ಭಾರತದಲ್ಲಿ ಹತ್ತಿರದ ಸಂಬಂಧಿಕರನ್ನು ಮದುವೆಯಾಗುವ ಸಂಪ್ರದಾಯವು ಹಲವು ಜಾತಿಗಳಲ್ಲಿ ಇದೆ. ಬಹಳ ಕಡಿಮೆ ಜನಸಂಖ್ಯೆಯಿರುವ ಸಮುದಾಯಗಳು ಮತ್ತು ಸಣ್ಣ ಪ್ರದೇಶಕ್ಕೆ ಸೀಮಿತವಾಗಿರುವ ಸಮುದಾಯಗಳ ಜನರು ತಮ್ಮ ತಮ್ಮೊಳಗೆ ಮದುವೆಯಾಗುವ ಕಾರಣದಿಂದಲೂ ಅವರಲ್ಲಿ ಆನುವಂಶೀಯ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆಯಿರುತ್ತದೆ.

ತಂದೆ ಮತ್ತು ತಾಯಿ ಹತ್ತಿರದ ಬಂಧುಗಳಾಗಿದ್ದರೆ ಅವರಲ್ಲಿರುವ ವಂಶವಾಹಿಗಳಲ್ಲಿ ಹೆಚ್ಚಿನ ಸಾಮ್ಯತೆಯಿರುತ್ತದೆ. ಅವರಿಬ್ಬರೂ ಕೆಲವು ಸುಪ್ತ ಹಾನಿಕಾರಕ ವಂಶವಾಹಿಗಳನ್ನು ಹೊಂದಿರುವ ಸಂಭವವಿರುತ್ತದೆ. ಹುಟ್ಟುವ ಮಕ್ಕಳು ತಂದೆ ಮತ್ತು ತಾಯಿ ಇಬ್ಬರ ಕಡೆಯಿಂದಲೂ ಈ ಹಾನಿಕಾರಕ ವಂಶವಾಹಿಗಳನ್ನು ತಮ್ಮದಾಗಿಸಿಕೊಂಡಾಗ ಅವರಲ್ಲಿ ಹಲವು ಕಾಯಿಲೆಗಳ ಲಕ್ಷಣವು ಕಂಡುಬರುತ್ತದೆ. ಈ ಕಾರಣದಿಂದಾಗಿ ಹತ್ತಿರದ ರಕ್ತಸಂಬಂಧಿಗಳಲ್ಲಿ ಮದುವೆಯಾಗುವುದರಿಂದ ಹಲವು ತೊಂದರೆಗಳು ಕಂಡುಬರಬಹುದೆಂದು ವೈದ್ಯರು ಎಚ್ಚರಿಸುತ್ತಾರೆ.

ಹುಟ್ಟುವ ಮಕ್ಕಳಲ್ಲಿ ಹೃದಯದ ತೊಂದರೆಗಳು, ಸೀಳುತುಟಿಯಂಥ ಜನ್ಮಜಾತ ದೋಷಗಳು ಕಂಡುಬರಬಹುದು. ಆನುವಂಶೀಯ ಕಾಯಿಲೆಗಳಾದ ಥಲಸೀಮಿಯಾ, ಸಿಕಲ್ಸೆಲ್ ಅನಿಮಿಯಾ ಕಾಯಿಲೆಗಳೂ ಬರಬಹುದು. ಇಂಥ ದಂಪತಿಗಳಲ್ಲಿ ಶಿಶುಮರಣದ ಅಪಾಯ ಮತ್ತು ಹುಟ್ಟುವ ಮಕ್ಕಳಲ್ಲಿ ಬುದ್ಧಿಮಾಂದ್ಯತೆಯೂ ಬರಬಹುದು. ವಂಶವಾಹಿಗಳಲ್ಲಿ ವೈವಿಧ್ಯ ಇಲ್ಲದಿರುವುದರಿಂದ ಇಂತಹ ಮಕ್ಕಳ ರೋಗ ನಿರೋಧಕ ಶಕ್ತಿ ಕಡಿಮೆಯಿರಬಹುದು.

ಒಂದು ವೇಳೆ ಹತ್ತಿರದ ಸಂಬಂಧಿಗಳಲ್ಲಿ ಮದುವೆಯಾಗುವ ಸಂದರ್ಭ ಬಂದರೆ ವಿವಾಹಪೂರ್ವ ಪರೀಕ್ಷೆಗಳನ್ನು ಇಬ್ಬರೂ ಮಾಡಿಸಿಕೊಳ್ಳುವುದು ಸೂಕ್ತ. ತಮ್ಮೊಳಗೆ ಯಾವುದಾದರೂ ಸುಪ್ತ ಹಾನಿಕಾರಕ ವಂಶವಾಹಿ ಇದ್ದಲ್ಲಿ ಅದೇ ರೀತಿಯ ವಂಶವಾಹಿಯು ತಮ್ಮನ್ನು ಮದುವೆಯಾಗುವವರಲ್ಲಿ ಇರಬಾರದು.

ವಿವಾಹಕ್ಕೂ ಮುನ್ನ ಜೆನೆಟಿಕ್ ಕೌನ್ಸೆಲಿಂಗ್ (ಆನುವಂಶಿಕ ಸಮಾಲೋಚನೆ) ಎನ್ನುವುದು ದಂಪತಿಗಳು ತಮ್ಮ ಮತ್ತು ಅವರ ಭವಿಷ್ಯದ ಮಕ್ಕಳ ಆರೋಗ್ಯದ ಬಗ್ಗೆ ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ ಪ್ರಕ್ರಿಯೆಯಾಗಿದೆ. ಇದು ವಿಶೇಷವಾಗಿ ಒಂದೇ ಕುಟುಂಬದೊಳಗಿಂದ ವಿವಾಹವಾಗುವವರಿಗೆ ಅಥವಾ ಕುಟುಂಬದಲ್ಲಿ ಆನುವಂಶಿಕ ಕಾಯಿಲೆಗಳ ಇತಿಹಾಸವಿರುವವರಿಗೆ ಅತ್ಯಗತ್ಯವಾಗಿರುತ್ತದೆ.

ಆನುವಂಶಿಕ ಸಮಾಲೋಚನೆಯ ಮೂಲಕ ಆನುವಂಶಿಕ ಸಮಸ್ಯೆಗಳನ್ನು ಅಂದಾಜು ಮಾಡಬಹುದು. ಕುಟುಂಬದ ಮೂರು ತಲೆಮಾರುಗಳ ಆರೋಗ್ಯ ಇತಿಹಾಸವನ್ನು ವಿಶ್ಲೇಷಿಸಿ, ಆನುವಂಶಿಕ ಅಸಹಜತೆ ಹೊಂದಿರುವ ಮಗುವನ್ನು ಹೊಂದುವ ಅಪಾಯದ ಪ್ರಮಾಣವನ್ನು ನಿರ್ಧರಿಸಲಾಗುತ್ತದೆಜೆನಿಟಿಕ್ ಕ್ಯಾರಿಯರ್ ಸ್ಕ್ರೀನಿಂಗ್ ಮೂಲಕ ಥಲಸ್ಸೆಮಿಯಾ, ಸಿಕಲ್ಸೆಲ್ ಅನಿಮಿಯಾ, ಸಿಸ್ಟಿಕ್ ಫೈಬ್ರೋಸಿಸ್ ಮುಂತಾದ ಕಾಯಿಲೆಗಳಿಗೆ ಸಂಬಂಧಪಟ್ಟ ಸುಪ್ತ ಹಾನಿಕಾರಕ ವಂಶವಾಹಿಗಳನ್ನು ಹುಡುಕಲಾಗುತ್ತದೆ. ಆನುವಂಶಿಕತೆಯಿಂದ ಬರುವ ಕಾಯಿಲೆಗಳನ್ನು ಹೇಗೆ ತಡೆಗಟ್ಟಬಹುದು ಅಥವಾ ನಿರ್ವಹಿಸಬಹುದು ಎಂಬುದರ ಕುರಿತು ತಜ್ಞರಿಂದ ಮಾರ್ಗದರ್ಶನ ನೀಡಲಾಗುತ್ತದೆ.

ರಕ್ತಸಂಬಂಧಿಗಳಲ್ಲಿ ವಿವಾಹವಾಗುವವರಿಗೆ ಮತ್ತು ಕುಟುಂಬದಲ್ಲಿ ಯಾವುದೇ ಆನುವಂಶಿಕ ಕಾಯಿಲೆಗಳ (ಉದಾಹರಣೆಗೆ ಥಲಸ್ಸೆಮಿಯಾ) ಇತಿಹಾಸವಿದ್ದವರು ಮಕ್ಕಳನ್ನು ಹೊಂದುವ ಮುನ್ನ ಆನುವಂಶಿಕ ಸಮಾಲೋಚನೆ ಮಾಡುವುದು ಅತ್ಯಗತ್ಯವಾಗಿದೆ. ಯಾರಿಗಾದರೂ ನಿರಂತರ ಗರ್ಭಪಾತಗಳಾಗಿದ್ದರೆ ಅದರ ಹಿಂದೆಯು ಆನುವಂಶಿಕ ಕಾರಣಗಳಿರಬಹುದು. ಮಗುವಿಗಾಗಿ ಪ್ರಯತ್ನಿಸುತ್ತಿರುವ ಮಹಿಳೆಯ ವಯಸ್ಸು ಮೂವತ್ತೈದು ವರ್ಷಕ್ಕೂ ಹೆಚ್ಚಾಗಿದ್ದಲ್ಲಿ ಆನುವಂಶಿಕ ಸಮಾಲೋಚನೆ ಮಾಡಿಸಿಕೊಳ್ಳುವುದು ಉತ್ತಮ.

ಜೆನೆಟಿಕ್ ಕೌನ್ಸೆಲಿಂಗ್ಗೆ ಹೋಗುವಾಗ ನಿಮ್ಮ ಕುಟುಂಬದ ಮೂರು ತಲೆಮಾರುಗಳ ಆರೋಗ್ಯ ಇತಿಹಾಸ ಮತ್ತು ಲಭ್ಯವಿರುವ ಯಾವುದೇ ವೈದ್ಯಕೀಯ ವರದಿಗಳನ್ನು ಜೊತೆಯಲ್ಲಿಟ್ಟುಕೊಳ್ಳುವುದು ಸಹಕಾರಿಯಾಗುತ್ತದೆ.ವೈದ್ಯಕೀಯ ಸಂಶೋಧನೆಗಳ ಪ್ರಕಾರ, ಅಪರಿಚಿತ ಕುಟುಂಬಗಳ ನಡುವಿನ ಮದುವೆಗೆ ಹೋಲಿಸಿದರೆ ರಕ್ತ ಸಂಬಂಧಿಗಳ ನಡುವಿನ ಮದುವೆಯಲ್ಲಿ ಜನ್ಮಜಾತ ದೋಷಗಳ ಅಪಾಯ ಸುಮಾರು ಎರಡು ಪಟ್ಟು ಹೆಚ್ಚಾಗಿರುತ್ತದೆ.

ಗರ್ಭಧಾರಣೆಯಾದ ನಂತರವೂ ಒಳಗಿರುವ ಮಗುವಿನಲ್ಲಿ ಆನುವಂಶಿಕ ಕಾಯಿಲೆಗಳು ಇರುವುದನ್ನು ಪತ್ತೆಹಚ್ಚುವ ಸೌಲಭ್ಯವಿದೆ. ಒಳಗಿರುವ ಮಗುವಿನಲ್ಲಿ ಯಾವುದಾದರು ಗಂಭೀರವಾದ ಕಾಯಿಲೆಗಳು ಇದ್ದಲ್ಲಿ ವೈದ್ಯಕೀಯ ಗರ್ಭಪಾತ ಮಾಡಿಸಿಕೊಳ್ಳುವ ಆಯ್ಕೆಯೂ ತಂದೆ–ತಾಯಿಯರ ಮುಂದೆ ಲಭ್ಯವಿರುತ್ತದೆ. ತಾಯಿ ರಕ್ತದಲ್ಲಿ ಕೆಲವು ಮಾರ್ಕರ್ ಕಣಗಳನ್ನು ಪರೀಕ್ಷೆ ಮಾಡುವುದರ ಮೂಲಕ ಡೌನ್ ಸಿಂಡ್ರೋಮ್, ಎಡ್ವರ್ಡ್ ಸಿಂಡ್ರೋಮ್ ಕಾಯಿಲೆಗಳು ಮಗುವಿನಲ್ಲಿ ಇರುವ ಸಾಧ್ಯತೆಗಳನ್ನು ಅಂದಾಜಿಸಬಹುದು. ತಾಯಿಯ ರಕ್ತದೊಳಗೆ ಬರುವಿನ ಮಗುವಿನ ಡಿಎನ್ಎಗಳನ್ನು ಪರೀಕ್ಷೆ ಮಾಡುವುದರ ಮೂಲಕ ಮತ್ತು ಗರ್ಭಕೋಶದ ದ್ರವವನ್ನು ಪರೀಕ್ಷೆಗೆ ಒಳಪಡಿಸುವುದರ ಮೂಲಕ ಹುಟ್ಟಲಿರುವ ಮಗುವಿನಲ್ಲಿ ಬರಬಹುದಾದ ಗಂಭೀರ ಕಾಯಿಲೆಗಳನ್ನು ಅಂದಾಜಿಸಬಹುದು.

ವೈದ್ಯಕೀಯ ವಿಜ್ಞಾನ ಮುಂದುವರಿದ ಹಾಗೆ ಕಾಯಿಲೆ ಬಂದ ನಂತರ ತಡೆಯುವುದಕ್ಕಿಂತ ಕಾಯಿಲೆಯು ಬರದಂತೆ ತಡೆಯುವುದರತ್ತ ಜನರಿಗೆ ಹೆಚ್ಚಿನ ಆಸಕ್ತಿಯಿದೆ. ಈ ಕಾರಣಗಳಿಂದಾಗಿ ತಂದೆ ತಾಯಿಯಾಗಲು ಬಯಸುವವರಲ್ಲಿ ಜೆನೆಟಿಕ್ ಕೌನ್ಸೆಲಿಂಗ್ ಮಾಡಿಸಿಕೊಳ್ಳವವರ ಸಂಖ್ಯೆಯು ವಿದೇಶಗಳಲ್ಲಿ ಹೆಚ್ಚಾಗುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-51-1836517531

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.