ಜೇವರ್ಗಿ: ‘ಸತತ ಪರಿಶ್ರಮ ಇಲ್ಲದಿದ್ದರೆ ಯಾವ ಪರೀಕ್ಷೆಯನ್ನು ಗೆಲ್ಲಲು ಸಾಧ್ಯವಿಲ್ಲ’ ಎಂದು ಬಸವಶ್ರೀ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಬಸವರಾಜ ಕೋರೆ ಹೇಳಿದರು.

ಪಟ್ಟಣದ ಬಸವೇಶ್ವರ ಸರ್ಕಲ್ ಹತ್ತಿರದ ಬಸವಶ್ರೀ ಪದವಿ ಕಾಲೇಜಿನಲ್ಲಿ ಬುಧವಾರ ಉಪನ್ಯಾಸಕ ಬಿ.ಎಸ್. ಸಾಲಿಮಠ ಅವರ ರಚಿತ ಇತಿಹಾಸ ಬಿಂಬ ಸ್ಪರ್ಧಾತ್ಮಕ ಪರೀಕ್ಷೆಗಳ ಕೈಪಿಡಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಓದುವಾಗ ಯಾವುದನ್ನೂ ಓದಬೇಕು. ಯಾವುದನ್ನು ಓದಬಾರದು ಎನ್ನುವುದನ್ನು ತಿಳಿದುಕೊಂಡರೆ ಉತ್ತಮ. ಪ್ರತಿದಿನ ಪತ್ರಿಕೆ ಓದಿ. ನಾಲ್ಕೈದು ವರ್ಷಗಳ ಸಾಮಾನ್ಯ ಜ್ಞಾನ ನಿಮಗೆ ತಿಳಿದಿರಲಿ. ಓದಲು ಸಮಯ ಇಟ್ಟುಕೊಂಡು ಕೂತಾಗ ಬೇರೆ ಕೆಲಸಗಳ ಬಗ್ಗೆ ಗಮನ ಕೊಡಬೇಡಿ’ ಎಂದು ಸಲಹೆ ನೀಡಿದರು.

ಲೇಖಕ ಬಿ.ಎಸ್. ಸಾಲಿಮಠ ಮಾತನಾಡಿ, ‘ಓದುವಾಗ ಯಾವಾಗಲೂ ಒಬ್ಬ ವ್ಯಕ್ತಿಯನ್ನು ಮಾದರಿಯನ್ನಾಗಿ ಇಟ್ಟುಕೊಳ್ಳಬೇಕು. ಆವಾಗ ನಿಮಗೆ ಓದಲು ಆಸಕ್ತಿ ಹೆಚ್ಚಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ ಎನ್ನುವುದು ದೂರದ ಪಯಣ ಇದ್ದಂತೆ. ಇಲ್ಲಿ ಪರಿಶ್ರಮ ಮುಖ್ಯ. ಧೈರ್ಯ ಇದ್ದರೆ ಏನನ್ನಾದರೂ ಸಾಧಿಸಬಹುದು’ ಎಂದರು.

ನೂರಂದೇಶ್ವರ ಕಾಲೇಜಿನ ಪ್ರಾಚಾರ್ಯ ವೆಂಕಟರಾವ ಮುಜುಮದಾರ, ನಿಂಬೆಣ್ಣ ರುದ್ರಪ್ಪಗೋಳ, ಉಪನ್ಯಾಸಕರಾದ ಸಂಜಯ ಪಾಟೀಲ, ಹಣಮಂತರಾಯ ಬಿರಾದಾರ, ಆನಂದ ಹರಸೂರ, ದೇವಪ್ಪ, ರಾಜಕುಮಾರ, ವಾಹಬ್, ಸಂತೋಷ, ಅಯ್ಯಣ್ಣ, ಅಶೋಕ ಪೂಜಾರಿ, ಅರ್ಚನಾ, ಪ್ರಿಯಾಂಕಾ ಸೇರಿದಂತೆ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-31-180641640

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.