ಯಳಂದೂರು: ಮೊದಲ ತಲೆಮಾರಿನ ಮಕ್ಕಳ ಕಲಿಕೆಗೆ ಉಪ್ಪಾರ ಸಮುದಾಯ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಶ್ರೀಮಹರ್ಷಿ ವಾಲ್ಮೀಕಿ ಭವನದಲ್ಲಿ ಭಾನುವಾರ ಉಪ್ಪಾರ ಸೇನಾ ಸಮಿತಿ ಮತ್ತು ತಾಲ್ಲೂಕು ಉಪ್ಪಾರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಬೇಕು. ಪ್ರೌಢ ಮತ್ತು ಪಿಯು ಹಂತದಿಂದಲೇ ರಾಜ್ಯ ಮತ್ತು ಕೇಂದ್ರ ಸರ್ಕಾರ ನಡೆಸುವ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು. ಇದಕ್ಕೆ ಬೇಕಾದ ಮಾನಸಿಕ ಸಿದ್ಧತೆ ಮತ್ತು ಪಠ್ಯಕ್ರಮಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳ ಸಲಹೆ ಪಡೆಯಬೇಕು, ಸಮಾಜದಲ್ಲಿ ಇನ್ನೂ ಅಸ್ತಿತ್ವದಲ್ಲಿ ಇರುವ ಮೌಢ್ಯವನ್ನು ತೊಲಗಿಸುವಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಮಹತ್ವದ್ದಾಗಿದೆ ಎಂದರು.

ಡಿ.ಜಗನ್ನಾಥ ಸಾಗರ್ ಮಾತನಾಡಿ, ‘ಇಂದು ಹಿಂದುಳಿದ ಸಮುದಾಯಗಳು ಅಂಬೇಡ್ಕರ್, ದೇವರಾಜ್ ಅರಸು, ಹಾವನೂರು ಅವರನ್ನು ಸ್ಮರಿಸಬೇಕಾಗಿದೆ. ಇವರ ಹೋರಾಟದ ಫಲವಾಗಿ ಸರ್ಕಾರಿ ಕೆಲಸಗಳು ಎಲ್ಲರಿಗೂ ಲಭಿಸುವಂತೆ ಆಗಿದೆ’ ಎಂದರು.

ಸರಗೂರು ಮಠದ ಮಹದೇವಸ್ವಾಮಿ, 88 ಗಡಿಮನೆ ಪೀಠದ ಮಂಜುನಾಥಸ್ವಾಮಿ, ಮುಖಂಡರಾದ ಜೆ.ಯೋಗೇಶ್, ಕುಸುಮರಾಜ್, ನಿವೃತ್ತ ಪ್ರಾಂಶುಪಾಲ ಸೋಮಣ್ಣ, ಉಪ್ಪಾರ ಸೇನಾ ಸಮಿತಿ ಅಧ್ಯಕ್ಷ ಪ್ರದೀಪ್, ಪ್ರಧಾನ ಕಾರ್ಯದರ್ಶಿ ಕೆಸ್ತೂರು ಸಿದ್ದಪ್ಪಸ್ವಾಮಿ, ಗೌಡಹಳ್ಳಿ ಮಹೇಶ್, ಶಿವಕುಮಾರ್, ದುಗ್ಗಹಟ್ಟಿ ಮಾದೇಶ್, ನಂಜುಂಡಸ್ವಾಮಿ ಹಾಗೂ ವಿದ್ಯಾರ್ಥಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-37-533330321

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.