ದಾವಣಗೆರೆ: ನಾಗರಿಕ ಸೇವಾ ಅಧಿಕಾರಿಗೆ ಸಮಾಜದಲ್ಲಿ ನಡೆಯುವ ವೈವಿಧ್ಯಮಯ ವಿಚಾರಗಳನ್ನು ತಿಳಿದುಕೊಳ್ಳುವ ಅವಕಾಶ ಸಿಗುತ್ತದೆ. ಸಮಸ್ಯೆಗಳಿಗೆ ಪರಿಹಾರ ನೀಡುವಷ್ಟು ಅಧಿಕಾರವೂ ಇರುತ್ತದೆ. ಇಂತಹ ಅವಕಾಶವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡರೆ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಬಹುದು ಎಂದು ಮಹಾರಾಷ್ಟ್ರದ ಧಾರಾಶಿವ್ನ ಜಿಲ್ಲಾಧಿಕಾರಿ ಕೀರ್ತಿ ಕಿರಣ್ ಎಚ್. ಪೂಜಾರ್ ಅಭಿಪ್ರಾಯಪಟ್ಟರು.

ನಗರದ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪಠ್ಯಪೂರಕ ಹಾಗೂ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.

ಪಠ್ಯದ ಓದನ್ನು ನಿರ್ಲಕ್ಷಿಸುವಂತೆಯೇ ಇಲ್ಲ. ಇದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿನ, ದೈಹಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳಲು ಸಾಧ್ಯವಾಗುತ್ತದೆ. ದೈನಂದಿನ ವ್ಯಾಯಾಮ, ಕ್ರೀಡೆಗಳು ಇಡೀ ದಿನವನ್ನು ಉಲ್ಲಸಿತವಾಗಿ ಕಳೆಯಲು ನೆರವಾಗುತ್ತವೆ ಎಂದು ಹೇಳಿದರು.

‘ಕಾಲೇಜು ದಿನಗಳಲ್ಲಿ ಭಾವಗೀತೆ ಬಗ್ಗೆ ನನಗೆ ಒಲವಿತ್ತು. ಹೊಸಪೇಟೆ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಭಾವಗೀತೆಗಳನ್ನು ಕೇಳುತ್ತಿದ್ದೆ. ಕ್ಯಾಸೆಟ್, ರೆಕಾರ್ಡಿಂಗ್ ಇಲ್ಲದ್ದರಿಂದ ಪದ್ಯವನ್ನು ಬರೆದುಕೊಳ್ಳುತ್ತಿದ್ದೆ. ಪ್ರಾಧ್ಯಾಪಕರು ಕಾಲೇಜಿನ ಕಾರ್ಯಕ್ರಮದಲ್ಲಿ ಹಾಡುವಂತೆ ಹುರಿದುಂಬಿಸಿದರು’ ಎಂದು ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿದರು.

ಯಾವುದೇ ವಿಚಾರವನ್ನು ಆಳವಾಗಿ ತಿಳಿದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಒಂದು ಪದ್ಯವನ್ನು ಓದಬೇಕಿದ್ದರೂ ಅದನ್ನು ವಿಮರ್ಶಾತ್ಮಕ ದೃಷ್ಟಿಯಲ್ಲೇ ನೋಡಬೇಕು. ವಿಷಯವೊಂದನ್ನು ಪರಿಧಿಯಾಚೆಗೆ ಕುತೂಹಲದಿಂದ ನೋಡುವುದು ಮುಖ್ಯವಾಗುತ್ತದೆ. ನಾಗರಿಕ ಸೇವಾ ಅಧಿಕಾರಿ ಸೇರಿದಂತೆ ಯಾವುದೇ ವೃತ್ತಿ ಜೀವನದಲ್ಲಿ ಇವೆಲ್ಲವೂ ಬಹುವಾಗಿ ನೆರವಿಗೆ ಬರುತ್ತದೆ ಎಂದು ವಿವರಿಸಿದರು.

‘ನಾನು ಐಎಎಸ್ಗೆ ತಯಾರಿ ನಡೆಸುವಾಗ ಮಾರ್ಗದರ್ಶನ ನೀಡುವವರು ಯಾರೂ ಇರಲಿಲ್ಲ. ಈಗ ಕಾಲ ಬದಲಾಗಿದೆ. ಮೊಬೈಲ್, ನೋಟ್ಸ್, ಕೋಚಿಂಗ್ ಸೇರಿದಂತೆ ಎಲ್ಲ ಮೂಲಗಳೂ ಲಭ್ಯವಿವೆ. ಓದಿನಲ್ಲಿ ನಿರಂತರತೆ ಹಾಗೂ ಶಿಸ್ತು ಅತಿಮುಖ್ಯ ವಿಚಾರಗಳು. ಎಷ್ಟೇ ಸಮಸ್ಯೆಗಳಿದ್ದರೂ ಧನಾತ್ಮಕ ಮನೋಭಾವ ಬೆಳೆಸಿಕೊಳ್ಳುವುದು ಹಾಗೂ ಪರಿಹಾರ ಕಂಡುಕೊಳ್ಳುವುದು ಅಗತ್ಯ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಂತರ, ನಾಗರಿಕ ಸೇವಾ ಪರೀಕ್ಷೆ ಕುರಿತಂತೆ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ಪ್ರಾಂಶುಪಾಲ ಟಿ. ಕರಿಬಸಪ್ಪ ಅಧ್ಯಕ್ಷತೆ ವಹಿಸಿದ್ದರು.

ಸಿಡಿಸಿ ಸದಸ್ಯರಾದ ಕೆ.ಎಸ್. ಈಶ್ವರಪ್ಪ, ಅನಿಲ್ ಗೌಡ, ಸುಜಾತಾ, ಪ್ರಾಧ್ಯಾಪಕರಾದ ಎಸ್.ಪಿ ನಾಗನಗೌಡ, ಶೋಭಾ ಸಾವಕಾರ, ಸವಿತಾ, ಶಿವರಾಜ್, ಸಿದ್ದಲಿಂಗಮ್ಮ, ಸುನೀತಾ, ರಾಮಚಂದ್ರ, ಸುಭಾಷ್, ಮಲ್ಲಿಕಾರ್ಜುನ ಗೌಡ, ಕುಮಾರ್, ಶಿವಾನಂದ ಮೂರ್ತಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-43-854549985

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.