ದಾವಣಗೆರೆ: ‘ದ್ವಿತೀಯ ಪಿಯುಸಿ ಬಳಿಕ ಯಾವ ಪದವಿಗೆ ಸೇರಬೇಕು, ಪದವಿ ನಂತರ ಯಾವ ಕೋರ್ಸ್ ತೆಗೆದುಕೊಳ್ಳಬೇಕು ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿಯನ್ನು ನೀಡುವ ಉದ್ದೇಶದಿಂದ ನಗರದ ಜಿಎಂಯು ಕ್ಯಾಂಪಸ್ನಲ್ಲಿ ಏಪ್ರಿಲ್ 25ರಂದು ‘ಓಪನ್ ಡೇ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಜಿಎಂ ವಿಶ್ವವಿದ್ಯಾಲಯದ ಮಾರ್ಕೆಟಿಂಗ್ ಮತ್ತು ಪ್ರಮೋಷನ್ ವಿಭಾಗದ ಡೀನ್ ವೀರಗಂಗಾಧರಸ್ವಾಮಿ ಟಿ.ಎಂ. ತಿಳಿಸಿದರು.

‘ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆ ಮಾತ್ರವಲ್ಲದೇ ಸುತ್ತಮುತ್ತಲಿನ ವಿವಿಧ ಜಿಲ್ಲೆಗಳ ಪಿಯು ಮತ್ತು ಪದವಿ ಕಾಲೇಜುಗಳಿಗೆ ಆಹ್ವಾನ ನೀಡಲಾಗಿದೆ. 3 ಸಾವಿರ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಜಿಎಂಯುನಲ್ಲಿ ಎಂಜಿನಿಯರಿಂಗ್ ಅಷ್ಟೇ ಅಲ್ಲದೇ ವಿಜ್ಞಾನ, ವಾಣಿಜ್ಯ, ಮ್ಯಾನೇಜ್ಮೆಂಟ್, ಸಂಶೋಧನಾ ಪದವಿ, ಕಂಪ್ಯೂಟರ್ ಅಪ್ಲಿಕೇಶನ್ಸ್ ಸೇರಿದಂತೆ ಆಹಾರ, ಕೃಷಿ, ಆರೋಗ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ಸ್ನಾತಕ ಮತ್ತು ಸ್ನಾತಕೋತ್ತರ ಹಾಗೂ ಪಿಎಚ್ಡಿ ಕೋರ್ಸ್ಗಳು ಲಭ್ಯ ಇವೆ. ಇವುಗಳು ಉದ್ಯೋಗಮುಖಿ ಮತ್ತು ಕೌಶಲಾಧಾರಿತ ಶಿಕ್ಷಣವನ್ನು ಒಳಗೊಂಡಿವೆ’ ಎಂದು ಹೇಳಿದರು.

ಪ್ರಸಕ್ತ ಸಾಲಿನಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಹಾಗೂ ಸಿವಿಲ್ ಎಂಜಿನಿಯರಿಂಗ್ನಲ್ಲಿ ಸಂಜೆ ತರಗತಿಯೂ ಇವೆ. ಕೈಗಾರಿಕಾ ಅಗತ್ಯಗಳಿಗೆ ಅನುಗುಣವಾಗಿ ಕೋರ್ಸ್ಗಳನ್ನು ರೂಪಿಸಲಾಗಿದೆ. ಜೊತೆಗೆ ರೋಬೋಟಿಕ್ಸ್ ಮತ್ತು ಅಟೋಮೇಷನ್, ಅರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ಮಿಷನ್ ಲರ್ನಿಂಗ್ ಸೇರಿದಂತೆ ಹೊಸ ತಂತ್ರಜ್ಞಾನ, ನಿರ್ವಹಣೆ ಮತ್ತು ವಿಜ್ಞಾನ ಕ್ಷೇತ್ರಗಳಿಗೆ ಒತ್ತು ನೀಡುವ ಕೋರ್ಸ್ಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ವಿಮಾನಯಾನ ಕೋರ್ಸ್, ಹೋಟೆಲ್ ಮ್ಯಾನೇಜ್ಮೆಂಟ್, ಕ್ಯಾಟರಿಂಗ್ ಸೇರಿದಂತೆ ಉದ್ಯಮ ಹಾಗೂ ಸ್ವಯಂ ಉದ್ಯೋಗದ ಕೋರ್ಸ್ಗಳ ಜೊತೆಗೆ ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಹಕಾರಿಯಾಗಬಲ್ಲ ಫ್ಯಾಷನ್ ಡಿಸೈನ್, ಹೊಲಿಗೆ ವಿನ್ಯಾಸದ ಕಸೂತಿ ಕಲೆಯಂತಹ ಕೌಶಲದ ಕೋರ್ಸ್ಗಳನ್ನೂ ಆರಂಭಿಸಲಾಗಿದೆ. ಜಿಎಂಯು ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಸಿದ್ಧಪಡಿಸಿದ ಮಾದರಿಗಳ ಪ್ರಸ್ತುತಿಗೆ ವಿಜ್ಞಾನ ವಸ್ತುಪ್ರದರ್ಶನ ಸಹ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಎಂಬಿಎ ನಿರ್ದೇಶಕ ಶಿವಕುಮಾರ್ ಎಸ್., ಫ್ಯಾಕಲ್ಟಿ ಆಫ್ ಬೇಸಿಕ್ ಆ್ಯಂಡ್ ಅಪ್ಲೈಡ್ ಸೈನ್ಸ್ ಡೀನ್ ಸಂತೋಷ್ ಬಿ.ಎಂ., ಸ್ಕೂಲ್ ಆಫ್ ಎಂಜಿನಿಯರಿಂಗ್ನ ನಿರ್ದೇಶಕ ಪ್ರವೀಣ್ ಜೆ., ಸಂಶೋಧನಾ ಮತ್ತು ನಾವೀನ್ಯತೆ ಡೀನ್ ಕೆ.ಎನ್. ಭರತ್, ಎಂಜಿನಿಯರಿಂಗ್ ವಿನ್ಯಾಸ ವಿಭಾಗದ ಮುಖ್ಯಸ್ಥ ಶ್ರೀನಿವಾಸ್ ಸಿ.ವಿ. ಉಪಸ್ಥಿತರಿರುವರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-43-1937602804

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.