ಯಳಂದೂರು: ‘ಪ್ರತಿನಿತ್ಯ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳ ಆರೈಕೆಯಲ್ಲಿ ಜೀವನವನ್ನೇ ಸವೆಸುವ ದಾದಿಯರು ಇಂದು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ’ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಎಚ್. ಶ್ರೀಧರ್ ಅಭಿಪ್ರಾಯಪಟ್ಟರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ದಾದಿಯರ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 350 ರೋಗಿಗಳಿಗೆ ಒಬ್ಬರು ಶುಶ್ರೂಷಕಿ ಇರಬೇಕು. ಆದರೆ ಭಾರತದಲ್ಲಿ ಈ ಸಂಖ್ಯೆ 500ಕ್ಕೆ ಮುಟ್ಟಿದೆ. ಜನಸಂಖ್ಯೆ ಹೆಚ್ಚಾಗಿರುವ ರಾಷ್ಟ್ರಗಳಲ್ಲಿ ಗುಣಮಟ್ಟದ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ನರ್ಸ್ಗಳು ಅಪಾರವಾಗಿ ಶ್ರಮಿಸುತ್ತಿದ್ದು, ಇಂತಹ ಸೇವಾ ಕೈಂಕರ್ಯದಲ್ಲಿ ಪ್ರಾಮಾಣಿಕವಾಗಿ ರೋಗಿಗಳ ಸೇವೆಗೆ ಅರ್ಪಿಸಿಕೊಂಡಿರುವ ನೂರಾರು ನರ್ಸ್ಗಳು ನಮ್ಮೊಡನಿದ್ದು, ಅವರನ್ನು ಗೌರವಿಸುವ ಕೆಲಸವನ್ನು ಸಮಾಜ ಮತ್ತು ಸಂಘ-ಸಂಸ್ಥೆಗಳು ಮಾಡಬೇಕು’ ಎಂದರು.

‘ಕುಟುಂಬಸ್ಥರು ಹಾಗೂ ವೈದ್ಯರ ನಡುವೆ ಕೊಂಡಿಯಾಗಿ ತಾಳ್ಮೆ, ಸಹಕಾರ ಮಾನವೀಯತೆ ಮೂರ್ತವೆತ್ತಂತೆ ಆರೋಗ್ಯ ಸೇವೆ ಕಲ್ಪಿಸುವ ದಾದಿಯರ ಮೇಲೆ ಸಿಟ್ಟು, ಸೆಡವು ತೋರದೆ ಅವರನ್ನು ಸಹಾನುಭೂತಿಯಿಂದ ಕಾಣಬೇಕು’ ಎಂದು ತಿಳಿಸಿದರು.

ಡಾ.ಹರ್ಷದ್ ಆಲಿ. ಡಾ.ನಾಗೇಂದ್ರ ಪ್ರಸಾದ್, ಡಾ.ಕೃಷ್ಣಪ್ರಸಾದ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-37-982631251

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.