ಚಿತ್ರದುರ್ಗ: ‘ಸಾಧನೆ ಮಾಡುವವರಿಗೆ ಬೇರೆ ಯಾವ ಆಲೋಚನೆಯೂ ಇರಬಾರದು. ವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಂಡು ಸಾಗಿದರೆ ಮುಂದಿನ ಜೀವನದ ದಾರಿ ಸುಗಮವಾಗುತ್ತದೆ’ ಎಂದು ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ತಿಳಿಸಿದರು.

ನಗರದ ಚಂದ್ರವಳ್ಳಿಯ ಎಸ್ಜೆಎಂ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ಶೈಕ್ಷಣಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಪದವಿ ಪೂರೈಸಿದ ವಿದ್ಯಾರ್ಥಿಗಳ ಮುಂದೆ ನೂರಾರು ಆಯ್ಕೆಗಳಿರುತ್ತವೆ. ಈ ಸಂದರ್ಭದಲ್ಲಿ ನಿಮ್ಮ ಜೀವನದ ಬಂಡಿಯ ಚಾಲಕರು ನೀವೇ ಆಗಬೇಕು. ಆಗ ಮಾತ್ರ ಜೀವನ ಸರಿಯಾದ ದಿಕ್ಕಿನ ಕಡೆಗೆ ಸಾಗಿ ನಿಗದಿತ ಗುರಿ ತಲುಪಲು ಸಾಧ್ಯ’ ಎಂದರು.

‘ಕಾಲೇಜು, ವಿದ್ಯಾರ್ಥಿಗಳ ಜೀವನ ರೂಪಿಸುವ ಒಂದು ಕಾರ್ಖಾನೆಯಾಗಿ ಇಂದಿಗೂ ಉಳಿದುಕೊಂಡಿದೆ. ಹಾಗೆಯೇ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಭವಿಷ್ಯದ ಕುರಿತು ಯೋಚಿಸಬೇಕು. ನಿಮ್ಮ ಜೀವನಕ್ಕೆ ಮೆಟ್ಟಿಲಾಗಿರುವ ತಂದೆ ತಾಯಿಯನ್ನು ಯಾವ ಕಾರಣಕ್ಕೂ ದೂರ ಮಾಡಿಕೊಳ್ಳದೆ ಪ್ರೀತಿಯಿಂದ ನೋಡಿಕೊಳ್ಳಿ’ ಎಂದು ಕಿವಿಮಾತು ಹೇಳಿದರು.

‘ಅಂತಿಮ ವರ್ಷದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ತೆಗೆದು ಜೀವನ ರೂಪಿಸಿಕೊಳ್ಳಬೇಕು’ ಎಂದು ಪ್ರಾಂಶುಪಾಲ ಎಸ್.ಎಚ್. ಪಂಚಾಕ್ಷರಿ ತಿಳಿಸಿದರು.

ಐಕ್ಯೂಎಸಿ ಸಂಚಾಲಕ ಹರ್ಷವರ್ಧನ್, ಉಪನ್ಯಾಸಕರಾದ ಎಚ್. ಸತೀಶ್ ನಾಯಕ್, ಪ್ರೊ.ಟಿ.ಎನ್. ರಜಪೂತ್, ಎಂ.ಆರ್. ಚಿದಾನಂದಪ್ಪ, ಬಿ.ಎಂ. ಸ್ವಾಮಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-44-2125959902

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.