ಹಿರೀಸಾವೆ: ‘ಪದವಿ ಶಿಕ್ಷಣದ ಜೊತೆ ಯಾವುದಾದರೂ ವೃತ್ತಿಶಿಕ್ಷಣ ಕಲಿಯುವುದರಿಂದ, ಶಿಕ್ಷಣ ಮುಗಿದ ನಂತರ ನಿರುದ್ಯೋಗ ಸಮಸ್ಯೆ ಕಾಡುವುದಿಲ್ಲ’ ಎಂದು ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಎಚ್.ಎ. ಪ್ರಮೋದ್ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಅಂತಿಮ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ದಿನದಿಂದ ದಿನಕ್ಕೆ ವಿದ್ಯಾವಂತರ ಸಂಖ್ಯೆ ಹೆಚ್ಚಾದಂತೆ, ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಕೈಯಲ್ಲಿ ಒಂದು ವೃತ್ತಿ ಇದ್ದು, ಆ ಕೆಲಸವನ್ನು ಏಕಾಗ್ರತೆ, ಶ್ರಮದಿಂದ ಮಾಡಿದಾಗ ಯಶಸ್ಸು ಸಿಗುತ್ತದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಬಿ.ಎಚ್. ಲಕ್ಷ್ಮಣಗೌಡ ಮಾತನಾಡಿ, ‘ಪದವಿ ಮುಗಿಸಿದ ನಂತರ ನಿಮ್ಮ ಜೀವನದ ನಿಜವಾದ ಸವಾಲುಗಳು ಪ್ರಾರಂಭವಾಗುತ್ತದೆ. ಎಲ್ಲಾ ಕ್ಷಣದಲ್ಲಿ ಉತ್ತಮವಾದದ್ದನ್ನು ಯೋಚನೆ ಮಾಡಬೇಕು. ಕಲಿತ ವಿದ್ಯೆಯಿಂದ ಸಮಾಜದಲ್ಲಿ ಮಾನವೀಯ ಮೌಲ್ಯದೊಂದಿಗೆ ಒಳ್ಳೆಯ ವ್ಯಕ್ತಿಯಾಗಿ ಬದುಕಬೇಕು’ ಎಂದರು.

ಪ್ರೊ.ಎಂ.ಕೆ. ಮಂಜುನಾಥ್ ಮಾತನಾಡಿ, ‘ಪ್ರತಿ ಕ್ಷೇತ್ರದಲ್ಲಿ ಸ್ಪರ್ಧೆ ಇರುವುದರಿಂದ, ಅಂಕಗಳಿಗೆ ಉದ್ಯೋಗ ಸಿಗುವುದು ಕಷ್ಟ. ಬುದ್ದಿವಂತಿಕೆ, ಕೌಶಲ, ಸಾಮಾನ್ಯ ಜ್ಞಾನದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸುವ ಅಂಕಗಳಿಂದ ಮಾತ್ರ ಕೆಲಸ ಪಡೆಯಲು ಸಾಧ್ಯ. ಎಲ್ಲರಿಗೂ ಸರ್ಕಾರಿ ಕೆಲಸ ಸಿಗಲು ಸಾಧ್ಯವಿಲ್ಲ. ಖಾಸಗಿ ಉದ್ಯೋಗಕ್ಕೂ ಸಿದ್ಧರಾಗಬೇಕು’ ಎಂದರು.

ಉಪನ್ಯಾಸಕರಾದ ಕುಮಾರ್, ಆಶಾ, ಹರೀಶ್, ಸುನಂದಾ, ಮಹಾಲಕ್ಷ್ಮಿ, ದ್ರಾಕ್ಷಾಯಿಣಿ, ಸತೀಶ್, ಕುಮಾರ್, ಮನು ಮತ್ತು ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-36-1373856992

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.