ಉಳ್ಳಾಲ: ಕೇಂದ್ರ ಸರ್ಕಾರದ ಯುವಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ, ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಆಶ್ರಯದಲ್ಲಿ ದೇರಳಕಟ್ಟೆಯ ಯೆನೆಪೋಯ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರಾಜೆಕ್ಟ್ ಸಂಕಲ್ಪ್– ಕೋಡ್ ಫಾರ್ ಚೇಂಜ್ ಹ್ಯಾಕಥಾನ್ನ ಸಮಾರೋಪ ನಡೆಯಿತು.

ದೇಶದ 13 ರಾಜ್ಯಗಳು ಹಾಗೂ 50 ನಗರಗಳಿಂದ 630 ತಂಡಗಳ ನೋಂದಣಿ ಆಗಿದ್ದು, 92 ತಂಡಗಳು ವಿಡಿಯೊ ಪ್ರಸ್ತುತಿಪಡಿಸಿದರು. 40 ತಂಡಗಳನ್ನು ಆಫ್ಲೈನ್ ಹಂತಕ್ಕೆ ಆಯ್ಕೆ ಮಾಡಲಾಗಿದ್ದು, ಮಂಗಳೂರಿನ 18 ತಂಡಗಳು ಹಾಗೂ ಹೊರಗಿನ 22 ತಂಡಗಳಲ್ಲಿ 61 ವಿದ್ಯಾರ್ಥಿನಿಯರು, 120 ವಿದ್ಯಾರ್ಥಿಗಳ ಸಹಿತ 181 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಹವಾಮಾನ ಬದಲಾವಣೆ, ಆರೋಗ್ಯ ಸೇವೆ ಮುಂತಾದ ವಿಷಯಗಳ ಕುರಿತು ಕೋಡ್ ಫಾರ್ ಚೇಂಜ್ ಪರಿಕಲ್ಪನೆಯಡಿ ಹೊಸ ಆವಿಷ್ಕಾರಗಳನ್ನು ವಿದ್ಯಾರ್ಥಿಗಳು ಮಂಡಿಸಿದರು.

ಪ್ರಥಮ ಬಹುಮಾನವಾಗಿ ₹50 ಸಾವಿರ, ದ್ವಿತೀಯ ₹30 ಸಾವಿರ, ತೃತೀಯ ₹20 ಸಾವಿರ ಹಾಗೂ ಅತ್ಯುತ್ತಮ ನವೋದ್ಯಮ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಯೆನೆಪೋಯ ಟೆಕ್ನಾಲಜಿ ಇನ್ ಕ್ಯುಬೇಟರ್ ಪ್ರಾಯೋಜಿತ ಮೊದಲ ಬಹುಮಾನ ಸಿಯಾನ ಆಂಡ್ರಿಯಾ ಡಿಸೋಜ ನೇತೃತ್ವದ ಟೀಮ್ ಡೌನ್ಲೋಡರ್ಸ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಾಯೋಜಕತ್ವದ ದ್ವಿತೀಯ ಬಹುಮಾನ ಮಯೂರಿ ಎಸ್.ನೇತೃತ್ವದ ಟೀಮ್ ಕಂಟ್ರೋಲ್ ಫಿಕ್ಸ್, ದ್ವಿತೀಯ ಬಹುಮಾನ ಕೃತಾರ್ಥ್ ಜೈನ್ ನೇತೃತ್ವದ ಟೀಮ್ ನಥಿಂಗ್ ಮತ್ತು ಬೆಸ್ಟ್ ವುಮನ್ ಲೀಡಿಂಗ್ ಟೀಮ್ ಜ್ಯೋತಿ ನೇತೃತ್ವದ ಟೀಮ್ ಲಾಜಿಕಲಿ ಪಾಲಾಯಿತು.

ಯೆನೆಪೋಯ ವಿವಿ ಕುಲಸಚಿವ ಡಾ. ಅಶ್ವಿನಿ ದತ್ ಆರ್.ಸಮಾರೋಪದ ಅಧ್ಯಕ್ಷತೆ ವಹಿಸಿದ್ದರು. ಗ್ರೂಪ್ ಆಫ್ ಫಾರ್ಮಾಸ್ಯುಟಿಕಲ್ಸ್ ವ್ಯವಹಾರ ಅಭಿವೃದ್ಧಿ ವಿಭಾಗ ಉಪಾಧ್ಯಕ್ಷ ಡಾ.ಸುನಿಲ್ ಎಸ್. ಚಿಪ್ಲುಂಕರ್, ಯೆನೆಪೋಯ ಇಂಕ್ಯುಬೆಟರ್ ಟೆಕ್ನಾಲಜಿ ವಿಭಾಗ ಸಿಇಒ ಡಾ.ಆಸಿಮ್ ಸಯ್ಯದ್ ಶೀರಝ್, ಎಂಜಿನಿಯರಿಂಗ್ ಮತ್ತು ತಾಂತ್ರಿಕ ವಿಭಾಗ ಡೀನ್ ಜಿ.ರಾಜೇಶ್ ಡಿಸೋಜ, ಯೆನೆಪೋಯ ವಿವಿ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ ನಿರ್ದೇಶಕಿ ಡಾ.ರೇಖಾ ಪಿ.ಡಿ. ಭಾಗವಹಿಸಿದ್ದರು.

ಡಾ. ಮಾಳವಿಕಾ ಸ್ವಾಗತಿಸಿದರು. ಯೆನೆಪೋಯ ವಿಸ್ತರಣಾ ಮತ್ತು ಜನಸಂಪರ್ಕ ವಿಭಾಗ ನಿರ್ದೇಶಕಿ ಡಾ.ಅಶ್ವಿನಿ ಎಸ್.ಶೆಟ್ಟಿ ವರದಿ ಮಂಡಿಸಿದರು. ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಆದಿತ್ಯ ವಂದಿಸಿದರು. ಪ್ರಿಯಾಂಕ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-29-155849851

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.