ಗಂಗಾವತಿ: ನಗರದ ಎಸ್ಕೆಎನ್ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ಲೇಸ್ಮೆಂಟ್ ಘಟಕದಿಂದ ಹಾಗೂ ಬೆಂಗಳೂರು ಐಸಿಎಸ್ಸಿ ಚಾಪ್ಟರ್ ಸಹಯೋಗದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಕಂಪನಿ ಸೆಕ್ರೆಟರಿ ಕೋರ್ಸ್ ಕುರಿತು ಮಾಹಿತಿ ನೀಡಲಾಯಿತು.

ಸಂಪನ್ಮೂಲ ವ್ಯಕ್ತಿ ಸಿ.ಎಸ್. ಚಂದನ್ ಅವರು, ವಿದ್ಯಾರ್ಥಿಗಳಿಗೆ ಕಂಪನಿ ಸೆಕ್ರೆಟರಿ ವಿಷಯ, ಭವಿಷ್ಯದ ಅವಕಾಶಗಳ ಬಗ್ಗೆ, ಅಭ್ಯಾಸಕ್ಕೆ ತಗಲುವ ವೆಚ್ಚದ ಕುರಿತು ಮಾಹಿತಿ ನೀಡಿ, ಓದುವ ವಿಧಾನ, ತಯಾರಿ ಕುರಿತು ವಿವರಿಸಿದರು.

ಕಾಲೇಜಿನ ಪ್ರಾಚಾರ್ಯ ಶಿವರಾಜ ಗುರಿಕಾರ ಮಾತನಾಡಿ, ‘ಬದುಕಿನ ಭವಿಷ್ಯ ಕುರಿತ ಶಿಕ್ಷಣದ ತರಬೇತಿ, ಮಾಹಿತಿ ನೀಡುವ ಉಪನ್ಯಾಸದ ಕಾರ್ಯಕ್ರಮಗಳ ಉಪಯೋಗ ವಿದ್ಯಾರ್ಥಿಗಳು ಕಡ್ಡಾಯವಾಗಿ ಪಡೆಯಬೇಕು’ ಎಂದು ಕಿವಿಮಾತು ಹೇಳಿದರು.

ಪ್ಲೇಸ್ಮೆಂಟ್ ಘಟಕದ ಸಂಚಾಲಕ ಅಶ್ರಫ್ ಅಳ್ಳಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಚಾಲಕ ಮಂಜುನಾಥ ಕೆ.ಎಚ್. ಮಾತನಾಡಿದರು. ಗಣಕ ವಿಜ್ಞಾನ ವಿಭಾಗದ ರವಿಕುಮಾರ ಕೆ., ನಿರ್ವಹಣಾಶಾಸ್ತ್ರ ವಿಭಾಗದ ಅನಿತಾ ಕೆ.ಎಂ., ರಾಜ್ಯಶಾಸ್ತ್ರ ವಿಭಾಗದ ಬಿ.ಫಣಿರಾಜ, ವಾಣಿಜ್ಯಶಾಸ್ತ್ರ ವಿಭಾಗದ ಅಕ್ಕಿ ಮಾರುತಿ, ಶಿವಕುಮಾರ ಉಪವಾಸಿ, ಗಣಿತಶಾಸ್ತ್ರ ವಿಭಾಗದ ಅಶೋಕ ಅಶೋಕ, ರಸಾಯನಶಾಸ್ತ್ರ ವಿಭಾಗದ ಮಲ್ಲಿಕಾರ್ಜುನ ಸೇರಿ ಬೋಧಕ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-35-712491961

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.