಅನಕ್ಷರಸ್ಥರಲ್ಲಿ ಹೆಚ್ಚು ನೆಲೆಯೂರಿದೆ. ಅವರ ಹಾಡು-ನುಡಿಗಳಲ್ಲಿ ಭಾವ ಸೆಲೆಯಾಗಿ ವಿಜೃಂಭಿಸಿದೆ. ಸಂಗೀತ ಸಾಹಿತ್ಯ, ಸಂಸ್ಕೃತಿ ಬಿಂಬಿಸುವ ದೆಸೆಯಲ್ಲಿ ಕನ್ನಡ ನುಡಿ, ಕನ್ನಡಿಗರ ಚಿಂತನೆ, ರಾಜ್ಯದ ಕೊಡುಗೆ ಇದೆ’ ಎಂದು ಅವರು ಹೇಳಿದರು.

ಕಸಾಪ ಘಟಕದ ಅಧ್ಯಕ್ಷ ಯರಿಯೂರು ನಾಗೇಂದ್ರ ಮಾತನಾಡಿ, ‘112 ವರ್ಷಗಳ ಹಿಂದೆ ಕಸಾಪ ಮೈಸೂರು ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ ದೂರ ದೃಷ್ಟಿಯಿಂದ ಸ್ಥಾಪನೆಯಾಯಿತು. ಭಾರತದಲ್ಲಿ ಕಸಾಪ ಕನ್ನಡಿಗರನ್ನು ಪ್ರತಿನಿಧಿಸುವ ಏಕೈಕ ಸಾಂಸ್ಕೃತಿಕ ಘಟಕವಾಗಿ ಉಳಿದಿದೆ. ಕನ್ನಡ ನೆಲದಲ್ಲಿ ಕನ್ನಡವೇ ಸಾರ್ವಭೌಮ. ಪ್ರಥಮ ಭಾಷೆಯಾಗಿ ಕರುನಾಡಿನ ಅಸ್ಮಿತೆಯನ್ನು ಉಳಿಸುವ ದೆಸೆಯಲ್ಲಿ ಕನ್ನಡವೇ ಶ್ರೇಷ್ಠ ಎಂಬುದನ್ನು ಇಂದಿನ ತಲೆಮಾರಿಗೆ ತಿಳಿಸುವ ಕೆಲಸ ಆಗಬೇಕು. ಕನ್ನಡ ಕಟ್ಟಿದ ಕವಿ ಪುಂಗವರನ್ನು, ಗೋಕಾಕ್ ಚಳವಳಿ ಮೂಲಕ ಕರ್ನಾಟಕ ಒಗ್ಗೂಡಿಸಿದ ಮಹನೀಯರನ್ನು ಸ್ಮರಿಸಬೇಕು’ ಎಂದು ಹೇಮಂತ್ ಕುಮಾರ್ ವಿವರಿಸಿದರು.

ಸರ್ಕಲ್ ಇನ್ಸ್ಪೆಕ್ಟರ್ ಸುಬ್ರಹ್ಮಣ್ಯ, ‘ಆಧುನಿಕ ಜಗತ್ತಿನಲ್ಲಿ ನೂರಾರು ಭಾಷೆಗಳು ಉಸಿರಾಡುತ್ತಿವೆ.ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದ ಆದರೆ ಪ್ರಾದೇಶಿಕ ಭಾಷೆಗಳು ನಲುಗುತ್ತಿವೆ. ತಾಯಿ ನುಡಿಯ ಮೂಲಕ ಕಲಿತವರು ಇತರ ಭಾಷೆಗಳ ಮೇಲೆ ಪ್ರಭುತ್ವ ಸಾಧಿಸಿ ವಿಶ್ವವನ್ನು ಆಳುತ್ತಾರೆ’ ಎಂದು ಹೇಳಿದರು.

ಪರಿಷತ್ತು ಸದಸ್ಯರಾದ ಯರಗಂಬಳ್ಳಿ ಪರಶಿವಮೂರ್ತಿ, ಲಿಂಗರಾಜುಮೂರ್ತಿ, ವಿಜಯ್, ನಂಜುಂಡಯ್ಯ, ಜೋಗಿ ಸಿದ್ದಯ್ಯ, ಉಪನ್ಯಾಸಕರಾದ ಪದ್ಮ, ಶ್ರೀನಿವಾಸ್, ಚಿಂತಕ ಫೈರೋಜ್ ಖಾನ್ ವೈ.ಕೆ.ಮೋಳೆ ನಾಗರಾಜು, ಡಿ.ಪಿ.ಮಹೇಶ್, ಹಾಗೂ ವಿದ್ಯಾರ್ಥಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-37-1864065267

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.