ಯಳಂದೂರು: ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿಗೆ ಬದಲಾಗಿ ರೂಪಿಸಲಾಗಿರುವ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ‘ಕರ್ತವ್ಯ’ ಮೊಬೈಲ್ ಅಪ್ಲಿಕೇಶನ್ ಬಳಸಿ ಹಾಜರಾಗುವ ಪ್ರಕ್ರಿಯೆಗೆ ಆರಂಭದಲ್ಲಿ ವಿಘ್ನ ಎದುರಾಯಿತು.

ತಾಲ್ಲೂಕು ಮತ್ತು ಪಟ್ಟಣ ಸೇರಿದಂತೆ ಶುಕ್ರವಾರ ಶಿಕ್ಷಕರು ಮತ್ತು ಸಿಬ್ಬಂದಿ ಲಘುಬಗೆಯಿಂದ ಶಾಲೆಗೆ ತೆರಳಿ ಹಾಜರಾತಿಗಾಗಿ ಕರ್ತವ್ಯ ಆ್ಯಪ್ ತೆರೆದಾಗ ಚೆಕ್ ಇನ್ ಆಗಲು ಪರದಾಡಬೇಕಾಯಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಎಐ ಆಧಾರಿತ ಕಿರು ತಂತ್ರಾಂಶ ಹಾಜರಾತಿ ವ್ಯವಸ್ಥೆ ಕೈಕೊಟ್ಟಾಗ ಶಿಕ್ಷಕರು ಸಹಿ ಮಾಡಲು ಪರಿತಪ್ಪಿಸಿದರು. ನಂತರ ಸಂಘದ ಸದಸ್ಯರು ಮೇಲಾಧಿಕಾರಿಗಳಿಗೆ ಆ್ಯಪ್ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟರು.

‘ಮಧ್ಯಾಹ್ನ 1ರ ವೇಳೆಗೆ ಕೆಲವು ಶಿಕ್ಷಕರು ಕರ್ತವ್ಯ ಆ್ಯಪ್ನಲ್ಲಿ ಚೆಕ್ ಇನ್ ಆದರು. ಆದರೆ, ಸಂಜೆ ಚೆಕ್ ಔಟ್ ಆಗಲು ಮತ್ತೆ ಕಾಯುವಂತಾಯಿತು’ ಎಂದು ಹೆಸರು ಹೇಳಲು ಇಚ್ಛಿಸದ ತಾಲ್ಲೂಕಿನ ಶಾಲೆಯೊಂದರ ಶಿಕ್ಷಕರು ಮಾಹಿತಿ ನೀಡಿದರು.

‘ರಾಜ್ಯ ಸರ್ಕಾರ ಎಲ್ಲ ಇಲಾಖೆಗಳಲ್ಲಿ ಕಾಮ್ಸ್ (ಕರ್ನಾಟಕ ರಾಜ್ಯ ಹಾಜರಾತಿ ನಿರ್ವಹಣಾ ವ್ಯವಸ್ಥೆ) ಆ್ಯಪ್ ಅನ್ನು ಸರ್ಕಾರಿ ಶಾಲೆ ಹಾಗೂ ಕಾಲೇಜುಗಳ ಶಿಕ್ಷಕರು, ಮುಖ್ಯ ಶಿಕ್ಷಕರು, ಉಪನ್ಯಾಸಕರು, ಪ್ರಾಂಶುಪಾಲರು, ಬೋಧಕೇತರ ಸಿಬ್ಬಂದಿ ಡೌನ್ಲೋಡ್ ಮಾಡಿಕೊಂಡು ಹಾಜರಾತಿ ಹಾಕಬೇಕು. ಇದು ಮುಖ ಚಹರೆ ಜಿಐಎಸ್ (ಭೌಗೋಳಿಕ ತಂತ್ರಜ್ಞಾನ) ಬಳಸಿಕೊಂಡು ಸಿಬ್ಬಂದಿ ಹಾಜರಾತಿಯನ್ನು ಖಚಿತಪಡಿಸುತ್ತದೆ. ಪ್ರತಿ ಬಾರಿ ಕಡ್ಡಾಯವಾಗಿ ಕೆಲಸ ಮಾಡುವ ಸ್ಥಳದಲ್ಲಿ ಎರಡು ಬಾರಿ (ಹೋಗುವಾಗ, ಬರುವಾಗ) ಈ ಆ್ಯಪ್ ಬಳಸಬಹುದು. ಬೆಳಿಗ್ಗೆ 9.30 ರಿಂದ ಸಂಜೆ 4.30ರ ಶಾಲೆ ಅವಧಿಯಲ್ಲಿ ಹಾಜರಾತಿ ಹಾಕಬಹುದು’ ಎಂದು ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ರವಿ ಕುಮಾರ್ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-37-1071802679

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.