ಯಳಂದೂರು: ತಾಲ್ಲೂಕಿನ ಪದವಿ ಕಾಲೇಜು ವಿದ್ಯಾರ್ಥಿಗಳು ಓದಿನ ಜೊತೆಗೆ ಗ್ರಾಮಗಳ ಸ್ವಚ್ಛತೆ, ಪರಿಸರ ಕಾಳಜಿಯ ಜೊತೆಗೆ ಸಮಾಜದಲ್ಲಿ ಬೇರುಬಿಟ್ಟಿರುವ ಮೌಢ್ಯ, ಕಂದಾಚಾರಗಳ ಕುರಿತು ಜನಜಾಗೃತಿ, ಪರಿಸರ ಕಾಳಜಿ ಮೂಡಿಸುವಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ನಾಗರಿಕರ ಮನಗೆದ್ದಿದ್ದಾರೆ.

ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ವೈಎಂಎಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಜನೋಪಯೋಗಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಲಿಕೆಯ ಜೊತೆಗೆ ಶಿಸ್ತು, ಸಂಯಮ, ರಸ್ತೆಗಳ ಸ್ವಚ್ಛತೆ, ಪ್ಲಾಸ್ಟಿಕ್ ಮುಕ್ತ ಹಾಗೂ ಪರಿಸರ ಸಂರಕ್ಷಣೆಯ ಕಾರ್ಯಗಳಲ್ಲಿ ಕೈಜೋಡಿಸಿದ್ದಾರೆ.

ಪರಿಸರದ ಮಡಿಲಿನಲ್ಲಿ ಅಪಾಯಕಾರಿಯಾಗಿ ಹರಡಿಕೊಂಡಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ವಿಲೇವಾರಿ ಮಾಡುವುದು, ಜಲಮೂಲ ಸ್ವಚ್ಛಗೊಳಿಸುವುದು, ಬುಡಕಟ್ಟು ಸಂಸ್ಕೃತಿ, ಪದ್ಧತಿ ಅರಿಯುವುದು, ಯೋಗ, ಧ್ಯಾನ ಅಭ್ಯಾಸ ಮಾಡುವುದುದರ ಜೊತೆಗೆ ಹತ್ತಾರು ಸಮಾಜಮುಖಿ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳಿಗೆ ಮುಂಜಾನೆಯಿಂದಲೇ ಶಿಸ್ತಿನ ಪಾಠ ಆರಂಭವಾಗುತ್ತದೆ. ನಂತರ ಧ್ಯಾನ ಮತ್ತು ಯೋಗದ ಅಭ್ಯಾಸ ಮಾಡಿಸಲಾಗುತ್ತದೆ. ವನವಾಸಿ ಜೊತೆ ಮಾತುಕತೆ, ಜೀವನ ವಿಧಾನ ಅರಿಯುವಿಕೆ, ಪ್ರಕೃತಿಯ ಜೊತೆಗಿನ ಸಹಭಾಗಿತ್ವ, ನಿಸರ್ಗ ಸ್ನೇಹಿ ಆಹಾರ ಬಳಕೆ ಕುರಿತು ಮಾಹಿತಿ ವಿನಿಮಯ ನಡೆಯುತ್ತದೆ.

‘ಆಧುನಿಕತೆಯ ಭರಾಟೆಯ ಮಧ್ಯೆಯೂ ಸಾವಯವ ಕೃಷಿ, ಮೂಲ ಸಂಸ್ಕೃತಿ, ಪರಂಪರೆಯನ್ನು ಜತನದಿಂದ ಪೋಷಿಸುತ್ತಿರುವ ಸ್ಥಳೀಯ ಜನರ ಜೀವನ ಅರಿಯುವ ಕಾರ್ಯವನ್ನು ವಿದ್ಯಾರ್ಥಿಗಳು ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಚಿಂತನಾ ಲಹರಿ ವಿಸ್ತಾರಗೊಳ್ಳುತ್ತಿದೆ’ ಎನ್ನುತ್ತಾರೆ ಪ್ರಾಂಶುಪಾಲ ವಿಜಯ್.

‘ವಿದ್ಯಾರ್ಥಿಗಳು ಅಂಕಗಳಿಕೆಗೆ ಮಾತ್ರ ಒತ್ತು ನೀಡದೆ ಬೌದ್ಧಿಕ ವಿಕಾಸ ವೃದ್ಧಿಸುವುದು, ತಮ್ಮೊಳಗಿನ ಮನಸ್ಸು, ಹೃದಯವನ್ನು ಅರಳಿಸುವ ದಿಸೆಯಲ್ಲಿ ಯೋಗ, ಸತ್ ಚಿಂತನೆ, ಆಲೋಚನೆ, ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಲಾಗುತ್ತಿದೆ. ಇದರಿಂದ ವ್ಯಕ್ತಿಯ ಸ್ಮೃತಿ ಮತ್ತು ಮತಿಗಳಲ್ಲಿ ಬದಲಾವಣೆಯಾಗಲಿದೆ. ಧನಾತ್ಮಕ ಆಲೋಚನೆಗಳು ಬೆಳೆಯಲಿವೆ, ಸಮಾಜಮುಖಿ ಸೇವೆಗಳಲ್ಲಿ ತೊಡಗಿಸಿಕೊಳ್ಳಲು ಶಿಬಿರ ಪ್ರೇರೇಪಿಸುತ್ತದೆ’ ಎನ್ನುತ್ತಾರೆ ಮೈಸೂರು ಯೋಗ ತಜ್ಞ ಚಾಣೇಶ್ವರ ರಾವ್.

‘ಬಿಳಿಗಿರಿಬೆಟ್ಟದ ಸುತ್ತಮುತ್ತಲಿನ ನಿಸರ್ಗ ಅಪ್ಯಾಯಮಾನವಾಗಿದ್ದು ನೂರಾರು ವೃಕ್ಷ, ಗಿಡಮೂಲಿಕೆಗಳು, ಜೀವ ವೈವಿಧ್ಯ ಹಾಗೂ ಜಲಮೂಲಗಳ ಬಗ್ಗೆ ತಿಳಿದುಕೊಳ್ಳುವ ಕಾತರ ಇತ್ತು. ಸಾಮಾಜಿಕ ಜಾಲತಾಣ, ಟಿವಿ, ಮೊಬೈಲ್ಗಳಲ್ಲಿ ಮುಳುಗಿದ್ದ ವಿದ್ಯಾರ್ಥಿಗಳಿಗೆ ಎನ್ಎಸ್ಎಸ್ ಶಿಬಿರ ಬದುಕಿನ ಪಾಠಗಳನ್ನು ಪರಿಚಯಿಸಿತು. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು, ಹೊಸ ವಿಚಾರಗಳನ್ನು ಕಲಿಯಲು, ಜನ ಸಮುದಾಯಗಳ ಸಂಪ್ರದಾಯ, ಪರಂಪರೆಯನ್ನು ಅರಿಯಲು ಶಿಬಿರ ಸಹಕಾರಿಯಾಗಿದೆ. ಗಾಂಧೀಜಿ ಅವರ ಕಲ್ಪನೆಯ ಸೇವೆ, ನೈರ್ಮಲ್ಯ, ಭಕ್ತಿ, ಅಹಿಂಸೆ, ಪ್ರಾರ್ಥನೆ ಮಹತ್ವ ತಿಳಿಯುತ್ತಿದ್ದೇವೆ’ ಎನ್ನುತ್ತಾರೆ ವಿದ್ಯಾರ್ಥಿಗಳು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-37-2059920439

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.