ಯಲಬುರ್ಗಾ: ಸ್ಥಳೀಯ ಕೊಪ್ಪಳ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಬಿ.ಎ. ಮತ್ತು ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಿವೃತ ಸೈನಿಕ ಎಸ್.ಪುಂಡಪ್ಪ ಅಳುವಳ್ಳಿ,‘ಪ್ರತಿಯೊಂದು ಮನೆಯಲ್ಲಿ ಒಬ್ಬರಾದರೂ ಸೈನಿಕರಾಗಲು ಮುಂದೆ ಬರಬೇಕಾಗಿದೆ. ದೇಶ ಭಕ್ತಿ ಮತ್ತು ಪ್ರೇಮ ಹುಟ್ಟಿಕೊಳ್ಳುವುದು ನಮ್ಮನ್ನು ನಾವು ತೊಡಗಿಸಿಕೊಂಡಾಗ ಮಾತ್ರ ಸಾಧ್ಯ. ಕೇವಲ ಬಾಯಿ ಮಾತಿನಿಂದ ಸಾಧ್ಯವಿಲ್ಲ, ವಿಶೇಷವಾಗಿ ಯುವಕರು ದೇಶದ ಸಂರಕ್ಷಣೆಗೆ ವಿಶೇಷ ಆಸಕ್ತಿ ಮೂಡಿಸಿಕೊಂಡು ಕಾರ್ಯಪ್ರವೃತರಾಗಬೇಕಾಗಿದೆ’ ಎಂದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿ. ಡಾಣಿ ಮಾತನಾಡಿ, ಪದವಿ ಪಡೆದರೆ ಸಾಲದು ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಬೇಕಾದರೆ ಪ್ರತಿಯೊಬ್ಬರು ಸ್ಪರ್ಧಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ನಿರಂತರ ಅಧ್ಯಯನ, ಪರಿಶ್ರಮದಿಂದ ಗುರಿ ತಲುಪಲು ಸಾಧ್ಯ. ಉನ್ನತ ಶಿಕ್ಷಣದ ಜೊತೆಗೆ ಉನ್ನತ ಹುದ್ದೆಯನ್ನು ಅಲಂಕರಿಸುವತ್ತ ಪ್ರತಿಯೊಬ್ಬರು ಶ್ರಮಿಸಬೇಕು’ ಎಂದರು.

ಕನ್ನಡ ವಿಭಾಗದ ಪ್ರಾಧ್ಯಾಪಕ ತಿಮ್ಮಾರಡ್ಡಿ, ನಾಗಪ್ಪ ಹೂವಿನಬಾವಿ, ದೇವರಾಜ, ಈರಮ್ಮ ಸೇರಿ ಅನೇಕರು ಮಾತನಾಡಿದರು. ಉಪನ್ಯಾಸಕರಾದ ಕುಮಾರಸ್ವಾಮಿ, ರಾಜಣ್ಣ, ಸುರೇಶ, ಪರಶುರಾಮ, ದೇವಪ್ಪ, ಶಂಕರ ರಾಠೋಡ, ತಿಮ್ಮಪ್ಪ, ಗವಿಸಿದ್ದಯ್ಯ, ರವಿ, ಕಾವ್ಯಾ, ಕರಿಷ್ಮಾ, ಫಮೀದಾ ಸೇರಿ ಅನೇಕರು ಇದ್ದರು. ಪ್ರಕಾಶ ಮತ್ತು ಪೂಜಾ ನಿರೂಪಿಸಿದರು. ಭಾಗ್ಯಲಕ್ಷ್ಮಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-35-1751696959

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.