ಹರಿಹರ: ‘ಐಬಸವಾದಿ ಶರಣರ ಅಗ್ರಪಂಕ್ತಿಯಲ್ಲಿ ಬರುವ ಶಿವಶರಣ ಮಾದಾರ ಚನ್ನಯ್ಯ ಜಯಂತ್ಯುತ್ಸವದ ಅಂಗವಾಗಿ, 2024-2025 ಹಾಗೂ 2025-26ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ 75ಕ್ಕಿಂತಲೂ ಹೆಚ್ಚು ಅಂಕಗಳನ್ನು ಪಡೆದ ಅರ್ಹ ವಿದ್ಯಾರ್ಥಿಗಳಿಗೆ, ಪ್ರತಿಭಾ ಪುರಸ್ಕಾರ, ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ನೀಡಲಾಗುವುದು’ ಎಂದು ಮಾದಿಗ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಆನಂದ ಕುಮಾರ ಹೇಳಿದರು.

‘ಮೇ 30ರಂದು ಬೆಳಿಗ್ಗೆ 11 ಗಂಟೆಗೆ ನಗರದ ಶ್ರೀಕಾಂತ್ ಚಿತ್ರ ಮಂದಿರದ ಎದುರಿನ ಕಾಟ್ವೆ ಭವನದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಆಧಾರ್ ಕಾರ್ಡ್, ಅಂಕಪಟ್ಟಿ , ಜಾತಿ ಪ್ರಮಾಣಪತ್ರದ ನಕಲು ಪ್ರತಿ, 2 ಫೋಟೊ, ಮೊಬೈಲ್ ನಂ. ಒದಗಿಸಬೇಕು. ಹೆಚ್ಚಿನ ಮಾಹಿತಿಗೆ ಎಂ.ಎಸ್ ಆನಂದಕುಮಾರ್ ಮೊ.ನಂ. 7406609623, ಪ್ರಧಾನ ಕಾರ್ಯದರ್ಶಿ ಎಚ್.ಶಿವಪ್ಪ ಮೊ.ನಂ. 9342696588ಗೆ ಸಂಪರ್ಕಿಸಬಹುದು.

ಸಮಾಜದ ಗೌರವಾಧ್ಯಕ್ಷ ಎಲ್.ಬಿ. ಹನುಮಂತಪ್ಪ, ಉಪಾಧ್ಯಕ್ಷ ಬನ್ನಿಕೊಡು ಹನುಮಂತಪ್ಪ, ಮುಖಂಡರಾದ ಬಸವರಾಜಪ್ಪ, ಎ.ಕೆ.ನಾಗೇಂದ್ರಪ್ಪ, ರೈತ ಸಂಘದ ಉಪಾಧ್ಯಕ್ಷ ಹಳ್ಳಿಹಾಳ ಹನುಮಂತಪ್ಪ, ಭೂ–ನ್ಯಾಯ ಮಂಡಳಿ ಸದಸ್ಯ ಎಂ.ಎಸ್ ಶ್ರೀನಿವಾಸ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-43-228747144

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.